ಪುಟ:ಶ್ರೀಮತಿ ಪರಿಣಯಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣಯಂ ಯದಲ್ಲಿ, ನಾನು ನನ್ನಿಂದಾಗಬಹುದಾದ ಸಹಾಯವನ್ನು ಮಾ ಡಬಹುದು, ಇಲ್ಲದಿದ್ದರೆ ಉಃ ! ನನ್ನ ಮುಂದೆ ' ಆ ಮಾತ ನೈ ಎತ್ತಬೇಡ ? ವಿದೂ-ಸಂತೋಷದಿಂದ ವಿದೂಷಕನ ಬೆನ್ನನ್ನು ತಟ್ಟಿ) ಆಧ್ಯಾ ! ಭಲೆ ! ಭಲೆ ! ನಾನು ಮನಸ್ಸಿನಲ್ಲಿ ಉದ್ದೇಶಿಸಿದುದನ್ನೇ ನೀನೂ ಹೇಳುತ್ತಿರುವೆ ? ನಮ್ಮ ನಾಟಕವು ಸಕಲಜನಮನೋರಂಜಕ ವಾಗುವುದೆಂಬುದಕ್ಕೆ ಇದೇ ಶುಭಸೂಚನೆಯಾಗಿದೆ. ಶ್ರೀಮ ತೀಪರಿಣಯವೆಂಬ ಒಂದು ಹೊಸನಾಟಕವು ಈಗ ನನ್ನ ಹಸ್ತ ಗತವಾಗಿರುವುದು, ಅದು ನಿನ್ನ ಇಷ್ಟಾನುಸಾರವಾಗಿಯೇ ಹಾ ಸ್ಯರಸಪ್ರಚುರವಾಗಿ, ಮಹರ್ಷಿಗಳ ಚರಿತ್ರದಿಂದ ಮಿಶ್ರಿತವಾ ಗಿರುವುದು, ಇತರವಿಷಯಗಳಲ್ಲಿ ಆ ನಾಟಕದ ಪ್ರಶಂಸೆಯನ್ನು ಕುರಿತು ನಾನು ಬೇರೇನೂ ಹೇಳಬೇಕಾದುದಿಲ್ಲ.ಕೇಳು! ಕಂ!! ಲೋಕೈಕನಾಯಕನೆ ತಾ ನೀಕೃತಿನಾಯಕನಶೇಷಜಗದೀಶ್ವರಿ ಲ ! ಕ್ಷ್ಮೀಕಾಂತ ನಾಯಿಕೆಯೆನ . ° ಕಾವ್ಯದ ಮಹಿಮೆ ಬಣ್ಣಿಸಲ್ಪಂದಪುದೇ!! ವಿದೂ-ಭರತಾಚಾಯ್ಯಾ ! ಚೆನ್ನಾಗಿ ಹೇಳಿದೆ ! ಪೂರೈಕವಿಗಳಿಂದ ರಚಿತ ವಾದ ಎಷ್ಟೋ ನಾಟಕಗಳಿರುವಾಗ, ಅವೆಲ್ಲವನ್ನೂ ಬಿಟ್ಟು, ಅನಾಮಧೇಯನಾದ ಯಾವನೋ ಒಬ್ಬನಿಂದ ರಚಿತವಾದ ಈ ಹೊಸನಾಟಕದಲ್ಲಿ, ಈ ಸಭಾಸದರಿಗೆ ಹೇಗೆತಾನೇ ಗೌ ರವಬುದ್ದಿಯು ಹುಟ್ಟುವುದು ? ಸೂತ್ರ-ಮಿತ್ರನೆ! ಹಾಗೆಣಿಸಬೇಡ ! ಕol' ಪಳದು ಪೊಸತೆಂಬಮಾತ್ರದಿ ನಿಳೆಯೋಳ ಗುಣದೋಷಗಣನೆಯಜ್ಞತೆಯೆನಿಕುಂ | ತಿಳಿವಳ್ಳರಖಿಲವಸ್ತುವ ನೊಳಪೊಕ್ಕಾರಯ್ಯರಿ! ಗುಣದೋಷಗಳಂ ||