ಅಂಗದ ಕೊನೆಯಲ್ಲಿ ಅಲೆದಾಡುವ ಕಪಿಯ ಕಂಗಳ ಕೊನೆಯ ಬಿಡುಮುಳ್ಳು ತಾಕಲು ಭಂಗಿತರಾದರು ಹರಿ ಬ್ರಹ್ಮರೆಲ್ಲರು. ಅಂಗದ ಕೊನೆಯ ಮೊನೆಯ ಬಿಡುಮುಳ್ಳ ಮುರಿಯಲು ಮಂಗಳಮಯ ಮಹಾಲಿಂಗವಾಯಿತ್ತು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.