ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SECTION IV. LOSS OF ADVANTAGE. ನಾ ಶ ವು ,

  • -
  • ಒಂದು ಮೊಸಳೆ ಒಂದು ಕೋತಿಯೊಂದಿಗೆ ಸ್ನೇಹಮಾಡಿ ಮೋಸ ಹೋದಹಾಗೆ, ಮೂಢನಾದವನು ತನಗೆ ಸಿಕ್ಕಿದ ಅರ್ಥವನ್ನು ಇತ ಕರ ಒಳ್ಳೆಯ ಮಾತಿಗೆ ಮೋಸಹೋಗಿ ಅಜ್ಞಾನದಿಂದ ಬಿಟ್ಟುಬಿಡುವನು ' ಎಂದು ವಿಷ್ಣು ಶರ್ಮನು ಹೇಳಲಾಗಿ, ರಾಜಕುಮಾರರು ಕೇಳಿ,-ಮೊಸ ಳಗೂ ಕೋತಿಗೂ ಹೇಗೆ ಸ್ನೇಹವಾಯಿತು ? ಮೊಸಳೆ ಹೇಗೆ ಮೋಸ ಹೋಯಿತು ? ನಮಗೆ ವಿಶದವಾಗಿ ಹೇಳು-ಎನಲು, ವಿಷ್ಣು ಶರ್ಮ

ನಿಂತೆಂದನು. The Crocodile and the Monkey. ಸಮುದ್ರ ತೀರದಲ್ಲಿ ಬಲವರ್ಧನನೆಂಬ ಹೆಸರುಳ್ಳ ಒಂದು ಕೋತಿ ಯುಂಟು. ಅದು ಮುದಿಯಾದುದರಿಂದ ಮತ್ತೊಂದು ವಾನರಪತಿಯಿಂದ ಹೊರಡಿಸಲ್ಪಟ್ಟು, ನಾಚಿಕೆಯಿಂದ ಆ ಪ್ರಾಂತ್ಯವನ್ನು ಬಿಟ್ಟು ಹೋ ಗುತ್ತಾ, ಒಂದು ನದಿಯ ತೀರದಲ್ಲಿ-ಪುಧುಗರ್ಭವೆಂಬ ಮಾವಿನಮರವು ಫಲಭರಿತವಾಗಿರಲು ನೋಡಿ ಅಲ್ಲಿ ನಿಂತು, ಅದರ ಹಣ ಗಳಿಂದ ತನ್ನ ಶರೀರವನ್ನು ಪೋಷಿಸಿಕೊಳ್ಳುತ್ತಾ ಇದ್ದಿತು. ಹೀಗಿರಲಾಗಿ ಒಂದು ದಿನ ಆ ಮಾವಿನ ಮರದಿಂದ ಒಂದು ಹಣ್ಣು ನೀರಿನಲ್ಲಿ ಬೀಳಲು, ಅದರಿಂದ ಮನೋಹರವಾದ ಧ್ವನಿಯೊಂದು ಉಂಟಾಯಿತು. ಆ ಶಬ್ದವನ್ನು ಕೇಳಿ ಕೂತಿಯು ಸಹಜವಾದ ಚಪಲಕ್ಷದಿಂದ ಮಾವಿನಹಣ್ಣು ನೀರಿನಲ್ಲಿ