ಪುಟ:ಬತ್ತೀಸಪುತ್ತಳಿ ಕಥೆ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

W ಕರ್ನಾಟಕ ಕಾದ್ಯಕಲಾನಿಧಿ, ಮೇಲೆ ಎತ್ತಿ ಹಾಕಿ, ಜೀವ ಕೊಂದು, ತನ್ನ ಹಿತ್ತಿಲ ಬಳಿಯಲ್ಲಿ, ಅಹಂ ವನ್ನು ತಿಪ್ಪೆಯಲ್ಲಿ ಸುತ್ತಿರಿಸಿ, ಆಬಳಿಕ ಹಲಗೆಯಲ್ಲಿ ಬರೆದಿದ್ದ ಬಾಲೇ ” ಎಂಬ ಅಕ್ಷರವನ್ನು ತೆಗೆದು ರಾರ್ಹ' ಎನ್ನುವ ಅಕ್ಷರ ಬರೆದುಕೊಂಡು ಇರಿಸಿದಳು. ಅದುಕಾರಣ ಸೂಳೆಯರು, ಮುಂದೆ ಮೋಹದಿಂದ ಬೆರಸು ವವರ ಮನಸ್ಸಿಗೆ ತಕ್ಕ ಹಾಗೆ ಇರುವರು; ಕೊನೆಗೆ ಕೊರಲ ಹರಿವರು-ಎಂಬ ನಿತಿಕ್ಷಣವು ವೇಶಿಯರಿಗುಂಟಾದುದರಿಂದ ಕಾಳಿದಾಸನ ಕೊಂದು, ಹಲಗೆ ಯಂ ತಂದು, ರಾಯನಿಗೆ ಕಡಲಾಗಿ ; ರಾಯನು ಅದಂ ಓದಿನೋಡಿಕಂ ಡು, . - ಪುರುಷನಿಗೆ ಹೇಳಿದಂತಿದೆ. ಹಾಗೆ ಹೊಲಸು ಹೊಡೆಯುತ್ತಿದೆ. ಕಾಳಿದಾಸ ಹೇಳಿ ಬರೆದುದ ತಿದ್ದಿ ಬರೆದು ತಂದೆಯೋ ? ಕಾಳಿದಾಸನ ಕಂ ದೆಯೋ ? ಜೀವದಲ್ಲಿದ್ದಾನೆಯೋ ? ನಿಜವಾಗಿ ಹೇಳು, ಎಂದು ರಾಯನು ಗಜನಿ ಕೇಳಲಾಗಿ ; ಅವಳಿಗೆ ಕಂಸನ ಕಟ್ಟಿ ಅಡ್ಡಬಿದ್ದು, ನನ್ನ ಅಪ ರಾಧ ಪಾಲಿಸಬೇಕೆಂದು ಕೇಳಿಕೊಂಡು-ಕೊಂದೆನು ಎನ್ನಲಾಗಿ ; ರಾಯನು ಈ೪-ಶಿವಶಿವಾ ನಿನ್ನಂಥ ಬ್ರಹ್ಮಹತ್ಯವ ಮಾಡಬಹುದೇ : ಕಾಳಿದಾಸನು ಹೊದನೆ ! ನನ್ನ ದೇಹ ಏತಕ್ಕೆ? ಆತನು ಸತ್ತ ಬಳಿಕ ಈದೊರೆತನ ವೇಕೆ?-ಎಂದು ಆಕ್ಷಣವೇ ಅಗ್ನಿಕೊಂಡವಂ ತೆಗೆಸಿ, ಅದಕಲ್ಲಿ ಬೆಂಕಿ ಹಾಕಿಸಿ, ರಾಯನು ಶುಚಿರ್ಭೂತನಾಗಿ ಅಗ್ನಿಪ್ರವೇಶಕ್ಕೆ ಹೊರಡುವುದನ್ನು ಪ್ರಧಾನರು ಮುಂತಾಗಿ ಎಲ್ಲರೂ ಕಂಡು-ಎಲೈ ರಾಜನೇ ಒಬ್ಬ ಕವಿ ಗೋಸ್ಕರ ನೀನು ಅಗ್ನಿಗೆ ಬೀಳುವುದು ಟೇ' ಎಂದು ನಾನಾತಕದಲ್ಲಿ ಒಡಂ ಬಡಿಸಿ, ತಿಳಿಯ ಹೇಳಿದರೂ ಕೇಳದೆ, ರಾಯನು ಅನೇಕ ದಾನ ಧರ್ಮಗ ಳನ್ನು ಮಾಡಿ, ಅಗ್ನಿಕೊಂಡವನ್ನು ಪ್ರದಕ್ಷಿಣ ಬಂದು, ಸಾಕ್ಷಿಯ ಕಲ್ಲ ಮೇಲೆ ನಿಂತು, ಜನ್ಮ ಜನ್ಮಾಂತರಕ್ಕೂ ಕಾಳಿದಾಸನ ಸ್ನೇಹವ ಕೊಡು ಪರ ಶಿವನೇ! ಎಂದು ನುಡಿದು, ಬೀಳುವ ವೇಳೆಯಲ್ಲಿ ಪರಮೇಶ್ವರನು ಪ್ರಸ ನ್ನನಾಗಿ-ಎಲೈ ರಾಯನೆ : ನಿನ್ನ ಮನೋನಿಶ್ಚಯಕ್ಕೆ ಮೆಚ್ಚೆದೆನು. ನಿನಗೆ ಬೇಕಾದ ವರವನ್ನು ಬೇಡಿಕೊ ಎನ್ನಲಾಗಿ; ರಾಯನು-ಎಲೈ ಸ್ವಾಮಿಯ ! ನನಗೆ ಕಾಳಿದಾಸನ ಜೀವನ ಪಾಲಿಸು ಎನ್ನಲಾಗಿ ; ಪರಮೇಶ್ವರನು ಕಾಳಿ ದಾಸನ ಜೀವನ ಕೊಟ್ಟು ಮಾಯವಾದನು. ಆಬಳಿಕ ಕಾಳಿದಾಸ ಎದ್ದು ರಾಯನ ಬಳಗೆ ಬರಲಾಗಿ, ರಾಯನು ಕಂಡು ಆಲಿಂಗನವ ಮಾಡಿಕೊಂಡು,