ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಹಾಗಾದರೆ, ಆಮೆಲೆ | ನೀನು ನಿನ್ನ ಪ್ರಶ್ನೆಗೆ ಉತ್ತರವನ್ನು ನಿನ್ನ ಬಾಯಿಂದಲೇ ಹೊಂದಲಿಲ್ಲವೇ ? ನೀನು ಯಾವ ಪ್ರಾಣವನ್ನಾದರೂ ಹಾಳುಮಾಡಿ, ನನ್ನ ನ್ನು ಹೊಂದಬೇಕೆಂದು ಯತ್ನಿಸಿರುವೆಯೋ, ಅವಳಿಗೆ ನಾನು ಹಚ್ಛೆ ಹೊರತು, ಅವಳ ಪyಣವು ಅವಳಿಗೆ ಹೆಚ್ಛಿಲ್ಲ. ಮತ್ತು, ನಾನು ನನ್ನ ಹೆಂಡತಿಯನ್ನು ನಿಜವಾಗಿ ಯೂ ಪ್ರೀತಿಸುವೆನು. ಹೀಗಿರುವಲ್ಲಿ ನಾನು ಆಕೆಗೆ ಆಸ ಮೃತವಾದ ಕೆಲಸದಲ್ಲಿ ಕೈ ಹಾಕುವುದು ಧರ್ಮವಾಗಿ ಕಂಡುಬರುವುದಿಲ್ಲ. ಹಾಗಾದರೆ ನನ್ನ ಪ್ರಶ್ನೆಗೆ ಇಲ್ಲ ಎಂಬುದೇ ಉತ್ತ ರ ? ಇರಲಿ, ನಿನ್ನ ಹೆಂಡತಿಯ ಮರಣಕ್ಕೆ ನೀನೇ ಕಾರಣ ನೆಂದುತಿಳ ನೀನು ಯಾವ ಕಾರಣದಿಂದಲೂ ನಿನ್ನ ಅಭಿಪ್ರಾಯ ವನ್ನು ಬದಲಾಯಿಸಲಾರೆ ? ಹಾಗಾದರೆ ನೀನು ನನ್ನನ್ನು ದ್ವೇಷಿಸುವೆಯೋ ? ಚೆನ್ನಾಗಿಯೂ ದ್ವೇಷಿಸುವೆನು. ಹಾಗಾದರೆ ರೇವತಿಯು ಚೆನ್ನಾಗಿಯಸಾಯುವಳು. ಅವಳೊಬ್ಬಳೇ ಸಾಯುವುದಿಲ್ಲವೆಂಬುದೂ ನಿಜ. ಹೂ ! ಹೊ !! ಹೋ !!! (ಹಾಸ್ಯ) ನೀನು ನನ್ನನ್ನು ಹೆದರಿಸುವಂತಿದೆ. ಆಹುದು. “ಮಲೆಯು ಮತ್ತೆ ನಕ್ಕಳು. ಆವಳ ಅಮಂಗಳ ಜನಕವಾದ ಪೈಶಾಚಿಕಾಟ್ಟಹಾಸವು, ಮೇಘವಿಲ್ಲದ ಗಗನ ಮಂಡಲದಲ್ಲಿ ಗಂಭೀರವಾದ ಗುಡುಗಿನಂತ ದಿಗಂತವನ್ನು