ಪುಟ:Mysore-University-Encyclopaedia-Vol-1-Part-1.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನಕ-ತನೂಜರ ಸಂಬಂಧ ಛಾಯಾಚಿತ್ರಾವಾಗಿ ಸುಳಿದಾಡಬಹುದು. ತೃತೀಯ ಆಕೃತಿಯಾಗಿ ಎಲಕ್ಕೂ ಮಿಗಿಲಾದ ಅಂಗ ಮನುಜಪಾತ್ರ ವಗ್ ನಾಯಕನೊ ಇತರ ಪಾತ್ರವೊ ಮಟ್ಟಮದಲಾಗಿ ಅದು ಒಂದು ಊರಿನಲ್ಲಿ. ಒಬ್ಬ ದಂಪತಿಗಳಿಂದ ಜನಿಸಿ,ಒಂದು ನಾಮಧೇಯವನ್ನು ಪಡೆದು, ಬೆಳೆದು, ಒಂದು ವ್ಯಕ್ತಿವಚ ಸ್ಸಿನಿಂದ ಶೋಭಿಸುವ ಪುರು ಇದು ಅದರ ಮೊದಲನೆಯ ಆಳ. ತರುವಾಯ, ಅದರ ವೃತ್ತಿ ಹವ್ಯಾಸ ಆಕಾಂಕ್ಶೆಗಳಿಗೆ ಅನುಗುಣವಾದ ಚಲನೆವಲನೆ, ಮಾತುಗಾರಿಕೆ, ಸ್ವಭಾವ ಪ್ರಕಾಶನವೆಲ್ಲವೂ ಕೂಡಿಕೊಂಡು ಎರಡನೆಯ ಆಳ ಎನ್ನಿಸಿಕೊಳ್ಳೂತ್ತದೆ. ಮೊರನೆಯಾ ಆಳ, ಆ ಪಾತ್ರಾದ ಅತ್ಯಂತ ಒಳಗಡೆಯಿಂದ ಆಗಾಗ ಇಣುಕಿ ನೋಡುವ ಸಾಮಾನ್ಯ ಮಾನವಧಮ.

ಕೆಲವು ವಿಮಶಕರು, ಹಿನ್ನೆಲೆ ವ್ಯಾಪ್ತಿ ಅಥವಾ ಆಳ ಎನ್ನುವುದನ್ನು ಮೊರಕ್ಕೇ ಪರಿಮಿತ ಮಾಡಬೇಕದ್ದಿಲ್ಲ. ನಾಲ್ಕನೆಯ ಅತೀವತತ್ವವನ್ನೂ ಒಡಗೂಡಿಸಬೇಕು ಎಂದಿದ್ದಾರೆ. ಅವರ ಅಭಿಮತದಂತೆ, ದೇವಗುಡಿಯ ಕಟ್ಟಡ ಆರಾಧನೆ ಭಕ್ತಿಗಳ ನಾನಾ ರೂಪಗಳನ್ನೂ ಮೀರಿ ಮುಂದೆ ಹೋಗಿ ಮನು ಅಮರವಾದ ಹಂಬಲಿಕೆಗೆ ಸಂಜ್ನಿಯಾಗಬಹುದು. ಹಾಗೆಯೇ ಒಬ್ಬ ನರನ ಒಂದು ಓಡಾಟ ಇಡೀ ವಿಶ್ವದ ಗಡಿಬಿಡಿಗೆ ಸಾಕ್ಸ್ಯವಾಗಬಹುದು, ಒಬ್ಬ ಪುರು ಸಮಸ್ತ ಮಾನವರ ಪ್ರತಿನಿಧಿಯಾಗಿ ನಿಲ್ಲಬಹುದು.

