ಪುಟ:ಅಶೋಕ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೀ೪೪ ಅಶೋಕ ಅಥವಾ ಪ್ರಿಯದರ್ಶಿ ೪ W V• 'ಆ Py/YYYYYYYYY v * * *y'

        • y -+++ **y

YYYY -*-* vvv7,”, “YYYYYYY ತೋರುವದು. ಒಂದು ವೇಳೆ ಆ ರಾಜರು ಸ್ವತಂತ್ರರಾಗಿ ಇದ್ದರೆ ತಮ್ಮ ರಾಜ್ಯದಲ್ಲಿ ಅಶೋಕನು ಕೀರ್ತಿಸ್ತಂಭಗಳನ್ನು ನಿಲ್ಲಿಸುವದಕ್ಕೂ, ಚಿಕಿತ್ಸಾಲಯ ಮೊದಲಾದವು ಗಳನ್ನು ಸ್ಥಾಪಿಸುವದಕ್ಕೂ ಸಮ್ಮತಿಸುತ್ತಿರಲಿಲ್ಲವೆಂದು ತೋರುವದು, ಏನೇ ಇರಲಿ; ಈ ವರ್ಣನೆಯಿಂದ ಅಶೋಕನು ತನ್ನ ಸಾಮ್ರಾಜ್ಯದಲ್ಲಷ್ಟೇ ಅಲ್ಲ; ತನ್ನ ಶ್ರೇಷ್ಠತ್ವ ನನ್ನೊ ಸ್ಪುವ ರಾಜ್ಯಗಳಲ್ಲಿಯೂ ತನ್ನ ಮಿತ್ರ ರಾಜ್ಯಗಳಲ್ಲಿಯೂ ಮಾಂಡಲಿಕ ರಾಜ್ಯಗಳ ಲ್ಲಿಯೂ ಚಿಕಿತ್ಸಾಲಯ ಮೊದಲಾದವುಗಳನ್ನು ಸ್ಥಾಪಿಸಿದ್ದನೆಂದು ವ್ಯಕ್ತವಾಗುವದು. ಅಶೋಕನ ರಾಜ್ಯಶಾಸನ ಪದ್ಧತಿಯು ಆತನ ಅಂತರ್ದೃಷ್ಟಿ, ಬುದ್ದಿ-ಶಕ್ತಿಗಳನ್ನು ಚನ್ನಾಗಿ ವ್ಯಕ್ತಪಡಿಸುವದು. ಅಶೋಕನು ತನ್ನ ಮಕ್ಕಳಂತೆ ಪ್ರಜೆಗಳನ್ನು ಪಾಲಿಸು ತಿದ್ದನೆಂಬದು ಆತನ ಶಿಲಾಲಿಸಿ ಸಂಭಲಿಪಿಗಳಿಂದ ಗೊತ್ತಾಗುವದು. ಪ್ರಜೆಗಳ ಕೊರ ತೆಗಳನ್ನು ಕೇಳಿಕೊಳ್ಳುವದಕ್ಕೆ ಆತನು ಯಾವಾಗಲೂ ತತ್ಪರನಾಗಿರುತ್ತಿದ್ದನು. ಪ್ರಜೆ ಗಳು ನನ್ನ ಮಕ್ಕಳು, ನನ್ನ ಮಕ್ಕಳ ಸುಖ-ಕಲ್ಯಾಣಗಳನ್ನು ಬಯಸುವಂತೆ ಪ್ರಜೆಗಳ ಸುಖ-ಕಲ್ಯಾಣಗಳನ್ನು ಬಯಸುವೆನು ?” ಎಂದು ಅನ್ನುತ್ತಿದ್ದನು. ರಾಜ್ಯದ ಪ್ರಜೆಗ ಳೊಡನೆಯೂ, ರಾಜ್ಯದ ಮೇರೆಯಲ್ಲಿರುವ ಪ್ರಜೆಗಳೊಡನೆಯೂ, ನೀವೂ ಇದೇ ಪ್ರಕಾರ ನಡೆದುಕೊಳ್ಳಿರೆಂದು ಕಾಮದಾರರಿಗೆ ಹೇಳುತ್ತಿದ್ದನು, ಯೋಗ್ಯವಾದ ಉಪ ದೇಶ, ಮತ್ತು ಆಚರಣೆ ಇವುಗಳಿಂದ ಪ್ರಜೆಗಳನ್ನು ತಿದ್ದುವದಕ್ಕೂ, ಸುಸ್ವಭಾವದವ ರನ್ನು ಮಾಡುವದಕ ಆತನು ಪ್ರಯತ್ನಿ ಸುವನು. ರಾಜ್ಯ ಕಾರಭಾರವು ಉತ್ತಮವಾಗಿ ಆಗಬೇಕೆಂದು ಪ್ರಜೆಗಳಿಗೆ ನೀತಿಯ ಉಪದೇಶವನ್ನು ಯಾವಾಗಲೂ ಮಾಡುವನು. ಮತ್ತು ಆ ನೀತಿಯ ಉಪದೇಶಗಳನ್ನು ಎಲ್ಲ ಕಡೆಯಲ್ಲಿ ಪ್ರಕಟಿಸಿದ್ದನು. ಪ್ರಜೆಗಳು ಧರ್ಮವನ್ನು ಪಾಲಿಸಿ, ಸುಖಿಗಳೂ, ಸುಧಾರಿಸಿದವರೂ ಆಗಬೇಕೆಂಬದು ಅವನ ರಾಜನೀತಿಯ ಮುಖ್ಯ ಧೈಯವಾಗಿತ್ತು. ಅಶೋಕನ ರಾಜ್ಯಶಾಸನ ಪದ್ದತಿಯನ್ನು ನೋಡಿದರೆ ರಾಜಕಾರ್ಯಗಳಲ್ಲಿ ಆತನ ಜಾಗರೂಕತೆಯೂ, ಯೋಗ್ಯತೆಯೂ ಕಂಡುಬರುವವು, ಪ್ರಜೆಗಳ ಕುಂದು ಕೊರತೆಗಳನ್ನು ತಿಳಿದುಕೊಳ್ಳುವದಕ್ಕಾಗಿ ಆತನು ಪ್ರತಿವೇದಕರನ್ನೂ ಪ್ರತಿವಾದಿಗ ಇನ್ನೂ ನಿಯಮಿಸಿದ್ದನು. ಯಾವಾಗಲೂ ಎಲ್ಲ ಸ್ಥಳಗಳಲ್ಲಿಯೂ ಅಂತಃಪುರದಲ್ಲಿರಲಿ, ಶಯನಮಂದಿರದಲ್ಲಿರಲಿ, ಊಟದಲ್ಲಿರಲಿ, ಎಲ್ಲಿಗಾದರೂ ಹೊರಟಿರಲಿ, ಆಗಲೂ ಪ್ರಜೆ ಗಳ ಕೊರತೆಗಳನ್ನು ಕೇಳಿಕೊಳ್ಳುವನು ಪ್ರತಿಯೊಬ್ಬನಿಗೆ ತನ್ನ ಕಷ್ಟವನ್ನು ಅರಸನ ಬಳಿಯಲ್ಲಿ ಹೇಳಿಕೊಳ್ಳುವ ಅಧಿಕಾರವಿತ್ತು. ರಾಜ್ಯದಲ್ಲಿ ಶಿಕ್ಷಣಪ್ರಸಾರಕ್ಕಾಗಿ ಅಶೋಕನು ಚೆನ್ನಾಗಿ ಯತ್ನಿಸುತ್ತಿದ್ದನು. ನಾಲಂದಾ ಅಥವಾ ನರೇಂದ್ರವಿಹಾರವು ಇತಿಹಾಸಪ್ರಸಿದ್ಧವಾದದ್ದು, ಈ ನರೇಂದ್ರ ನಿಹಾರವು ಅಶೋಕನ ಕಾಲದಲ್ಲಿಯೇ ಸ್ಥಾಪಿಸಲ್ಪಟ್ಟಿತೆಂದು ಹಲವರು ಹೇಳುವರು.