ಪುಟ:ರಘುಕುಲ ಚರಿತಂ ಭಾಗ ೧.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hok ಶ್ರೀ ಶಾ ರ ದ .. fe MMwww.tw ನೀನೀಗಲೆ ಲೋಕಾಂತರವನ್ನು ಕುರಿತು ತರಳದ್ದೀಯೆ ! ಛೇ ! ಪ್ರಾಣಿ ಗಳ ಸಂಬಂಧವಾದ ಅಸಾರತೆಯನ್ನು, ಬಲು ಹೀಯಾಳಿಸಬೇಕಾಗಿದೆ. ಓ ಪ್ರಿಯವಲ್ಲಭೆ ! ನಾನು - ಇದುವರೆಗೆ ಹಿಂದೆ ಎಂದೂ ಮನಸ್ಸಿನಲ್ಲಿ ಕೂಡ ನಿನ್ನ ವಿಷಯದಲ್ಲಿ ಯಾವುದೊಂದು ಸ್ವಲ್ಪ ಕೆಡುಕನ್ನೂ ನೆನದವ ನಲ್ಲವಲ್ಲಾ ! ಇಂತಹ ನನ್ನನ್ನು ಏಕೆ ತೊರೆಯಲೆಳಸುತ್ತಿರುವೆ ? ನಾನು ನಾಮಮಾತ್ರದಿಂದ ಭೂಮಿಗೆ ಪತಿ ಎನಿಸಿಕೊಂಡಿದ್ದೇನೆ ? ಮನಃಪೂರ್ವ ಕವಾದ ಪ್ರೇಮವು ನಿನ್ನಲ್ಲಿಯೇ ನೆಲೆಗೊಂಡಿದ್ದಿ ತಲ್ಲ ? ಅಯಿ ಸುಂದರಿ ಯಾದ ಇಂದುಮತಿ ! ಅಂದವಾಗಿ ಕಟ್ಟಿದ ಹೂವನ್ನು ಮುಡಿದಿರುವ ನಿನ್ನ ಶಿರದಿಂದ ಜೋಲಾಡುತ, ದುಂಬಿಯಂತೆ ಕಪ್ಪಾಗಿರತಕ್ಕೆ ಮುಂಗೂ ದಲನ್ನು ಅಲುಗಿಸುವ ಮೆಲ್ಲೆಲರು - ಮರಳಿ ನೀನು ಹಿಂದಿರುಗಬಹು ದೆಂದು ನನ್ನ ಮನಸ್ಸನ್ನು ಶಂಕಿಸುವಂತೆ ಮಾಡುತಲಿದೆ. ಎಲೆ ಪ್ರಯಳ | ತಡಿಯಲ್ಲಿ ಬೆಳೆದಿರುವ ತೃಣಜ್ಯೋತ್ಸೆಯೆಂಬ ಜ್ಯೋತಿರ್ಲತೆಯು - ಹಿಮಗಿರಿಯ ಗವಿಯೊಳಗಣ ಕತ್ತಲನ್ನು ಕತ್ತರಿಸಿ, ಇರುಳು ಹೊತ್ತಿ ನಲ್ಲಿ ತನ್ನ ಬೆಳಕಿನಿಂದ ಬೆಳಗಿಸುವಹಾಗೆ, ನೀನು ಎಚ್ಚರಿನಿಂದ ನನ್ನ ಮನೋವ್ಯಥೆಯನ್ನು ಬೇಗನೆ ತೊಲಗಿಸಬಾರದೆ ? ಚಲಿಸುತಲಿರುವ ಮುಂಗೂದಲನ್ನೊಳಗೊಂಡು, ಏನೊಂದನ್ನೂ ನುಡಿಯದಿರುವ ನಿನ್ನ ಮುಖವು - ಇರುಳು ಹೊತ್ತಿನಲ್ಲಿ, ಮುಗಿದಿರುವುದರಿಂದ ದನಿಗೆಯ್ಯದೆ ಒಳಗಡಗಿದ ಆರಡಿಯನ್ನು ಅಸಮಾನವಾದ ತಾವರೆಯಂತೆ ನನ್ನ ಮನ ವನ್ನು ಸಂತಾಪಗೊಳಿಸುತಲಿದೆ. ತೆರಳಿದ ಯಾಮಿನಿಯು ಮರಳಿ ಬರು ವುದೆಂದು ಚಂದ್ರಮನೂ, ಅಗಲಿದ ಚಕ್ರವಾಕಿಯೂ ಪುನಃ ಸೇರುವು ದೆಂದು ಒಡನಾಡಿಯಾದ ಜಕ್ಕವಕ್ಕಿಯೂ, ವಿರಹವೇದನೆಯನ್ನು ಸೇರಿಸಿ ರುವುದು ಲೋಕದಲ್ಲಿ ಸಂಗತವಾಗಿದೆ. ಎಂದೂ ಹಿಂದಿರುಗದಂತಹ ಪಯಣವನ್ನು ಬೆಳಸಿರುವ ನೀನು ನನ್ನನ್ನು ಸುಡದಿರುವುದುಂಟೆ ? ಪೊಸ ತೆನಿಸಿದ ತ೪ರ ಹಾಸಿನಲ್ಲಿಯೂ ಬಳಲಿ, ನೋವನ್ನು ತಾಳಲಾರದಿದ್ದ ಈ ನಿನ್ನ ಮೃದುವಾದ ಮೆಯ್ತು, ಅಯ್ಯೋ ! ಬಲು ಡೊಂಕಾಗಿಯೂ, ಕಠಿನವಾಗಿಯೂ ಇರುವ ಕಟ್ಟಿಗೆಯ ಗುಡ್ಡೆಯಾದ ಚಿತೆಯಮೇಲೆ ಪವಳಸೋಣವನ್ನೆಂತು ಸೈರಿಸಬಲ್ಲದೋ ಹೇಳು ? ಬಲು ಗುಟ್ಟಾದ ಹೊತ್ತಿನಲ್ಲಿಯೂ ನಿನ್ನನ್ನು ಅಗಲದ ಮೊದಲನೆಯ ಗೆಳತಿಯಾಗಿದ್ದ ಈ