ಪುಟ:ಬತ್ತೀಸಪುತ್ತಳಿ ಕಥೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ - ಬ ಕರ್ಣಾಟಕ ಕಾವ್ಯ ಕಲಾನಿಧಿ, ಳು-ನಾನು ದೇವತೆಯ ಅಲ್ಲ , ದೈವವೂ ಅಲ್ಲ, ಕಾಮರೂಪಿಯೂ ಅಲ್ಲ, ಈ ಪಟ್ಟಣದ ರಾಯನ ಕುಮಾರ್ತಿ, ಎನ್ನಲಾಗಿ;-ನೀನು ಒಬ್ಬಳೇ ಇರು ವುದಕ್ಕೆ ಕಾರಣವೇನು ? ಎಂದು ಕೇಳಲಾಗಿ, ಅವಳು-ಎಲೈ ವೀರನೇ ! ಈ ಪುರದ ರಾಯನ ಒಬ್ಬ ಕಾಳರಾಕ್ಷಸನೆಂಬವನು ಬಂದು ಕೊಂದನು. ಅವನು ಈ ಪಟ್ಟಣದ ಪರಿವಾರ ಜನಂಗಳನ್ನು ತನ್ನ ಬಾಯೊಳಗಿರಿಸಿಕೊಂ ಡು, ದಿನಚರಿಯಲ್ಲೂ ಬೇಂಟೆಗೆ ಹೋಗಿ, ಬೇcತೀರಿಸಿಕೊಂಡು ಸಾಯಂ ಕಾಲದ ವೇಳೆಗೆ ಬಂದು, ತನ್ನ ಬಾಯಿಂದ ಎಲ್ಲರನ್ನು ಉಗುಳಿ, ಅವರವರ ಮನೆಗೆ ಕಳುಹಿಸಿ, ತಾನೀಯುಪ್ಪರಿಗೆಯ ಮೇಲೆ ಬಂದು, ರಾತ್ರೆಯಲ್ಲಿ ನನ್ನ ಕೂಡೆ ಸರಸವಾಡುತ್ತ ಇದ್ದಾನೆ. ಎಂದಿನಂತೆ ಈಗ ಅವನು ಬೇಂಟೆಗೆ ಹೋ ಗಿ ಇದ್ದಾನೆ. ಈಪ್ರಕಾರ ಅವನಿಗೆ ಸಿಕ್ಕಿರು,ಎಂದು ವಿರಂಚಿ ಎನ್ನ ಪಣೆಯಲ್ಲಿ ಬರೆಯಬಹುದೆ ಎಂದು ಅನೇಕವಾಗಿ ರೋದಿಸುವುದಂ ಕಂಡು ಇಂತೆಂದ ನು :-ಎಲೆ ನಿಯೇ, ಈ ರಾತ್ರೆ ರಾಕ್ಷಸ ಬರುತ್ತಲೆ ಅವನ ಬಹಳ ಉಪಚರಿಸಿ-ನಿನ್ನ ಪ} ® ಎಲ್ಲಿ ಇದೆ ಎಂದು ಕೇಳಿ ತಿಳಿದು ಹೇಳಿದರೆ ಅವನ ಕೊಂದು ನಿನ್ನ ಕರೆದುಕೊಂಡು ಹೋಗುತ್ತೇನೆ ಎಂದು ಅವಳಿಗೆ ಹೇಳಿದು ದಕ್ಕೆ ಅವಳು-ನೀನಾರೆಂದು ಕೇಳಲು; ಅದಕ್ಕೆ ತನ್ನ ವೃತ್ತಾಂತವೆಲ್ಲ ಹೇಳ ಲಾಗಿ; ಅವಳು ಸಂತೋಷಪಟ್ಟು, ಹೇಳಿದ ಮಾತಿಗೆ ಒಡಂಬಟ್ಟು, ಕೇಳಿ ಹೇ ಳುವೆನೆಂದು, ಆಬಳಿಕ-ರಾಕ್ಷಸ ಬರುವ ವೇಳೆ ಯಾಯಿತು, ಇನ್ನು ಇರಬೇ ಚವೆಂದು ನುಡಿಯಲಾಗಿ ; ವಿಕ ಮನು ಊರ ಹೊಂಗೆ ಬಂದು, ಒಂದು ಗುಡಿ ಯಲ್ಲಿ ಆ ರಾತ್ರಿ ಇದ್ದನು. ಆದಿನ ಸಾಯಂಕಾಲಕ್ಕೆ ರಾಕ್ಷಸ ಊರಿಗೆ ಬಂದು ಬಾಯಿಂದೆಲ್ಲರನ್ನೂ ಉಗುಳಿ ಬಿಟ್ಟು, ಉಪ್ಪರಿಗೆಯನೇಕ್, ಮಡ್ಡಿ ಮಾಂಸ ಭಕ್ಷಿಸಿ ಬಂದ ಸಂತೋಷದಿಂದಿರುವಲ್ಲಿ -ಆ ಸಿ ಯು ಸವಿಾಪಕ್ಕೆ ಬಂದು ಕುಳಿತುಕೊಂಡು, ಕೈಕಾಲುಮೆಯ್ಯನೊತ್ತು ಉಪಚರಿಸುತ್ತ ಖಿನ್ನಳಾಗಿ ಇರುವಳಂ ಕಂಡು ಇಂತೆಂದನು:-ಎಲ್ ಸಿಯೇ ! ನೀನು ಚಿಂತೆಮಾಡುವುದೇನು ? ಎನ್ನಲಾಗಿ; ಅವಳಿಂತೆಂದಳು :-ಎಲೈ ಮಹಾಪುರು ಪನೇ ! ನಾನು ಎಲ್ಲರನ್ನೂ ಕಳೆದು ನಿನ್ನವಳಾದುದ°ಂದ ಸರ್ವಕಾಲವೂ ನಿನಗೆ ನಾ ನಂಬಿರಬೇಕೆಂದು ಇರುವ ಕಾರಣ ನಿನ್ನ ಆಯುಷ್ಯವೆಷ್ಟಿದೆ, ನಿನ್ನ ಪಾದ ನೆಲೆ ಎಲ್ಲಿ ಎಂಬುದ ಹೇಳಬೇಕು. ಅದೇತಕ್ಕೆ ಎಂದರೆ, ನೀನು ಅರಣ್ಯ