ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fo ಸುರಸಗ್ರಂಥಮಾಲಾ, ನೈವೇದ್ಯ ಸಮರ್ಪಣವಾಯಿತು; ಫಲಗಳನ್ನು ವಿಪುಲವಾಗಿ ಸಮರ್ಪಿಸಿದರು; ಎಲ್ಲರ ದೇವರಿಗೆ ನಮಸ್ಕಾರಮಾಡಿದರು. ತರುವಾಯ ಕಲ್ಯಾಣಸ್ವಾಮಿಗಳು ಪುರಾಣದ ಒಂದು ಅಧ್ಯಾಯವನ್ನು ಹೇಳಿದರು . ಕಥಾಶ್ರವಣದಲ್ಲಿ ಜನರ ಮನಸ್ಸುಗಳು ತಲ್ಲೀನವಾದವು . ಪುರಾ ಣವು ಮುಗಿದಕೂಡಲೆ ಅಡಿಗೆಯು ಸಿದ್ಧವಾಗಿರುವ ವರ್ತಮಾನವು ಬಂದಿತು. ಕೂಡಲೆ ಎಲ್ಲರು ಶ್ರೀ ಸಮರ್ಥ ರಾಮದಾಸಸಾಮಿಗಳ ಸಮಾಧಿಯ ಪೂಜೆಗಾಗಿ ಹೋದರು. ಅಲ್ಲಿ, ಯಥಾಸಾಂಗ ಪೂಜೆಯಾದಬಳಿಕ, ಹಲವು ಮಾನ ಕರಿಗಳು ಸಮಾಧಿಗೆ ಗಂಧವನ್ನು ಲೇಪಿಸಿದರು; ಕೆಲವರು ಪ್ರಪ್ಪ ಮಾಲೆಗಳನ್ನು ಹಾಕಿದರು, ಕಲವರು ಸಹಸ್ರ ತುಲಸೀದಳಗಳನ್ನು ಏರಿಸಿದರು. ಈ ಕಾಲದಲ್ಲಿ ರಾಜಾರಾ ಮ ಮಹಾರಾಜರು ಕೇವಲ ಭಕ್ತಿಪರವಶರಾಗಿದ್ದರು. ಶ್ರೀ ಸಮರ್ಥರ ಸಮಾಧಿ ಯು, ಸಂಪೂರ್ಣವಾಗಿ ಮಹಾರಾಜರ ಚಿತ್ಯಹರಣ ಮಾಡಿದಂತೆ ತೋರಿತು, ಮಹಾ ರಾಜರು ಲಜ್ಜೆದೊರೆದು ಆನಂದದಿಂದ ತಲೆದೂಗುತ್ತ ಕುಳಿತುಕೊಂಡಿದ್ದರು; ಅವರ ಕಣ್ಣುಗಳೊಳಗಿಂದ ಘಳಘಳನೆ ನೀರುಗಳು ಸುರಿಯುತ್ತಲಿದ್ದವು . ಛತ್ರಪತಿಯ ಈ ತಲ್ಲೀನ ಸ್ಥಿತಿಯು ರಂಗನಾಥ ಸ್ವಾಮಿಗಳ ದೃಷ್ಟಿಗೆ ಬೀಳದೆ ಹೋಗಲಿಲ್ಲ. ಆಗ ಅವರು ಕಲ್ಯಾಣ ಸ್ವಾ ಮಿ ಗ ಳ ನ್ನು ಕುರಿತು ಆಜ್ಞಾಪಿಸಿದರೇನಂದರೆಕಲ್ಯಾಣ, ಕಲ್ಯಾಣ, ಸಮರ್ಥರ ಮನೋದಯವನ್ನು ಛತ್ರಪತಿಗೆ ತಿಳಿಸುವ ಸಮ ಯವಾಯಿತು , ಕರೆ, ಉದ್ದವನು ಎಲ್ಲಿ ಇದ್ದಾನೆ? ಸಮರ್ಥರು ಸಮಾಧಿಸ್ಥರಾದ ರಂದು ಈವೀರರು ಮುಗಿಬಿದ್ದು ಯುದ್ಧ ಮಾಡುವ ಈಗಿನ ಪ್ರಸಂಗದಲ್ಲಿ ಕೈ ಕಾಲು ಗೆಟ್ಟು ಕುಳಿತುಕೊಂಡಿರುತ್ತಾರೆ; ಇವರಲ್ಲಿ ನೈರಾಶವು ಉತ್ಪನ್ನ ವಾ ಗಿ ರು ದೆ; ಇವರು ತಮ್ಮ ಜೀವಕ್ಕೆ ಬೇಸತ್ತಿರುತ್ತಾರೆ. ಆದ್ದರಿಂದ ಉದ್ಭವಸ್ವಾಮಿ, ಇನ್ನು ನೀವು ಇವರಿಗೆ ಸಮರ್ಥರ ಸಂದೇಶವನ್ನು ಹೇಳಿರಿ. ಶ್ರೀ ರಂಗನಾಥ ಸ್ವಾಮಿಗಳು ಹೀಗೆ ಆಜ್ಞಾಪಿಸಿದ ಕೂಡಲೆ-ಇಂದು ಊಟಕ್ಕೆ ಸ್ವಲ್ಪ ತಡವಾಗುವದೆಂದು ಹೇಳಿ ಕಳಿಸಿ, ಉದ್ದವಸ್ವಾಮಿಗಳು ರಾಜಾರಾಮ ಮಹಾರಾ ಇರಬಳಿಗೆ ಬಂದು ವಾತ್ಸಲ್ಯದಿಂದ ಅವರ ಕಣ್ಣೀರು ಒರಿಸಿದರು. ಸತ್ಪುರುಷರು ಮಾಡಿದ ಈ ಪರಿಯ ಪ್ರೇಮದಿಂದಂತು ಮಹಾರಾಜರ ದು:ಖವು ಒತ್ತರಿಸಿತು. ಅತ್ರ, ರಾಮಚಂದ್ರಪಂತ, ಪ್ರಹ್ಲಾದಪಂತ, ಸಂತಾಜಿ, ಧನಾಜಿ, ಮೊಲಾದವರು ತಮ್ಮ ಗಾಂಭೀರ್ಯವನ್ನು ತೊರೆದು ಮೋರೆಗೆ ಶರಗು ಹಾಕಿ ದುಃಖಿಸಹತ್ತಿದರು; ಪ್ರಿಯವಾಜ ಕರೇ, ಮೋಕ್ಷದಾತೃವಾದ ಸದ್ಗುರುವು ಹಡೆದತಾಯಿಗಿಂತ ಅಧಿಕನಲ್ಲವೆ? ಅಂದಬಳಿಕ