ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܝܼܿ ܬ ದಿವ್ಯಸುಖದರಿ ಅಥವಾ ದೀರ್ಘ ಪ್ರಯತ್ನ, ಅನುಭವವಾಗುವದಿಲ್ಲವೋ ಅವರು ಸಗುಣಭಕ್ತಿಯನ್ನು ಮಾಡುವದು ನೆಟ್ಟಗೋ, ನಿರ್ಗುಣಭಕ್ತಿಯನ್ನು ಮಾಡುವದು ನೆಟ್ಟ ಗೋ? ೨೨. ನರ್ಮದ:-( ದಿವ್ಯಸುಂದರಿ, ಯಾರಿಗೆ ಅನುಭವದಿಂದ ದೇವರ ನಿರಾಕಾರ ತ್ವವನ್ನು ಪ್ರತ್ಯಕ್ಷ ನೋಡುವ ಸಾಮರ್ಥವಿಲ್ಲವೋ ಅವರು, ಪರಮೇಶ್ವರನ ಸಗುಣಸ್ವ ರೂಪಕ್ಕೆ ಅಥವಾ ಸಗುಣಭಕ್ತಿಗೆ ಹೆಸರಿಡುವದು ಮೂರ್ಖತನವಾಗಿದೆ. ಪರಮೇಶ್ವ ರನ ಆಕಾರವು ಸಾಕಾರವಾದದ್ದೂ ನಿರಾಕಾರವಾದದ್ದೋ ಎಂಬ ಪ್ರಶ್ನೆಯು ಯಾರ ಅಂತಃಕರಣದಲ್ಲಿ ಉತ್ಪನ್ನವಾಗುತ್ತದೆಯೋ, ಅವರ ಅಂತಃಕರಣವು ಅತ್ಯಂತ ಕ್ಷುದ್ರ ವಿಚಾರಗಳಿಂದ ಮಲಿನವಾಗಿದೆಯೆಂದು ನಿಶ್ಚಂಕವಾಗಿ ಹೇಳಬಹುದು, ಯಾರ ಅಂತಃ ಕರಣವು ಕೇವಲ ಭಕ್ತಿಯಿಂದಲೇ ತುಂಬಿರುತ್ತದೆಯೋ ಅವರ ಅಂತಃಕರಣದಲ್ಲಿ ದೇವರು ಹೇಗಿದ್ದಾನೆಂಬ ಪ್ರಶ್ನೆ ಯು ಉತ್ಪನ್ನ ವಾಗಲಿಕ್ಕೆ ಸ್ಥಳವೇ ಇರುವದಿಲ್ಲ. ಅವರು ಯಾವದೊಂದು ಪಾಷಾಣಮೂರ್ತಿಯ ಮುಂದಾಗಲಿ, ಅಥವಾ ಕಾಷ್ಯಮೂರ್ತಿಯ ಮುಂದಾಗಲಿ, ಅಥವಾ ಯಾವದೊಂದು ಧಾತುಮೂರ್ತಿಯ ಮುಂದಾಗಲಿ ಕೂಡ್ರಲಿ; ಅವರು ಎದುರಿನ ಮೂರ್ತಿಯ ಘಟಕಾವಯವಗಳ ಕಡೆಗೂ, ಸ್ವರೂಪದ ಕಡೆಗೂ ಲಕ್ಷಗೊಡದೆ ಅದರೊಳಗಿನ ಚೈತನ್ಯದ ಕಡೆಗೆ ಲಕ್ಷಗೊಡುತ್ತಾರೆ. ಎರಡನೆಯವರ ಉದಾಹರಣೆ ಯಾಕೆ ? ನೀನು ಆ ಗೌರೀಶಂಕರನ ಭಾವಪಟದ ಮುಂದೆ ಏನೆಂದು ಕೂಡ್ರುವಿ? ಭಾವಪಟದ ಚೌಕಟ್ಟು ವಿಲಾಯತಿಯದು, ಕಾಜಿನ ಹರಳು ಜರ್ಮನಿ ಯದು, ಚಿತ್ರವು ರವಿವರ್ಮನದು, ಎಂದು ಅದರ ಮುಂದೆ ಕೂಡುವಿಯೇನು ? ಇಲ್ಲ. ನೀನು ಆ ಚೌಕಟ್ಟಿನ ಅಥವಾ ಚಿತ್ರದ ಪೂಜೆಮಾಡುವದಿಲ್ಲ. ಶ್ರೀಶಂಕರನ ಅತುಲ ಸಾಮರ್ಥದ ಪೂಜೆಯನ್ನು ಮಾಡುವಿ, ನಿರಾಕಾರತತ್ವವನ್ನು ಅನುಭವದಿಂದ ತಿಳಿ ಯುವಂಥ ಸಾಮರ್ಥವಿಲ್ಲದವರು ತಾವು ಸ್ವತಃ ನಿರಾಕಾರದ ವಿಷಯವಾಗಿ ಭ್ರಮಿಷ್ಟ ರಾಗಿ, ವಾಕ್ಸಟುತ್ವದಿಂದ ಎರಡನೆಯವರನ್ನೂ ಭ್ರಮಿಷ್ಟರನ್ನಾಗಿ ಮಾಡುವದಕ್ಕಿಂತ ಮೂರ್ತಿಪೂಜಕರಾಗುವದು ಬಹಳ ಉತ್ತಮ. ಉಪನಿಷಧ, ವೇದ, ಬಾಯಬಲ, ಕುರಾಣ ಮೊದಲಾದ ಗ್ರಂಥಗಳಲ್ಲಿ ಏನೋ ಅಲ್ಪ ಸ್ವಲ್ಪ ನಿರಕಾರದ ವಿಷಯವು ಹೊರಟಿತೆಂದರೆ, ಅಷ್ಟರ ಮೇಲಿಂದ ಮೂರ್ತಿಯನ್ನು ಒಗೆಯುವ, ನಾನು ನಿರಾಕಾರ ವಾದಿಯೆಂದು ಹೇಳುವ ಅಧಿಕಾರವು ಯಾರಿಗೂ ಇಲ್ಲ. ನಿರಾಕಾರವಾದಿಯಾಗಬೇ ಕೆಂದು ಅನ್ನುವವರು ಆ ಪ್ರಕಾರದ ಅಭ್ಯಾಸಮಾಡಿ, ಆತ್ಮವನ್ನು ಪರಮಾತ್ಮನೊಡನೆ ತಾದಾತ್ಮ ಮಾಡುವ ಸಾಮರ್ಥವನ್ನು ಸಂಪಾದಿಸಿಕೊಳ್ಳಬೇಕು, ನಂತರ ನಾವು ನಿರ್ಗುಣೋಪಾಸಕರೆಂದು ಹೇಳಬೇಕು, ದಿವ್ಯಸುಂದರಿ,* ಈ ನಿರ್ಗುಣೋಪಾಸದ ಅಭ್ಯಾಸವನ್ನು ಮಾಡುವದಾದರೂ ಬಹಳ ಕಠಿಣ. ಅದಕ್ಕೆ ಶುದ್ಧಾಚರಣೆಯ ಮನೋನಿಗ್ರಹವೂ ಬೇಕು, ನಿರ್ಗುಣೋಪಾಸನವು ಇದೆ ಇಂದು ವಕ್ಷ್ಯತ್ವದ ವಿಷಯ ವಲ್ಲ, ಅದಕ್ಕೆ ಅನುಭವಸಾಮರ್ಥವೇ ಬೇಕು. ಈ ಸಾಮರ್ಥವನ್ನು ದೊರಕಿಸಿ