ಪುಟ:Ekaan'gini.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೪೧ ಆದಷ್ಟು ಹೆಚ್ಚು ದಿನ ಹಾಗೆಯೇ ಇರಲಿ ಎಂದು ಬಯಸಿದರು. ಆದರೆ ಈಗ ಹಾಗಲ್ಲ. ವಿಜಯ ಗಂಡನ ಮನೆಗೆ ಹೊರಟು ಹೋದ ಮೇಲೆ ಹಿರಿಯ ಮಗಳ ಪ್ರಶ್ನೆ ಮುಖ್ಯವಾಗಿ ಮುಂದೆ ನಿಂತಿತು.ವೃದ್ದಾವ್ಯದಲ್ಲಿ ಗಂಡು ಮಕ್ಕಳಿಲ್ಲದೆ ಸಂಕಟ ಪಡುವುದೇನೋ ಸರಿ.ಮಗಳೂ ಮೊಮ್ಮಗಳೂ ಜತೆಯಲ್ಲೇ ಇದ್ದರೆ ಆ ಸಂಕಟ ಕಡಮೆಯಾಗುವುದೆಂಬುದೂ ನಿಜ. ಆದರೆ ಆ ಮಗಳು ಮನೆ ಯಲ್ಲೆ ಇರಲಿ ಎಂದು ಹಾರೈಸಿದ ಕುಂಟ, ಅದು ಹೆಣ್ಣು ಹೆತ್ತವರೆಂದಿಗೂ ಮಾಡಲಾಗದಂತಹ ಮಾಡಬಾರದಂತಹ ಯೋಚನೆ

ಆ ವಿಷಯವಾಗಿ ಸುನಂದೆಯ ತಾಯಿ ಎಷ್ಟೋ ಚಿಂತಿಸಿದರು,ಗೊಣಗಿದರು. ಅಡುಗೆ ಮನೆಯಲ್ಲಿ ಒಬ್ಬರೆ ಇದಾಗ ಅಸ್ಪಷ್ಟ ವಾದ ಮಾತುಗಳು ಆಕೆಯ ಬಾಯಿಂದ ಆಗಾಗ್ಗೆ ಹೊರಬೀಳುತ್ತಿದ್ದವು. "ಏನಮ್ಮಾ ಅದು?” ಎಂದು ಸುನಂದಾ ನಡುಮನೆಯಿಂದ ಕೇಳಿದರೆ,"ಏನಿಲ್ಲ ಕಣೇ.ಇನ್ನು ಅರುಳು ಮರುಳು-ವಯಸ್ಸಾಯ್ತು,” ಎನ್ನುತ್ತಿದ್ದರು. ಆದರೆ ಗಂಡ ಒಬ್ಬರೇ ದೊರೆತಾಗ ಮಾತ್ರ, ಹೃದಯದ ದುಗುಡನನ್ನು ಹರಿಯಬಿಡುತ್ತಿದ್ದರು,ಆಗ ಕೃಷ್ಣಪ್ಪನವರು ಕೊಡುತಿದ್ದ ಭರವಸೆಯೊಂದೇ: “ತಾಳು ದೇವರು ಬಿಟ್ಟು ಹಾಕಲಾರ. ಎಲ್ಲಾ ಸರಿಹೋಗುತ್ತೆ, ಸ್ವಲ್ಪ ತಾಳು."

ಬೆಂಗಳೂರಿಗೆ ಹೊರಡುವ ನಿರ್ಧಾರ ಮಾಡಿದ ಬಳಿಕ ಕೃಷ್ಣಪ್ಪನವರು ಅಡುಗೆ ಮನೆಯಲ್ಲಿದ್ದ ಒಡತಿಯ ಬಳಿಗೆ ಹೋದರೂ. ಆವ್ತಾಲೋಚನೆ ಇದ್ದಾ ಪೀಠಿಕೆಯಾಗಿ ಅವರು ಕೇಳುತಿದ್ದ ಪ್ರಶ್ನೆಯೊಂದಿತ್ತು: 'ಏನ್ಮಾಡ್ತಿಯಾ?"ಅಂತ.ಆದರೆ ಈ ದಿನ ಅವರಿಂದ ಆ ಪ್ರಶ್ನೆ ಬರಲಿಲ್ಲ.ಕುಳಿತವರು ಒಂದು ಕ್ಷಣ ಮೌನವಾಗಿದ್ದು ಬಳಿಕ ಹೇಳಿದ:

"ಬುಧವಾರ ಬೆ೦ಗಳೂರಿಗೆ ಹೋಗ್ಬಿಟ್ಟು ಬರ್ತೀನಿ."

ಅ ವ ರ ಪತ್ನಿ ಯಾವ ಪ್ರತಿಕ್ರಿಯೆಯನ್ನೂ ತೋರಲಿಲ್ಲ ಕೃಷ್ಣಪ್ಪನವರೇ ಆ೦ಡರು: "ಕೇಳಿಸ್ತೆ?" ಕ್ಷೀಣವಾದ ಸ್ವರದಿಂದ ಉತ್ತರ ಬಂತು: "ಹೂಂ."