ಪುಟ:ನಿರ್ಮಲೆ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ಕಾಮ:- ನಾನು ಕೇಳಿದಅಮೃತವು ಪರದೇಶದುದಲ್ಲ, ಅದು ಸ್ವದೇಶಿ. ನಿರ:-ಅದು ಸ್ವದೇಶದವಸ್ತುವೆ ? ಪಾಗಾದರೆ, ಅದು ಎಂತಹದೆಂ ಬುದು ನನಗೆ ತಿಳಿಯದೆ ಇರುವುದು ಆಶ್ಚರವೇಸರಿ, ನಾವು ಎಷ್ಟೋ ಬಗೆಯ ಪಾನೀಯಗಳನ್ನು ತಯಾರಾಡುವೆವು. ನಾನು ಇಲ್ಲಿ ಹದಿನೆಂಟು ವರ್ಷಗಳಿಂದ ಕೆಲಸಮಾಡಿಕೊಂಡಿರುವೆನು, ಇದುವರೆಗೂ ಆ ಹೆಸರ ಕೇಳಿರಲಿಲ್ಲವಲ್ಲ ? ರಾಮ:-ಹದಿನೆಂಟು ವರ್ಷದಿಂದ ಎಲ್ ಹುಡುಗಿ, ನೀನು ಹುಟ್ಟು ಇದಕ್ಕೆ ಮೊದಲೇ ದೂತಿಯಾಗಿದ್ದೆಯೆಂದು ತೋರುವುದು, ಹೋಗಲಿ, ಈಗ ನಿನಗೆಷ್ಟು ವರ್ಷವಯಸ್ಸು ? ನಿರ:-ಸ್ವಾಮಿ, ಹೆಂಗಸರು ವಯಸ್ಸನ್ನು ಹೇಳಲೂಬಾರದು; ನೀವು ಕೇಳಲೂಬಾರದು, ಹೆಂಗಸಿನ ವಯಸ್ಸನ್ನೂ, ಸಂಗೀತವನ್ನು ಕಲಿಯಲು ಪ್ರಾ ರಂಭಿಸಿದ ಕಾಲವನ್ನೂ ಕೇಳಬಾರದಂತೆ. ರಾಮ: ಇಲ್ಲಿ ಮೇನಿಂತು ನಿನ್ನ ವಯಸ್ಸನ್ನು ಹೇಳಬೇಕಾದರೆ, ನಲವ ತನ್ನು ಮೀರಿರಬಹುದೆಂದು ತೋರುವುದು, (ಹತ್ತಿರಕ್ಕೆ ಹೋಗಿ) ಇಲ್ಲಿ ನಿಂತು ಹೇಳಬೇಕಾದರೆ, ಪ್ರಾಯಶಃ ಇಪ್ಪತ್ತೈದೆನ್ನ ಲೆ? (ಇನ್ನೂ ಹತ್ತಿರಕ್ಕೆ ಹೋಗಿ ಚುಂಬನ ಮಾಡಲೆಳೆಸಿ) ಎಂ, ಎಲಾ, ಇನ್ನೂ ಹುಡುಗಿಯಂತಿರುವಿ, ನಿನಗೆ ಈಗಲೇ ಯೌವನವು ಪ್ರಾಪ್ತವಾಗಿರಬಹುದು. ನಿರ: ಸ್ವಾಮಿ, ತಾವು ಅಲ್ಲಿಯೇಇದ್ದು ವಯಸ್ಸನ್ನು ಹೇಳಬಹುದು. ಬಾಯನ್ನು ತೆಗೆದು ಹಲ್ಲುಗಳನ್ನು ನೋಡಿ ವಯಸ್ಸನ್ನು ಹೇಳುವುದು, ಹಸು, ಕುದುರೆ ಮೊದಲಾದುವುಗಳಿಗೆ, ಮನುಷ್ಯರಿಗಲ್ಲ. ರಾಮ:-ನೀನು ಹಾಗೆಂದರೆ ಅನ್ಯಾಯವಾಡಿದಂತೆಯೇ ಸರಿ. ನೀನು ಹೀಗೆ ದೂರದೂರವಾಗಿ ಹೋದರೆ, ನಮ್ಮಿಬ್ಬರಿಗೂ ಸ್ನೇಹವು ಒಳೆ ಯುವುದೆಂತು ? ನಿರ: -.ತಮ್ಮಸ್ಸೇಹವು ಯಾರಿಗೆ ಬೇಕಾಗಿದೆ? ತಮ್ಮಂತಹರ ಸ್ನೇಹವು