ಪುಟ:ಚೋರಚಕ್ರವರ್ತಿ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಅರಿಂದಮನು ಆಕೆಯ ಧೈವನ್ನು ನೋಡಿ ಅಚ್ಚರಿಗೊಂಡ ವನಾಗಿ - ಅವರು ಇಲ್ಲಿ ಇಲ್ಲವೆಂದು ಕಾಣುವುದು. ನಾನೇನಾ ದರೂ ಭ್ರಾಂತಿ ಪಟ್ಟೆನೆ ! ' ಎಂದು ಗಟ್ಟಿಯಾಗಿ ತನ್ನಲ್ಲಿ ತಾನು ಮಾ ತನಾಡಿಕೊಂಡನು. ಇದನ್ನು ಕೇಳಿದ ಆಹೆಂಗಸು.ತಾವು ಭ್ರಾಂತರಾಗಿರಬೇಕು. ತಾವು ಯಾ ? ತಾವು ಯಾರನ್ನು ಹುಡುಕಿಕೊಂಡು ಇಲ್ಲಿಗೆ ಬಂದಿ ರುವಿರಿ ? ಎಂದು ಕೇಳಿದಳು. ಅರಿಂದಮ-ನಾನು ಇಲ್ಲಿಗೆ ಹೊಸಬನು. ಇಲ್ಲಿ ನನಗೆ ಯಾ ರೂ ಪರಿಚಿತರಿಲ್ಲ. ನನ್ನ ಸೋದರಳಿಯನೊಬ್ಬನು ಇಲ್ಲಿರುವುದಾಗಿ ಕೇಳಿ ನಾನಿಲ್ಲಿಗೆ ಬಂದೆನು. ಹೆಂಗಸು_ಆತನ ಹೆಸರೇನು ? ಅರಿಂದಮ-ರಾಮರತ್ನ. ಹೆಂಗಸು-ವಿಸ್ಮಿತಳಾಗಿ) ಏನು ? ರಾಮರತ್ನನೇ? ಅರಿಂದಮನು ಆಕೆಯ ಬಾಡಿದ ಮುಖವನ್ನೂ, ವಿಸ್ಮಯದಿಂದ ವಿಕಸಿತನಾದ ಕಣ್ಣುಗಳನ್ನೂ, ಕೊಂಡಹೆದರಿದ ಭಾವವನ್ನೂ ನೋ? ಡಿ-ಮಗು, ರಾಮರತ್ನನ ಹೆಸರನ್ನು ಕೇಳಿದ ಕೂಡಲೆ ನೀನು ಹೆದ ರಲು ಕಾರಣವೇನು ? ಅವನು ನಿನಗೇನಾಗಬೇಕು ? ಎಂದನು. ಆ ಹೆಂಗಸು-ಆತನು ನನಗೇನೂ ಆಗಬೇಕಾದ್ದಿಲ್ಲ. ಯಾರೋ ಸುಳ್ಳು ಹೇಳಿ, ತಮ್ಮನ್ನು ಇಲ್ಲಿಗೆ ಕಳುಹಿಸಿದವರು, ಇಲ್ಲಿ ರಾಮ ರತ್ನನಂಬುವನೇ ಇಲ್ಲ. ಈ ರೀತಿಯಲ್ಲಿ ಆ ಹೆಂಗಸು ಆಗಂತುಕನ ಕಣ್ಣುಗಳಲ್ಲಿ ವ ಣ್ಣನ್ನು ಎರಡುವುದಕ್ಕಾಗಿ ಸುಳ್ಳನ್ನು ಹೇಳಿದಳು. ಎಂಥೆಂಥಹ ಘಟಾನುಘಟಿಗಳ ಹೃದಯವನ್ನೂ ಲೀಲಾಜಾಲವಾಗಿ ಅರಿಯಬಲ್ಲವ ನಾದ ಅರಿಂದಮನಿಗೆ, ಪ್ರಪಂಚವನ್ನರಿಯದ ಬಾಲಿಕೆ ಯ ಹೃದಯನ