ಅಂತರವನ್ನು ಅಳೆಯುವ ಕೈಯಂತ್ರ:ಅಂತರಗಳನ್ನು ಅಳೆಯುವುದಕ್ಕಾಗಿ ಉಪಯೋಗಿಸುವ ಚಿಕ್ಕ ದುಬಿ ನಿನಿಂದ ಕೂಡಿದ ಉಪಕರಣ ಸಾಮಾನ್ಯವಾಗಿ ೪-೬ ಉದ್ದವಿದ್ದು ಆಕಾರದಲ್ಲಿ ಕೊಳವೆಯಂತಿರುತ್ತದೆ. ಮೇಲೆ ಒಂದು ರಸಮಟ್ಟವಿದ್ದು, ರಸಗುಳ್ಳೆಯ ಓಡಾಟ ಕೊಳವೆಯಲ್ಲಿರುವ ಕನ್ನಡಿಯಲ್ಲಿ ಪ್ರತಿಬಿಂಬಿತವಾಗಿ ಯಾವ ವಸ್ತುವಿನ ಮಟ್ಟವನ್ನು ವೀಕ್ಶಿಸಲು ಪ್ರಯತ್ನಿಸುತ್ತೇವೆಯೋ ಆ ವಸ್ತುವಿಗಾಗಿ ನೇರವಾಗಿ ಗೋಚರವಾಗುವುದು.

ಇದು ಗಾತ್ರದಲ್ಲಿ ಕಿರಿದಾಗಿದ್ದು ಬೇರೊಂದು ಆಶ್ರಯವಿಲ್ಲದಂತೆ ಕೈಯಲ್ಲಿ ಹಿಡಿದು ಉಪಯೋಗಿಸಲನುಕೂಲವಗಿದೆ. ಅಂತರದ ವ್ಯತ್ಯಾಸಗಳನ್ನು ಅತಿ ಶೀಘ್ರದಲ್ಲಿ ಕಂಡುಹಿಡಿಯಲು ಇದಕ್ಕಿಂತ ಸುಲಭವಾದ ಉಪಕರಣ ಮತ್ತಾವುದೂ ಇಲ್ಲ. ಇಂಥ ಉಪಕರಣಗಳಲ್ಲಿ ಆಬ್ ನೇ ಕ್ಲಿನೋಮೀಟರ್ ಹೆಚ್ಚು ಜನಪ್ರಿಯವಗಿದೆ. ಅಂತರವಲೋಕನ: ಒಬ್ಬ ವ್ಯಕ್ತಿಯ ಪ್ರಜನುಭವದ ಸ್ವಯಂ ವೀಕ್ಶಣೆ ಅದು ಒಂದು ಒಳನೋಟ; ತನ್ನ ಪ್ರಬುದ್ಧ ಚೇತನದಲ್ಲಿ ನಡೆಯುತ್ತಿರುವ ಆಲೋಚನೆಗಳು, ಭಾವನೆಗಳು ಮತ್ತು ಇಚ್ಚೆಗಳಲ್ಲದೆ ತಾನು ಯಾವುದನ್ನು ನೋಡುತ್ತಾನೆ, ಕೇಳುತ್ತಾನೆ ಅಥವಾ ಕಲ್ಪಿಸಿಕೊಳ್ಳುತ್ತಾನೆ ಎಂಬುಗಳ ಬಗ್ಗೆ, ಒಬ್ಬ ವ್ಯಕ್ತಿ ವಿವರಗಳನ್ನು ನೀಡುವ ವಿಧಾನ. ಅಂದರೆ, ಒಬ್ಬ ವ್ಯಕ್ತಿ ತನ್ನ ಪ್ರಬುದ್ಧ ಪ್ರಜ್ನಾ ಪ್ರವಾಹದ ಮೂಲಾಂಶೆಗಳ ವೈಲಕ್ಯಣಗಳಲ್ಲಿರುವ ಪರಸ್ಪರ ಹೋಲಿಕೆ ವ್ಯತ್ಯಾಸಗಳನ್ನು ಗುರುತಿಸಿ, ಅವುಗಳನ್ನು ವಿಂಗಡಿಸಿ ವಿವರಿಸುವ ಕ್ರಮ