ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

අවුරත් ಶ್ರೀಮದ್ಭಾಗವತವು [ಆಧ್ಯಾ, ೮. ಪಕ್ಷದಲ್ಲಿ, ಆ ಮನೆಯವರ ಮೇಲಿನ ಕೋಪದಿಂದ, ತೊಟ್ಟಿಲಲ್ಲಿ ಮಲಗಿ ನಿದ್ರೆ ಮಾಡುತ್ತಿರುವ ಮಕ್ಕಳನ್ನು ಜಿಗುಟಿ, ಅವುಗಳನ್ನು ಬಲವಾಗಿ ಅಳಿಸಿ ಹೊರಟುಹೋಗುವನು, ಮತ್ತು ತನ್ನ ಕೈಗೆ ಎಟಕದ ಹಾಗೆ ಎತ್ತರದಲ್ಲಿ ರುವ ಪದರಗಳನ್ನೂ ಕೊಡ, ಅಪ್ಲಿರುವ ಕಲುಮಣೆ ಮುಂತಾದ ಪೀಠಗಳನ್ನು ಒಂದರ ಮೇಲೊಂದರಂತೆ ಜೋಡಿಸಿಟ್ಟುಕೊಂಡೋ, ಇಲ್ಲವೇ, ಒರಳುಗಳನ್ನು ಮಗುಚಿಟ್ಟುಕೊಂಡೋ, ಅಥವ ಬೇರೆ ಯಾವ ಉಪಾಯದಿಂದಲೆ ಅದನ್ನು ಕೈಗೆ ಸಿಕ್ಕುವ ಹಾಗೆ ಮಾಡಿಕೊ ಳ್ಳುವನು. ಊರೆಯಲ್ಲಿ ತೂಗುಹಾಕಿರುವ ಹಾಲುಮೊಸರಿನ ಮಡಕಗ ಳನ್ನು ಕೈಗೆತ್ತಿ ಕುಡಿಯುವುದಕ್ಕೆ ಸಾಧ್ಯವಿಲ್ಲದಿದ್ದಾಗ, ಪಾತ್ರೆಯ ಕೆಳಗೆ ರಂಧ್ರವನ್ನು ಮಾಡಿ, ಅದಕ್ಕೆ ಬಾಯೋ ಕುಡಿದುಬಡುವನು. ಹೆಂಗಸರು ತಮ್ಮ ತಮ್ಮ ಮನೆಗೆಲಸಗಳಲ್ಲಿ ಮೈಮರೆತಿರುವ ವೇಳೆ ಯನ್ನು ನೋಡಿ, ಕತ್ತಲಮನೆಗಳಿಗೆ ಪ್ರವೇಶಿಸಿ, ತನ್ನ ಆಭರಣ ಕಾಂತಿಗಳಿಂ ದುಂಟಾದ ಬೆಳಕಿನಿಂದಲೇ ಅಲ್ಲಲ್ಲಿ ಬಚ್ಚಿಟ್ಟಿರುವ ವಸ್ತುಗಳನ್ನು ಹುಡುಕಿ ತೆಗೆಯುವನು. ಇದನ್ನು ಕಂಡುಹಿಡಿದು ಯಾರಾದರೂ ಗದರಿಸಿದರೆ, ಅವರ ಮುಂದೆ ಬಾಯಿಬಡಿದು, ತಿರುಗಿ ಅವರು ಮಾತೆತ್ತುವದಕ್ಕೆ ಆವ ಕಾಶವಿಲ್ಲದಂತೆ ಮಾಡುವನು. ಸಾರಿಸಿ, ಗುಡಿಸಿ, ಶುದ್ಧ ಮಾಡಿದ ಮನೆಗಳಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿ, ಎಂಜಲುಗಿದು, ಮ೧ತ್ರವಿ ವಿರ್ಜನಾಡಿಗಳನ್ನು ಮಾಡಿ ಬರುವನು. ಅಮ್ಮ ಯಶೋದೆ! ಹೀಗೆ ನಿನ್ನ ಮಗನು ಕಂಡವರ ಮನೆಗಳಲ್ಲಿ ಈ ಚತಂತ್ರಗಳನ್ನು ನಡೆಸಿ, ನಿನ್ನ ಮುಂದೆ ಬಹಳ ಸಾಧುವಿನಂತೆ ನಟಿಸುತ್ತಿರುವನು.” ಎಂದು ಗೋಪಸ್ಸಿ ಯರೆಲ್ಲರೂ ಯಶೋದೆಯ ಬಳಿಗೆಬಂದು, ಅಲ್ಲಿ ತಮ್ಮನ್ನು ಕಂಡು ಬಹಳ ಭಯಪಟ್ಟಂತೆ ಕಣ್ಣು ಕಣ್ಣು ಬಿಡುತ್ತ ನಿಂತಿರುವ ಕೃ ನನ್ನು ತೋರಿಸಿ, ಅನೇಕ ವಿಧವಾಗಿ ದೂರುಹೇಳಿತ್ತಿದ್ದರು. ಹೀಗೆ ಒಬ್ಬೊಬ್ಬ ರು ಒಂದೊಂದು ವಿಧವಾದ ದೋಷಗಳನ್ನು ಹೇಳುತ್ತಿದ್ದರೂ, ಆ ಕೃಷ್ಣ ಷ್ಣ ಡಿಸಬೇಕೆಂಬ ಕೋಪವೆಲ್ಲವೂ ಆಡಗಿಹೋಗುವುದು. ಆ ಮುದ್ದು ಬಾಲನ