ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಶ್ರೀಮದ್ಭಾಗವತವು ಅಧ್ಯಾ, ೧೧. ಯೆಂದು ನಂಬಿ ಯಾವನು ನನ್ನ ಮೈ ಭಜಿಸುವನೋ, ಆತನೇ ನನಗೆ ಬಹಳ ಪ್ರಿಯತಮನಾದ ಸಜ್ಜನನೆಂದು ತಿಳಿ! ಮತ್ತು ನನ್ನ ಸ್ವರೂಪಸ್ವಭಾವಗಳೆಂ ತವೆಂಬುದನ್ನೂ , ನಾನು ಎಷ್ಟು ಮಹತ್ವವುಳ್ಳವನೆಂಬುದನ್ನೂ ಯಾವನು ಆಗಾಗ ವಿಮರ್ಶಿಸಿ ತಿಳಿದು, ದೇವತಾಂತರಗಳಲ್ಲಿಯೂ, ಪ್ರಯೋಜನಾಂ ತರಗಳಲ್ಲಿಯ ದೃಷ್ಟಿಯಿಡದೆ, ಅವನ್ಯಪ್ರಯೋಜನವಾಗಿ ನನ್ನನ್ನು ಭಜಿ ಸುವನೋ ಅಂತವನೇ ಭಕ್ತ ಮನು. ಉದ್ಯವಾ! ಇನ್ನು ಉತ್ತಮ ಭಕ್ತಿಯ ಲಕ್ಷಣಗಳನ್ನೂ ತಿಳಿಸುವೆನು ಕೇಳು : ನನ್ನ ಪ್ರತಿಮಾ ಮೂರ್ತಿ ಗಳನ್ನೂ, ನನ್ನ ಭಕ್ತರನ್ನೂ ಆಗಾಗ ದರ್ಶನಮಾಡುವುದು, ಸ್ಪರ್ಶಿಸು ವುದು, ಅರ್ಚಿಸುವುದು, ಉಪಚರಿಸುವುದು, ಸ್ತುತಿಸುವುದು, ನಮಸ್ಕರಿಸು ವುದು, ನನ್ನ ಗುಣಗಳನ್ನೂ ಕಾವ್ಯಗಳನ್ನೂ ಆಗಾಗ ಕೊಂಡಾಡುತ್ತಿರುವು ದು, ನನ್ನ ಕಥೆ ಗಳನ್ನು ಕೇಳುವುದು, ನನ್ನನ್ನು ಧ್ಯಾನಿಸುವುದು, ತನಗೆ ಲಭಿ ಸಿದುದನ್ನೆಲ್ಲಾ ನನ್ನಲ್ಲಿ ಸಮರ್ಪಿಸುವುದು, ತನ್ನನ್ನು ನನಗೆ ಶೇಷಭೂತನೆಂ ದೇ ತಿಳಿದಿರುವುದು, ಶ್ರದ್ಧೆಯಿಂದ ಕೇಳತಕ್ಕವರಿಗೆ ನನ್ನ ಕಥೆಗಳನ್ನು ಹೇ ಳುವುದು, ಜಯಂತಿ ಮೊದಲಾದ ನನ್ನ ಜನ್ನೊತ್ಸವದಿನಗಳಲ್ಲಿ ಮಹೋ ತ್ಯಾಹದಿಂದ ಹಬ್ಬಗಳನ್ನು ನಡೆಸುವುದು, ನೃತ್ಯ, ಗೀತ, ವಾದ್ಯಾದಿಗ ಳೊಡನೆ ನನ್ನ ಆಲಯಗಳಲ್ಲಿ ಉತ್ಸವಗಳನ್ನು ನಡೆಸುವುದು, ದಿವ್ಯದೇಶ ಯಾತ್ರೆ, ಏಕಾದತಿ ಮೊದಲಾದ ಪತ್ವಜನಗಳಲ್ಲಿ ನನಗೆ ವಿಶೇಷ ಪೂಜೆಗೆ ಛನ್ನರ್ಪಿಸುವುದು, ಪಾಂಚಾರಾತ್ರದಲ್ಲಿ ಹೇಳಿರುವಂತೆ ಪಂಚಸಂಸ್ಕಾರ ಕೈಯನ್ನು ಕೈಗೊಳ್ಳುವುದು, ನನ್ನ ಪ್ರೀತಿಗಾಗಿ ನಡೆಸತಕ್ಕೆ ಏಕಾದಶಿ ಮೊ ದಲಾದ ವ್ರತಗಳನ್ನು ತಪ್ಪದೆ ನಡೆಸುವುದು, ಅಲ್ಲಲ್ಲಿ ನನ್ನ ಅರ್ಚಾಮ ರ್ತಿಗಳನ್ನು ಪ್ರತಿಷ್ಠೆ ಮಾಡುವುದು, ತನಗೆ ಆ ಶಕ್ತಿಯಿಲ್ಲದಿದ್ದರೆ ನಾಲ್ಕಾ ರುಜನಗಳ ಸಹಾಯದಿಂದ ಆ ಕಾರಕ್ಕೆ ಪ್ರಯತ್ನಿಸುವುದು, ಮತ್ತು ನನ್ನ ಗಾಗಿ ತೋಟಗಳನ್ನೂ, ಮಂಟಪಗಳನ್ನೂ, ದೇವಾಲಯಗಳನ್ನೂ, ಕ್ರೀ ಡಾಸ್ಥಳ ಮೊದಲಾದುವುಗಳನ್ನೂ ಏರ್ಪಡಿಸುವುದು, ನನ್ನ ಆಲಯಗಳನ್ನು ಕುಡಿಸಿ, ಸಾರಿಸಿ, ರಂಗೋಲೆ ಮೊದಲಾದುವುಗಳಿಂದ ಅಲಂಕರಿಸುವುದು, ಅಹಂಕಾರ, ವಂಚನೆ, ಮೊದಲಾದ ದುರ್ಗುಣಗಳಿಲ್ಲದಿರುವುದು, ತಾನು