ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಇಬ್ಬರೂ ಮನೆಯೊಳಗೆ ಪ್ರವೇಶವಾಡಿದರು. ಆ ನು ನೆಯಲ್ಲಿ ಏಕಾಧಿಪತ್ಯ ಮಾಡುತಿದ್ದ ಘೋರಾಂಧಕಾರದಲ್ಲಿ ದಿಕ್ಕು ತೋರದ ದೇವೇಂದ್ರನು ಗುಪ್ತವಾಗಿಟ್ಟಿದ್ದ ಕೈಲಾಂ ದು (lantern) ವನ್ನು ಹೊರಗೆ ತೆಗೆದನು. ಆ ಕೂಡಲೆ ಮನೆಯೆಲ್ಲವೂ ಬೆಳಕಿನಿಂದ ಉಜ್ಜ ಲಿತವಾಯಿತು. ಅದ ನ್ನು ನೋಡಿದಾಕ್ಷಣವೇ ಎಲೆಯು ಚಮಕಿ ತಳಾದರೂ ಯಾವ ಮಾತನ್ನೂ ಆಡಲಿಲ್ಲ. ಬಳಿಕ ಇಬ್ಬರೂ ಉತ್ತರ ದಿಕ್ಕಿನಲ್ಲಿದ್ದ ಮೆಟ್ಟಿಲುಗ ಳನ್ನು ಹತ್ತಿ ಮಹಡಿಯ ಮೇಲೆ ಹೋಗಿ ಅಲ್ಲೊಂದು ಕೋ ಣೆಯನ್ನು ಪ್ರವೇಶಮಾಡಿದರು. ಪ್ರವೇಶವಾಡಿದ ಕೂಡ ಲೆ, ಜುವೆಲೆಯ; ಮೇಣದ ಬತ್ತಿಯನ್ನು ಹತ್ತಿಸಿ, ಅದನ್ನು ಒಂದು ಮೇಜಿನ ಮೇಲಿಟ್ಟು, ದೇವೇಂದ್ರ, ನಾನು ನಿನ್ನನ್ನು ಇಲ್ಲಿಗೆ ಬರಮಾಡಿಕೊಂಡಿರುವುದಕ್ಕೆ ಕಾರಣವೇನೆಂಬುದನ್ನು ಬಲ್ಲೆಯ ? ಎಂದಳು. ಇಲ್ಲ, ಗೊತ್ತಿಲ್ಲ, ನಾನು ನಿನ್ನನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿ ರುವನು. ಅದನ್ನು ನಾನು ಬಲ್ಲೆ. ನಿನ್ನನ್ನು ಮಾತ್ರವೇ ಅಲ್ಲ; ನಿನ್ನ ಜತೆಯಲ್ಲಿ ಯಾರು ಯಾರು ಸೇರಿಕೊಂಡಿರುವರೋ, ಅವರೆಲ್ಲರನ್ನೂ, ಅದನ್ನೂ ನಾನು ಬಲ್ಲೆ ? ನಾನು ನನ್ನ ಪ್ರತಿಜ್ಞೆಯನ್ನು ನೆರವೇರಿಸಿಕೊಳ್ಳಬಲ್ಲೆ ನಂದು ನಿನಗೆ ನಂಬುಗೆಯುಂಟೆ ? ಸಾಧ್ಯವಾದರೆ ಮಾಡಬಲ್ಲೆ,