ಅತ್ತ ಇತ್ತ ಹರಿದಾಡುವ ಮನಸಿಗೆ
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಅತ್ತ ಇತ್ತ ಹರಿದಾಡುವ ಮನಸಿಗೆ[ಸಂಪಾದಿಸಿ]
- ಧ್ಯಾನದಲ್ಲಿ ಮನಸ್ಸನ್ನು ಕೇಂದ್ರಿಕರಿಸಲು ಬೋಧ:
ಅತ್ತ ಇತ್ತ ಹರಿದಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.||ಪಲ್ಲವಿ||
ಕಡುವಿಷಯದಿ ಸಂಸಾರಕೆ ಮರುಗುತ
ಪೊಡವಿ ತಳದಿ ಮಿಡಿಕ್ಯಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.||೧||
ಸಿರಿ ಸಂಪದ ಸೌಭಾಗ್ಯ ತನಗೆ ಬಲು
ಹಿರಿದಾಗಲಿಬೇಕೆಂಬುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.||೨||
ವಸುಧೆಯೊಳಗೆ ಶಿಶುನಾಳಾಧೀಶನ
ಹೆಸರು ಮರೆತು ಕೊಸರ್‍ಯಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.||೩||
ನೋಡಿ[ಸಂಪಾದಿಸಿ]
ಉಲ್ಲೇಖ[ಸಂಪಾದಿಸಿ]
- ಶಿಶುನಾಳ ಶರೀಫರ ಪದಗಳು -ಅನಾಮಿಕ