ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وو ಮಾಡಿದ್ದು ಮಹಾರಾಯ, ಚಂಬೂ ಇವಳೂ ಒಟ್ಟಿಗೆ ಬಿದ್ದ ಕಾರಣ ಧಡ್ಡನೆ ಸದ್ದಾಯಿತು. ಊಟಮಾಡುತಾ ಇದ್ದ ಗಂಡಸರು ಮೊದಲು ಎದ್ದು ಬಂದು ನೋt. ಡಿದರು. ಸೀತಮ್ಮ' ಮುಖ ಅಡಿಯಾಗಿ ಬಿದ್ದಿದ್ದಳು. ಗಂಡ, ಮಾವ ಯಾರು ಬಂದರೂ ಏಳಲಿಲ್ಲ. ಇವರುಗಳೆದುರಿಗೆ ನಾ ದೆಯನ್ನು ಮಾರಿ ಅವಳು ಹಾಗೆ ಇದು ಅಪೂರವಾದ ಕಾರಣ, ದೀಕ್ಷಿತನು- ಅಯ್ಯೋ ಸೀತಮ್ಮ ಬಿದ್ದು ಬಿಟ್ಟಿದಾಳೆ, ಯಾರಾದ ರೂ ಬನ್ನಿ ಎಂದು ಗಟ್ಟಿಯಾಗಿ ಕೂಗಿದನು. ಮನೆ ಹೆಂಗಸರೆ ಲ್ಯಾ ಓಡಿಬಂದರು. ತಿಮ್ಮ ಮೃ ನು ತನ್ನ ವಾಡಿಕೆಯಾದ ರೀತಿ ಯಲ್ಲಿ ಬೀಳುವುದಕ್ಕೆ ಇವಳಿಗೇನಂತೆ ಹೊಡೆದ ಮಾರಿ, ದೊಣ್ಣೆ ಯಹಾಗೆ ಇದಾಳೆ, ಏಳೇ ಸಾಕು ನಿನ್ನ ಬಿತ್ತರಿತನ, ಮನೆಯವ ರೆಲ್ಲಾ ಬಂದು ಉಪಚಾರ ಹೇಳಲಿ ಅಂತ ; ಕಂಣ ಬಿಟ್ಟು ಕೊಂಡು ಎಲ್ಯಾನೋಡುತಾ ಸುಮ್ಮನೇ ಬಿದ್ದಿದಾಳೆ, ಎಂದು ಮನಸ್ಸಿ ಅನ್ನ ಲು ಆರಂಭಿಸಿದಳು. ವೆಂಕಮ್ಮನು ಹಿಡಿದು ಮೇಲಕ್ಕೆ ಎಬ್ಬಿಸುವು ದಕ್ಕೆ ಹೋದಳು;- ನಾನು ಎತ್ತಲಾರ ಯಾರಾದರೂ ಗಂಡ ಸರು ಹಿಡಿದುಮೇಲಕ್ಕೆ ಎತ್ತಿ ಎಂದಳು. ಮಹಾದೇವನೇ ಮೇ ಲಕ್ಕೆ ಹಿಡಿದು ಎತ್ತಿದ ; ನಿಲ್ಲಿಸುವುದಕ್ಕೂ ಆಗಲಿಲ್ಲ, ಕೂರಿಸುವು ದಕ್ಕೂ ಆಗಲಿಲ್ಲ. ಜ್ಞಾನವೇ ಇರಲಿಲ್ಲ. ಹಾಸಿಗೆಯನ್ನು ಹಾಸಿ ಅದರಮೇಲೆ ಮಲಗಿಸಿದರು. ಗ೦ಗಾಯಿತು, ರಾವು ಬಡಿದಿರ ಬಹುದೆಂದು ಕೆಂಪನೀರ ತೆಗೆದು ಹಾಕಿದರು, ತಲೆಗೆ ನೀರತಮ್ಮ ದರು. ಕಿವಿಯಲ್ಲಿ ಊದಿದರು. ಬೀಸಿದರು. ಪಿತ್ತವಾಗಿರಬಹುದೆಂ ದು ಬೆಲ್ಲ ಹುಣಿಸೆಗೊಜ್ಜು ಮೊದಲಾದ್ದೆಲ್ಲವನ್ನೂ ಕೊಟ್ಟರು. ಸದಾಸಿವದೀಕ್ಷಿತನಿಗೂ ಅವರ ತಾಯಿ ಪಾರತಮ್ಮನಿಗೂ ಗೊತ್ತಾ, 27