ಪುಟ:ಬತ್ತೀಸಪುತ್ತಳಿ ಕಥೆ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ho ಆ | ಕರ್ಣಾಟಕ ಕಾವ್ಯಕಲಾನಿಧಿ. ಕೊಂಡು ನೋಡಿ, ಸಮಸ್ಯೆಯ ಪೂರ್ತಿಮಾಡಿ ಬರೆದುಕೊಡಲಾಗಿ; ಆ ವೋಲೆ ಯ ತಂದು ರಾಯನಿಗೆ ಕೊಡಲಾಗಿ; ರಾಯ ನೋಡಿ ಮಗಳ ಕರೆಸಿ, ಓಲೆ ಯ ಕೊಡಲು; ಅವಳು ನೋಡಿ ಕೊಂಡು-ಈ ಗುತು ನಿಜವೆಂದ ಮಾತ ರಾಯ ಕೇಳಿ, ಆಕ್ಷಣ ಅಶ್ರುತಿಮಂಡಲನ ಕರೆತಂದು, ಇಂಥವ ಮಗಳ ಪತಿಯಾಗಬಹುದೆಂದು ಸಂತಪವ ಮಾಡಿಕೊಂಡು, ಅಳಿಯನ ಮಗ ಳ ಅರಮನೆಗೆ ಕಳುಹಿಸಿ, ಬಳಿಕ ನಿಂಹಳ ದ್ವಿಪದ ರಸಿನ ಮಗನಿಗೆ ಮತ್ತೊಬ್ಬ ಮಗಳ ಮದುವೆಯ ಮಾಡಿಸಿದನು- ಎಂದ ಮಾತಿಗೆ ರತಿರೂಪಿಣಿಯೆಂಬ ಪುತಳಿ ಹಾಸಿಗೆಯು ನಗುತ್ತ ಹೇಳಿದ ಉಪಕಥೆ:- ಕೇಳ್ಳೆಯ್ಯ ಚಿತ್ರಶರ್ಮನೇ ? ನಮ್ಮ ವಿಕ್ರಮಾದಿತ್ಯರಾಯನು ಈ ರಾಜ್ಯವ ಪಾಲಿಸುವ ವೇಳೆಯಲ್ಲಿ ಒಂದುದಿನ ಒಬ್ಬ ಬೇಟೆಗಾಲ ಯಮು ನಾನದಿಗೆ ಹೋಗಿ ಮೂಾಸಿನ ಬೇಂಟೆಯಾಡುತಿರುವಲ್ಲಿ ಒಂದು ಮೊಸಳೆ ಅವನ ತಿನ್ನುವುದಕ್ಕೆ ಯತ್ನಿ ಕರಿಸಿ ಇರುವುದ ಕಂಡವರು ಬಂದು ಆ ಬೇಡನ ಹೆಂಡತಿಗೆ ಹೇಳಲಾಗಿ ; ಅವಳು ಓಡಿಬಂದು ರಾಯನಿಗೆ ಹೇಳಿದ ಕಾರಣ, ರಾಯ ತೆಗೆದುಕೊಳ್ಳುವ 1ಔಪಾಸನವ' ಬಿಟ್ಟು ಶೀತಾಳ ಪತ್ರವ ತೆಗೆದುಕೊಂಡು ತನ್ನ ಮೊಸಳ ಬಡಿದೀತೆಂಬ ಭೀತಿಯಿಲ್ಲದೆ ನೀರಿಗಿಳಿದು ಆ ಮೊಸಳೆಯ ಬಾಯ ಸೀಳಿ, ಆ ಬೇಟೆಗಾರನ ಬಿಡಿಸಲಾಗಿ; ಅವ ಶರಣಾ ಗತನಾಗಿ-ಎಲೈ ಮಹಾರಾಯ : ನಿಮ್ಮಿಂದ ನಾನು ಜೀವದಿಂದುಳಿದೆನು ಎಂದು ಸಾಷ್ಟಾಂಗವಾಗಿ ನಮಿಸಲಾಗಿ; ರಾಯ ಅವನಿಗೆ ಕೊಟದ ವ್ಯವ ಕೊಟ್ಟು ಮನ್ನಿಸಿ, ಆಬಳಿಕ ಅವನ ನಿನೇನಾದರೂ ಅತಿಶಯವ ಕಂಡು ದುಂಟೆ ? ಎಂದು ಕೇಳಲಾಗಿ ; ಅವನಿಂತೆಂದನು -ಇಲ್ಲಿಗೆ ಬಹುದೂರ ದಲ್ಲಿ ಚಂಡಿಕಾದೇವಿಯ ಗುಡಿಯ ಬಳಿಯಲ್ಲಿ ಇರುವ ಕೊಳದ ಗಟ್ಟದೆ ಳೊಬ್ಬ ಬ್ರಾಹ್ಮಣ ಮುನಿ ಇಷ್ಟಾರ್ಥವು ಪಡೆಯಬೇಕೆಂದು ಬಹುಕಾಲ ದಿಂದ ತಪಸ್ಸು ಮಾಡಿದಾಗ ಆ ದೇವಿಯ ವರವಿಲ್ಲದಿರುವುದು ಕಂಡು ಇರುವೆನೆಂದು ಹೇಳಿದುದ ಕೇಳಿ, ಅದ ನೋಡಬೇಕೆಂದು ರಾಯ ಅವನ ಕರೆದುಕೊಂಡು, ಆ ಕ್ಷಣವೇ ಖೇಚರದಲ್ಲಿ ಅಲ್ಲಿಗೆ ಹೋಗಿ, ಆ ದೇವಿಯ ಪೋಡಶೋಪಚಾರದಿಂದ ಪೂಜಿಸಿ ನಮಿಸಲಾಗಿ; ಆ ದೇವಿಯು ಪ್ರಸನ್ನ ಟ ಪಾ-1, ಆಪೋಶನವ,