ಅಂಗದ ಮೇಲೆ ಲಿಂಗ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಂಗದ
ಮೇಲೆ
ಲಿಂಗ
ಕಾಣಲ್ಪಡುತಿಪ್ಪುದಯ್ಯ.
ಅಂಗದೊಳಗೆ
ಪ್ರಾಣವಿಪ್ಪುದಯ್ಯ.
ತನುವಿನ
ಮೇಲಿಪ್ಪ
ಲಿಂಗವ
ಮನದಲ್ಲಿ
ಸ್ವಾಯತಮಾಡಿ
ನೆರೆಯಲರಿಯದೆ
ಧನ
ಕಾಮಿನಿಯರ
ಭ್ರಾಂತಿನಲ್ಲಿ
ಜಿನುಗುವ
ಮನುಜರಿಗೆ
ಪ್ರಾಣಲಿಂಗವೆಂದೇನೋ
ಹೇಳಾ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.