ವಿಷಯಕ್ಕೆ ಹೋಗು

ಪುಟ:ಮಾಲತಿ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೯
ಮಾಲತೀ

ರಮೇಶನ ಮುಖವನ್ನು ನೋಡಿ ಶೋಭನೆಯು ತಲೆತಗ್ಗಿದವಳಾಗಿ ಮೌನವಾಗಿ ಅಳುವುದಕ್ಕೆ ತೊಡಗಿದಳು. ರಮೇಶನೂ ಮೌನವಾಗಿ ಅಳುವುದಕ್ಕೆ ತೊಡಗಿದನು.

ಒಂದು ಕ್ಷಣಕಾಲದಲ್ಲಿ ಒಂದು ಅಲ್ಪವಾದ ಕೆಲಸವು ಒಬ್ಬ ಮನುಷ್ಯನ ಜೀವನ ಚರಿತ್ರೆಯನ್ನು ಶುದ್ಧವಾಗಿ ಬದಲಾಯಿಸಿಬಿಡುವಂತೆ ಬಹುಕಾಲ ವ್ಯಾಪಿಯಾದ ಮಹತ್ತಾದ ದೊಡ್ಡ ಕಾರ್ಯವೂ ಅದಲುಬದಲು ಮಾಡಲಾರದು. ಇಂಗ್ಲಾಂಡು ದೇಶಕ್ಕೆ ರಾಜಮಂತ್ರಿಯಾಗಿದ್ದ ಡಿಜರೇಯಿಲಿಯು, ಮನುಷ್ಯನ ಜೀವನಚರಿತ್ರೆಯು ಸಣ್ಣ ಸಣ್ಣ ಘಟನಾವಳಿಯ ಸಮಷ್ಟಿಮಾತ್ರವೆಂದು ಹೇಳಿದ್ದಾನೆ. ನೂರಾರುವರ್ಷಗಳ ರಾಜ್ಯಪರಿವರ್ತನೆಯಿಂದುಂಟಾಗದ ಕಾರ್ಯ ಸಾಧನೆಯು ಒಂದೊಂದು ಸಮಯದಲ್ಲಿ ಒಂದು ಸಣ್ಣ ಕೆಲಸದಿಂದ ಒಂದು ನಿಮಿಷದಲ್ಲಿ ಸಂಪೂರ್ಣವಾಗಿ ಸಾಧಿಸಲ್ಪಡುತ್ತದೆ. ಆಕಳ ಕಳವಿಗೋಸ್ಕರ ಶಿಕ್ಷಿಸಲ್ಪಡದಿದ್ದರೆ ಮಹಾಕವಿಯಾಗಿದ್ದ ಷೇಕಸಪಿಯರನ ಹೆಸರನ್ನು ಆರೂ ಕೇಳುತ್ತಿರಲಿಲ್ಲ.

ಅರಸಾಗಿದ್ದವನು ಬೀದಿಯಲ್ಲಿ ಭಿಕ್ಷುಕನಾದರೂ ಜೀವನಧಾರಣೆಯಂ ಮಾಡುವನು. ಪ್ರಿಯತಮರಾದ ಮಕ್ಕಳ ವಿಯೋಗವಾದರೂ ಸಹಿಸಿಕೊಂಡಿರಬಹುದು.ಪ್ರಣಯದಲ್ಲಿ ಭಗ್ನಹೃದಯರಾದವರೂ ಜೀವದಿಂದ ಬದುಕಿರುವರು. ಆದರೆ ನಿಮಿಷದಲ್ಲಿ ನುಡಿದ ಅನಾದರದೊ೦ದು ನಡಿಯಿಂದುಂಟಾಗುವ ವಿಪತ್ತನ್ನು ಸಹಿಸಲಸಾಧ್ಯ. ಅಂಥಾ ಕಟೂಕ್ತಿಯಿಂದ ಹೃದಯದ ತಂತ್ರಿಯು ಕ್ಷಣಕಾಲದಲ್ಲಿ ಹರಿದು ಪುನಃ ಸರಿಯಾಗಿ ಪೂರ್ವಸ್ಥಿತಿಗೆ ಬರುವುದು ಕಷ್ಟ. ಒಂದೊಂದು ವೇಳೆ ಜೀವನಕ್ಕೆ ದಿಙ್ದ ರ್ಶಿಯಾದ ಮುಳ್ಳು ಮಾರ್ಗತಪ್ಪಿ ಹೋಗಿ ಪುನಃ ಸರಿಯಾದ ಮಾರ್ಗಕ್ಕೆ ಬರುವುದು ಕಷ್ಟವಾಗಬಹುದು. ಗರ್ವಿತವಾದ ಹೃದಯವುಳ್ಳವವನು ದುಲ೯೦ಘ್ಯವಾದ ದಾರಿದ್ರ್ಯದ ದುರ್ದೆಶೆಗೊಳಗಾಗಿ ಕಷ್ಟಪಡುತ್ತಿದ್ದರೂ ಲಕ್ಷ್ಯಮಾಡದೆ ಇರುವನು. ಒಂದೊಂದು ಪಾಷಾಣಮಯ ಹೃದಯವು ನೂರಾರು ಜನರ ರಕ್ತಪ್ರವಾಹದೆದುರಿಗಿದ್ದರೂ ವಿಕಾರಹನ್ನು ಹೊಂದಲಾರದು. ಅಂಥಾ ಪಾಷಾಣಮಯ ಹೃದಯವೂ ಬಂದು ಮಮತಾ ಪೂರ್ಣವಾದ ನುಡಿಯಿಂದ ಕರಗಿಹೋಗುವುದು. ಅಂಟೋನಿಯನು ಅತ್ಯಂತ ಕಷ್ಟದಲ್ಲಿಯೂ ಅಪಾ