ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿವಿಗ್ರಹವು 10) ಅದೇಪ್ರಕಾರ ಕಾಗೆಗಳಿಗೂ ಗೂಗೆಗಳಿಗೂ ಮುಂಚೆ ನಾಗೆ ಪ್ರದಿಂದ ಪ್ರಬಲವಿರೋಧವು ಸಂಭವಿಸಿತು. ಅದು ಹೇಗೆಂದರೆ : ಒಂದು ಸಮಯದಲ್ಲಿ ಭೂಮಿಯಲ್ಲಿರುವ ಪಕ್ಷಿಗಳಲ್ಲಾ ತಮ್ಮನ್ನು ರಕ್ಷಿಸುವುದ ಕಾಗಿ ಒಬ್ಬನು ಅರಸಾಗಿ ಇರಬೇಕೆಂದು ಉಲೂಕಪ್ರೇಪ್ಪನಿಗೆ ಪಟ್ಟವನ್ನು ಕಟ್ಟುವುದಕ್ಕೆ ಪ್ರಯತ್ನ ಮಾಡುತ್ತಿರಲಾಗಿ, ಒಂದು ಮುದಿ ಕಾಗೆಯು ಪಕ್ಷಿಸಮೂಹವನ್ನು ನೋಡಿ ವಿಕಾರ ರೂಪವುಳುದಾಗಿ ದಿನಾಂಧವಾದ ಗೂಗೆಯನ್ನು ಪಕ್ಷಿರಾಜನನ್ನಾಗಿ ನೀವು ಮಾಡಬೇಕಾದುದೇನು ? ಇದಕ್ಕೆ ಪಟ್ಟವನ್ನು ಕಟ್ಟುವುದರಿಂದ ನಮಗೇನು ಕಾಪು ಉಂಟಾದೀತು? ಅರಸನು ಇಲ್ಲದೆಯಿದ್ದರೂ ಅರಸನೊಬ್ಬನುಂಟೆಂದು ಹೇಳಿ ಕಾರವನ್ನು ನಡಿಸಿಕೊಳ್ಳಕೂಡದೇ ? ಪೂರ್ವದಲ್ಲಿ ಚಂದ್ರನು ಅರಸೆಂದು ಹೇಳಿ ಕೊಂಡು ಮೊಲಗಳು ಸುಖಿಸಲಿಲ್ಲವೆ ?-ಎಂದು ಹೇಳಿತು. ( ಅದು ಹೇಗೆ ' ಎಂದು ಪಕ್ಷಿಗಳು ಕೇಳಲು, ಕಾಗೆ ಹೇಳುತ್ತದೆ. The Elephant and the Hare. ಪೂರ್ವದಲ್ಲಿ ಒಂದಾನೊಂದು ಕಾಲದಲ್ಲಿ ಹನ್ನೆರಡು ಸಂವತ್ಸರ ಅನಾ ವೃಷ್ಟಿ ಬಂದುದರಿಂದ ಒಂದು ಅಡವಿಯಲ್ಲಿ ಗಜಸಮೂಹಗಳು ತಮ್ಮ ಯಧಪತಿಯನ್ನು ನೋಡಿ--ಸ್ವಾಮಿಾ, ನಮಗೇನು ಉಪಾಯ ? ಇಲ್ಲಿ ಕ್ಷುದ್ರ ಜಂತುಗಳಿಗೆ ಸ್ನಾನಮಾನಕ್ಕೆ ತಕ್ಕ ಸರಸ್ಸು ಇದೆ. ನಮ್ಮ ಸ್ನಾನಮಾನಗಳಿಗೆ ತಕ್ಕುದಿಲ್ಲ ಎಂದು ಹೇಳಲು, ಸಂಗನು ನೀರಿರುವ ಸ್ಥಳಗಳನ್ನು ಹುಡುಕಿ ಬರುವುದಕ್ಕಾಗಿ ವೇಗವುಳ್ಳ ಆನೆಗಳನ್ನು ಪ್ರತಿ ದಿಕ್ಕಿಗೂ ಕಳುಹಿಸಿತು, ಅವುಗಳಲ್ಲಿ ಒಂದಾನೆದು ಹುಡುಕಿ ನೋಡಿ ಬಂದು-ಅಯ್ಯಾ, ಇಲ್ಲಿಗೆ ಸಮೀಪದಲ್ಲಿ ಸ್ವಚ್ಛವಾದ ನೀರು ದೊಡ್ಡ ಸರಸ್ಸು ಇದೆ ಎಂದು ಹೇಳಿತು. ಅದನ್ನು ಕೇಳಿ ಗಜರಾ ಜನು ಆನೆಗಳನ್ನು ಸಂಗಡ ಕರೆದುಕೊಂಡು ಮಹಾಸಂತೋಷದಿಂದ ತೊರೆಯಾಗಿ ಕೊಳದ ಹತ್ತಿರಕ್ಕೆ ಹೋಗಲು, ಆನೆಗಳು ನಡೆವಾಗ ಅವು ಗಳ ಕಾಲಕೆಳಗೆ ಸಿಕ್ಕಿ ನಲುಗಿ ಹಲವು ಮೊಲಗಳು ಸತ್ತುವು. ತರು ವಾಯ ಶಿಲೀಮುಖನೆಂಬ ಶಶಕರಾಜನು ತನ್ನ ಮಂತ್ರಿಗಳನ್ನೆಲ್ಲಾ