ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರೂರಪರೀಕ್ಷೆ h೬ wwwಂದ MMMMMMMM ಮಾನಸಿಂಹರು ತಿರುಗಿ ಹೋದರೆಂದು ಹೇಳಿದ್ದೇವೆ. ಇವರಲ್ಲಿ ಭಗವಾನದಾಸನು ರಾಜಧಾನಿಗೆ ಹೋದನು. ಮುಂದೆ ಕೆಲವು ದಿವಸಗಳಾದ ಮೇಲೆ, ಪಂಜಾಬದ ಸುಭೇದಾರನಾದನು. ಮಾನಸಿಂಹನು ಕೆಲವು ದಿವಸಗಳ ವರೆಗೆ ಪರ್ವತದ ಅಂಚಿ ನಲ್ಲಿದ್ದನು. ಇವನು ಧರಮೇಶ್ ಮತ್ತ ಗೋಗುಂಡ ಪಟ್ಟಣಗಳನ್ನು ಕೈವಶ ಮಾಡಿಕೊಂಡಿದ್ದನು. ಶಹಬಾಜಖಾನನು ಹೋದತರುವಾಯ ಮಹಬಲ್‌ಖಾನನು ಉದಯಪುರದಲ್ಲಿ ರತೊಡಗಿದನು. ಆದರೆ ಪ್ರತಾಪಸಿಂಹನೆಲ್ಲಿ ಹೋದನೆಂಬದನ್ನು ಯಾರೂ ತಿಳಿಯಲು ಸಮರ್ಧರಾಗಲಿಲ್ಲ. ಮೇವಾಡದ ನೈರುತ್ಯಭಾಗದಲ್ಲಿ ಚಪ್ಪನವೆಂಬ ಒಂದು ಪ್ರದೇಶವಿದೆ. ಇದು ಗುಡ್ಡಗಳಿಂದ ತುಂಬಿದ್ದು, ಇದರಲ್ಲಿ ಸುಮಾರು ಮೂರುವರೆ ನೂರು ಸಣ್ಣ ಹಳ್ಳಿಗಳಿವೆ. ಈ ಯಾವತ್ತು ಹಳ್ಳಿಗಳಲ್ಲಿ ಭಿಲ್ಲರು ವಾಸಿಸುವರು. ಈ ಪ್ರದೇಶದ ಮುಖ್ಯ ಪಟ್ಟಣವು ಚಾಂದಾ ಎಂಬದಿದ್ದು, ಇದು ಬಹು ಎತ್ತರದ ಮೇಲಿರುವದು. ಕಾರಣ ಶತ್ರುಗಳು ಇದನ್ನು ಸುಲಭವಾಗಿ ಆಕ್ರಮಿಸುವಂತಿದ್ದಿಲ್ಲ. ಅದರಿಂದ ಪ್ರತಾಪನು ಕಮಲಮೀರವನ್ನು ಬಿಟ್ಟು ಬಂದು, ಈ ಚಾಂದ್ರಾ ನಗರದಲ್ಲಿ ವಾಸ ಮಾಡತೊಡಗಿದನು. ಎಲ್ಲವೂ ಹೋಗಲಿ, ಆದರೆ ಯವನನಿಗೆ ಅವನತನಾಗಲಿಕ್ಕಿಲ್ಲವೆಂಬದು ಪ್ರತಾಪನ ಪ್ರತಿಜ್ಞೆಯು, ಯಾವದೇ ರೀತಿಯಿಂದಾಗಲಿ, ಪ್ರತಾಪನನ್ನು ಅವನತ ನನ್ನಾಗಿ ಮಾಡಿಯೇ ತೀರುವೆನೆಂಬದು ಅಕಬರನ ಪ್ರತಿಜ್ಞೆಯು, ಅಕಬರನು ಬೇರೆ ಬೇರೆ ಸೇನಾಪತಿಗಳ ಕೈಯಲ್ಲಿ ಸೈನಿಕರನ್ನು ಕೊಟ್ಟು ಮೇವಾಡವನ್ನು ಜಯಿಸುವದಕ್ಕಾಗಿ ಕಳುಹಿಸಹತ್ತಿದನು. ಈ ಸೇನಾಪತಿಗಳು ಮೇವಾಡದ ಅನೇಕ ಸ್ಥಳಗಳನ್ನು ವ್ಯಾಪಿಸಿದರು, ಪ್ರತಾಪನನ್ನು ಹುಡುಕಹತ್ತಿದರು ಪ್ರತಾ ಪನು ತನ್ನ ಮುಖ್ಯಮಯ ಸೈನಿಕರನ್ನು ಕಟ್ಟಿಕೊಂಡು ಓರ್ವ ಸೇನಾಪತಿಯ ಕೈಯಿಂದ ಪಾರಾಗುವದಕ್ಕಾಗಿ ಬೇರೊಂದು ಕಡೆಗೆ ಹೋಗುವನು. ಅಲ್ಲಿ ಬೇರೆ ಬ್ಬ ಸೇನಾಪತಿಯು ಅವನನ್ನು ಮುತ್ತುವನು; ಮತ್ತೆ ಪ್ರತಾಪನು ಬೇರೊಂದು ಕಡೆಗೆ ಹೋಗುವನು. ಕೆಲವು ರಜಪೂತರು ಪ್ರತಾಪನ ಶತ್ರುಗಳಾಗಿದ್ದರು.

  • ಇದು ಉದಯಪುರದ ಉತ್ತರ ದಿಕ್ಕಿನಲ್ಲಿರುವ ರಾಜಸಮುದ್ರದ ಹತ್ತಿರದಲ್ಲಿರುವ ರೂಂದು ಸಣ್ಣ ಪಟ್ಟಣವು,

10