ಪುಟ:ಹಗಲಿರುಳು.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. 4೧ [ಶನಿಯ ಅಂಗಾರಕನೂ, ಆರ್ಯನನ್ನು ಆಕ್ಷೇಪಿಸಿ ವಿವರಿಸಿದ ನಿಂದಾ ಪತ್ರವನ್ನು, ಸದಾಗತಿ ತೇಜಸ್ವಿಗೆ ತೋರಿಸುವನು] ತೇಜಸ್ಟೀ:-(ಪತ್ರವನ್ನೊದಿ) ಅ:, ಈ ಬಿರುಗಾಳಿಯ ಹತ್ತಿಯ ಒಂದು ಆಕ್ಷೇಪವೆ ? ಕೇಳು, ಶನಿಯೆಂದರೆ, ಪಿತೃದ್ರೋಹಿ: ಮುಂಜಾವದಲ್ಲಿ ಅವನ ಮುಖವನ್ನು ನೋಡಿದ ಮನುಷ್ಯನಿಗೆ ಆ ದಿವಸಕ್ಕೆ ಗಂಜಿಯ ತಿಳಿನೀರೂ ಸಿಕ್ಕಲಾರದು. ಯಾಕಂದರೆ ಅವನ ತಂದೆ ಏನು ಸಾಮಾನ್ಯನೆ ? ಲೋಕಹಿತನಾದ ಆರ್ಯನು, ಹಂದಿಯೊಂದು ಡುರುಂಕೆಂದರೆ ಸಿಂಗವಂಡಲೆವುದೆ?” ಎಂಬಂತೆ, ಈ ಕಿಡುಕನು ಏನೆಂದರೂ ಆ ಮಹಾತ್ಮನಿಗೆ ಕುಂದುಂಟೆ? ಆ ಲೋಕನೇತ್ರನಾದ ತಂದೆಯ ಮಾತನ್ನು ಗಾಳಿಗೆ ಕಟ್ಟಿ, ಈ ಕಳಂಕಿಯನ್ನು ಸೇರಿದ ಸಾಪದಿಂದಲೆ ಸಂ ಸರ್ಗಜಾರೋಷಗುಣಾಭವಂತಿ' ಎಂಬಂತೆ ನೀಚನಾದನು, ಧಾರ್ಮಿಕನಾದ ನಳ ಚಕ್ರವರ್ತಿಯ ಸತ್ಯಧರ್ಮವನ್ನು ಸೈರಿಸಲಾರದೆ ಕರುಬಿ, ಅಕಟ! ಆ ದೇವತಾ ಸ್ವರೂಪದ ದಂಪತಿಗಳನ್ನು ಊರಿಂದೋಡಿಸಿದನು. ಅಷ್ಟೆ ಅಲ್ಲ; ಪ್ರಿಯ ದಂಪತಿಗಳನ್ನು ಅಗಲಿಸಿ ಮಹಾಪಾಪವನ್ನೂ ಮಾಡಿದನು, “ಓಡಿ ಸಿಕ್ಕ ಬಾರದು, ಎಂಬಂತೆ ಆ ಓಟದಲ್ಲಿ ಯಾದರೂ ಕಡೆಮುಟ್ಟಿದನೆ? ಇಲ್ಲ; ಕಡೆಗೆ ಕಂಗಾಲಾದನೆಂಬುದು ಪ್ರತಿಯೊಬ್ಬನಿಗೂ ಗೊತ್ತುಂಟು. ಅಂಥ ಪಾಪಕರ್ಮದ ಅಭ್ಯಾಸದಿಂದ, ಕಾಲ್ಮುರಿದು, ಗತಿಯುಡುಗಿ ಮತಿಯಡಗಿದ ಕಾರಣದಿಂದಲೆ ಮಂದನಾಗಿರುವುದು ಈಗ ಲೌಕಿಕರಲ್ಲಿ ಕಂಡವರು ಕೇಳಿದವರು, ದುಷ್ಟ ನಾದವನನ್ನು “ಜಿ:, ಶನಿ” ಎಂದು ನಿಂದಿಸುವುದಾದರೂ ಮತ್ತಾವುದರಿಂದ ? ಇನ್ನು, ಅಂಗಾರಕನ ಬಣ್ಣವೊಂದುಂಟು, ಅವನ ಮಾತೃಭಕ್ತಿಯನ್ನು ಬಣ್ಣಿ ಸಿದಷ್ಟೂ ಬಾಯಿ ಮುಚ್ಚದು, ಈ ಮಾತೃಭೂಮಿಯ ಕಷ್ಟವನ್ನು ನೋಡಿ ಊರು ಬಿಟ್ಟೋಡಿ ಹಗೆಗಳನ್ನು ಸೇರಿದ ಆ ಮಹಿಮನಷ್ಟು ಮಾತೃಭಕ್ತಿ ಮತ್ತಾರಿಗಿದೆ ? ದಯಾಮಯನಾದ ಆರ್ಯನು, ಎಂದಿನಂತೆಯೆ ಆಗಲೂ ಭೂಮಿಯನ್ನು ಒಣಗಿಸಿದುದು ಯಾಕೆಂದು ಇವನಿಗೆ ಗೊತ್ತುಂಟೆ? ನೆಲವು ಕೃಷಿಹೊಂದಿ, ಬಿತ್ತು ಮೊಳೆದು, ಗಿಡುವಾಗಿ ಬೆಳೆದು ಫಲವ ತಾಗಬೇಕಾದರೆ, ಆ ಎಚ್ಚರಿಕೆ ಆವಶ್ಯಕವು, ಬಸಿರಿಯಾದ ಸುವಾಸಿನಿ ಹೆತ್ತು ತಾನೂ ಮಗುವೂ ಪರಿಪುಷ್ಟರಾಗಬೇಕಾದರೆ, ಮೊದಲಿಂದಲೆ ಮದ್ದು ಮಾಡುತ್ತ, ಆಮೇಲೆ ಶೀತನಿವಾರಣೆಗಾಗಿ ಕಡುತರವಾದ ನಂಜಿನ ಮದ್ದುಗ