ಪುಟ:ಜಗನ್ಮೋಹಿನಿ .djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಶ್ರಮ ಮಂಡಲ. ೬೭ ཀ ཀ འ ན ཀ ལ ན ར ར vvvvvvvv, srv 2

  • * * * *

ಬೆಸಸಿ ಆಶನದ ಕಡೆಗೆ ಪಾದಚಾರಿಯಾಗಿ ನಡೆದನು. ಅವನ ಜತೆಗ»ರರಿಬ್ಬರೂ ಅವನನ್ನು ಹಿಂಬಾಲಿಸಿದರು. ಈ ತಪೋವನವು ದೂರದೃಷ್ಟಿಗೆ ಸಣ್ಣದೊಂದು ಉಪ ವನದಂತೆ ಕಾಣುತ್ತಿದ್ದಿ ತು, ಅಲ್ಲಿ ಎಲ್ಲಾ ಋ ತುಗಳ ಫಲಗಳೂ ಪುಷ್ಪಗಳೂ ಎಲ್ಲಿ ನೋಡಿದರಲ್ಲಿ ಕಂಗೊಳಿಸುತ್ತಿದ್ದು ವು. ಇದರ ಸುತ್ತಲೂ ಕೊತ್ತಳದಂತೆ ಎತ್ತರವಾದ ಪರ್ವತ ಶ್ರೇಣಿಗಳಿದ್ದುವು. ಈ ಬೆಟ್ಟಗಳಿಂದ ಜನಿಯುತಿದ ನಿರ್ಮಲವಾದ ನೀರು ಅಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಕಾಲುವೆಗಳಾಗಿ ಹರಿಯುತ್ತಿದ್ದಿ ತು. ಬ ಹ ಚಾರಿಗಳು ಸಮಿತ್ಯ ಶಗಳನ್ನು ತೆಗೆದುಕೊಂಡು ತಮ್ಮ ತಮ್ಮ ಸರ್ಣ ಶಾಲೆಗಳಿಗೆ ಹೋಗುತ್ತಿದ್ದರು. ಆಕಳುಗಳು ಆ ಕಾಡಿನಲ್ಲಿ ಬೇಕಾದಷ್ಟು ಮೇದು ಹಿಂದಿರುಗಿ ತಮ್ಮ ತಮ್ಮ ಕರುಗಳನ್ನು ಅರಸಿಕೊಂಡು ಆಶ್ರಮಕ್ಕೆ ಬಂದು ಸೇರುತ್ತಿದ್ದುವು. ಅಲ್ಲಿಯ ಶುಕ ಶಾರಿ ಕಾದಿ ಪಕ್ಷಿಗಳು ಸಂಧ್ಯಾವಂದನೆಯ ಮಂತ್ರ ವನ್ನು ಉಚ್ಚರಿಸು ತ್ತಾ ತಮ್ಮ ತಮ್ಮ ಗೂಡುಗಳ ಸುತ್ತ ಮುತ್ತ ಲೂ ಹಾರಾಡುತ್ತಿದ್ದುವು, ಕಾಡು ಮೃಗಗಳೆಲ್ಲವೂ ತಮ್ಮ ತಮ್ಮ ಸ್ವಾಭಾವಿಕವಾದ ವೈರವನ್ನು ಬಿಟ್ಟು ಒಡಹುಟ್ಟಿದುವುಗಳಂತೆ ಪರಸ್ಪರ ಸಾಹಾಯ್ಕ ಮಾಡುತ್ತಾ ಆಶಮ ವಾಟಿಯಲ್ಲಿ ನಿರ್ಭ ಯವಾಗಿ ಓಡಾಡುತ್ತಿದ್ದುವು. ಆ ತಪೋವನದ ನಡುವೆ ನೀಳವಾದ ಕೊಂಬೆಗಳ ಸಮ್ಮೆ ತನದಿಂದ ದೊಡ್ಡ ಕ ಪ್ರಾನೆ ಕೊಡೆಯಂತೆ ಒಂದು ಸೀ ಮಾವಿನ ಮರಗಳ ತೋಪು ಇದ್ದಿತು. ಇದರ ಕೆಳಗೆ ಸುಮಾರು ಎಂಟು ಹತ್ತು ಸರ್ಣಶಾಲೆಗಳು ಅಲ್ಲಲ್ಲಿ ಕಾಣುತ್ತಿದ್ದುವು. - ಇವುಗಳ ಮಧ್ಯದಲ್ಲಿದ್ದ ಪರ್ಣಶಾಲೆಯ ಮುಂದುಗಡೆ ದೊಡ್ಡದೊಂದು ವಸಾರೆ ಇದ್ದಿ ತು, ಇದರ ಮುಂದುಗಡೆ ಮೂರು ಅಗ್ನಿ ಕುಂಡಗಳಿದ್ದುವು. ಇವುಗಳಿಂದ ಏಳುತ್ತಿದ್ದ ಹೊಗೆಯು,