ಪುಟ:ರಘುಕುಲ ಚರಿತಂ ಭಾಗ ೧.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ೫೯ ತರಬೇಕೆಂದು ನಿಶ್ಚಯಿಸಿದನು, ವಶಿಷ್ಠ ಮುನಿಯು ಮಂತ್ರಿಸಿ ಹಲವನ್ನು ಪ್ರೋಕ್ಷಿಸಿದ್ದು ದರ ಮಹಿಮೆಯಿಂದ - ನೆಲ, ಮುಗಿಲು, ಕಡಲುಗಳೊಳಗೆ ಲ್ಲಿಯೂ ಗಾಳಿಯ ಸಹಾಯವುಳ ಮೋಡಕ್ಕೆ ಹೇಗೋಹಾಗೆ, ರಘುವಿನ ದಾರಿಗೆ ಅಡ್ಡಿಯೇ ಇರಲಿಲ್ಲ. ಆ ಬಳಿಕ ಧೀರನಾದ ರಘುವು - ಕೈಲಾಸಕ್ಕೊಡೆಯನಾದ ಕುಬೇ ರನನ್ನು, ಅವನೂ ಒಬ್ಬ ಸಾಧಾರಣದ ದೊರೆಯೆಂದು ಭಾವಿಸಿ, ತನ್ನ ತೋಳುಬಲದಿಂದ ಗೆಲ್ಲಬೇಕೆಂದು ಬಯಸಿ, ಆ ದಿನ ಸಾಯಂಕಾಲದ ಹೊತ್ತಿಗೆ ಬಿಲ್ಲು ಬಾಣ ಬತ್ತಳಿಕೆಗಳನ್ನೊಳಗೊಂಡಿರುವ ತನ್ನ ತೇರನ್ನು ಏರಿ ಮಲಗಿದನು. ಮಾರನೆಯ ದಿನ ಬೆಳಗಾಯಿತು, ರಘುವು ವಿಜಯಪ್ರಯಾಣ ವನ್ನು ಬೆಳಸಲು ಸಿದ್ಧನಾದನು, ಭಂಡಾರದ ಮನೆಯ ಕಾವಲುಗಾರ ರಾದ ಅಧಿಕಾರಿಗಳು ಅಚ್ಚರಿಗೊಂಡರು, ಓಡಿಬಂದರು, ಒಡೆಯನನ್ನು ಕಂಡರು, ಅಡ್ಡಬಿದ್ದ ರು, ಕೈಜೋಡಿಸಿ ನಿಂತರು. ಪ್ರಭುವೇ ! ನಿನ್ನೆಯ ಇರುಳು - ಕೋಶಗೃಹದ ನಡುವೆ ಮುಗಿಲಿನಿಂದ ಹಣದಮಳ ಗರೆಯಿತು ಎಂದು ಸಂತಸದಿಂದ ಬಿನ್ನವಿಸಿದರು, ರಘುವೂ ಆಶ್ಚರ್ಯಪ ಟ್ಟನು, ಕೂಡಲೇ ಭಾಂಡಾಗಾರಕ್ಕೆ ಬಂದನು, ಇದಿರಿಸಬೇಕೆಂದಿದ್ದ ಕುಬೇರನಿಂದ ಉಂಟಾಗಿ, ತಳತಳಿಸುತಲಿರುವ ಸುವರ್ಣವೃಷ್ಟಿಯನ್ನು ಕಂಡನು, ವಜ್ರಾಯುಧದ ಪೆಟ್ಟಿನಿಂದ ಒಡೆದ ಮೇರುಪರತದ ಗುಡ್ಡ ದಂತಿರುವ ಆ ಹಣದರಾಶಿಯನ್ನೆಲ್ಲ ಕೌತ್ವಮುನಿಗೆ ಕೊಟ್ಟು ಬಿಟ್ಟನು. ಕೌತ್ಸನು ಬೇಡಿದುದಕ್ಕಿಂತ ಹೆಚ್ಚಾದ ಹಣದಲ್ಲಿ ರಘುವು ಆಕೆಯುಳ್ಳವನಾ ಗಲಿಲ್ಲ. ಗುರುವಿಗೆ ಕೊಡಬೇಕಾದುದಕ್ಕಿಂತ ಅಧಿಕವಾದ ಧನವನ್ನು ಕೌತ್ಸನು ಅಭಿಲಾಪ್ಪಿಸಲೂ ಇಲ್ಲ. ಇದರಿಂದ ಅಯೋಧ್ಯಾಪುರ ನಿವಾಸಿ ಗಳಾದ ಜನರಿಗೆಲ್ಲ ಕೌತ್ಸರಘಗಳಿಬ್ಬರೂ ಬಹು ಶ್ಲಾಘನೀಯರೆ ನಿಸಿದರು. ಆ ಬಳಿಕ ಕತ್ವಮುನಿಯು-ಸಂತುಷ್ಟಾಂತರಂಗನಾಗಿ, ನೂರಾರು ಒಂಟೆಗಳಮೇಲೆಯೂ, ಹೆಣ್ಣು ಕುದುರೆಗಳಮೇಲೆಯೂ ಹಣವನ್ನು ಹೇರಿಸಿಕೊಂಡು ಹೊರಟು, ಹತ್ತಿರದಲ್ಲಿ ಕರಗಳನ್ನು ಜೋಡಿಸಿಕೊಂಡು ಶಿರಬಾಗಿ ನಿಂತಿರುವ ರಘುವನ್ನು ತನ್ನ ಕರತಲದಿಂದ ತಡವಿ ಇಂತೆಂದನು