ವಿಷಯಕ್ಕೆ ಹೋಗು

ಅಂಥ ನಿತ್ಯಾನಂದವೆಂಬ ಬ್ರಹ್ಮಾಂಡವ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಅಂಥ ಬ್ರಹ್ಮಾಂಡವ ಇಪ್ಪತ್ತೆರಡು ಸಾವಿರದ ಇನ್ನೂರಾಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ನಿತ್ಯಾನಂದವೆಂಬ ಭುವನ ಆ ಭುವನದೊಳು ನೀಲಲೋಹಿತನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನೂರಾಹತ್ತುಕೋಟಿ ರುದ್ರ ಬ್ರಹ್ಮ ನಾರಾಯಣರು ಇಂದ್ರಚಂದ್ರಾದಿತ್ಯರು
ನೂರಾಹತ್ತುಕೋಟಿ ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.