ವಿಷಯಕ್ಕೆ ಹೋಗು

ಅನ್ನಪೂರ್ಣಾ/ಬದುಕುವ ಬಯಕೆ

ವಿಕಿಸೋರ್ಸ್ದಿಂದ
ಅನ್ನಪೂರ್ಣಾ
ಬದುಕುವ ಬಯಕೆ

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).

90767ಅನ್ನಪೂರ್ಣಾ — ಬದುಕುವ ಬಯಕೆ

ಓದುವದಕ್ಕೆ ಮು೦ಚೆ

'ಅನ್ನಪೂರ್ಣಾ' ಕಥಾಸಂಕಲನದಲ್ಲಿ ಹತ್ತು ಸಣ್ಣಕತೆಗಳಿವೆ. ಕೊನೆಯದಾದ ' ಅನ್ನಪೂರ್ಣಾ ' ಕತೆಯನ್ನು ನಾನು ೧೯೪೧ರಲ್ಲಿ ಬರೆದೆ. ವೆಾದಲಿನದಾದಾ 'ಬದುಕುವ ಬಯಕೆ' ೧೯೫೧ರದು. ಕಳೆದ ವರ್ಷ ಬರೆದ ಎರಡು ಕತೆಗಳೂ ಈ ಸಂಗ್ರಹದಲ್ಲಿವೆ.

ಬರೆದವನು ತನ್ನ ಕೃತಿಗಳ ಬಗೆಗೆ ಏನಾದರೂ ಹೇಳಿಕೊಂಡಾಗ, ವಿಮರ್ಶಕರು ಆ ಹೇಳಿಕೆಯ ಒರೆಗಲ್ಲಿಗೆ ಅವನ ಕೃತಿಗಳನ್ನು ತೀಡಿನೋಡುತ್ತಾರೆ.ಬರೆದವನ ಮಾನದ೦ಡದಿ೦ದಲೂ ಅಳೆದು ನೋಡುತ್ತಾರೆ. ಇದರಿಂದ ಲಾಭವೂ ಇದೆ. ಪ್ರಾಮಾಣಿಕನಾದ ವಿನಯಶೀಲನಾದ ಬರಹಗಾರನಿಗೆ ಲಾಭ: ಅಪ್ರಾಮಾಣಿಕನಾದ ಅಹಂಕಾರಿಯಾದ ಬರೆಹಗಾರನಿಗೆ ನಷ್ಟ.

ಕೃತಿರಚಿಸಿದವನ ಹೇಳಿಕೆಯಿ೦ದ ಇನ್ನೊ೦ದು ಪ್ರಯೋಜನವಿದೆ. ಅದು ಓದುಗನಿಗೆ ಆಗುವ ಪ್ರಯೋಜನ. ಕೃತಿಗಳನ್ನು ಸರಿಯಾಗಿ ತಿಳಿದುಕೊಳ್ಳಲು ಅಂಥ ಹೇಳಿಕೆ ಸಹಾಯಕವಾಗುತ್ತದೆ.

ಇಲ್ಲಿರುವ ಕತೆಗಳಲ್ಲಿ 'ಬದುಕುವ ಬಯಕೆ' ವೀರಸಂತಾನಕ್ಕಾಗಿ ಹಾತೊರೆಯುವ ವೇಶ್ಯೆಯೊಬ್ಬಳ ಕತ ಕಾಮದ ದೃಷ್ಟಿಯಿಂದಲ್ಲ, ಮಾನವತೆಯ ದೃಷ್ಟಿಯಿಂದ ಅದು ಬರೆಯಲ್ಪಟ್ಟಿದೆ.

'ಸುಮಂಗಲೆ ಶಿರಿನ್ ' ಮತ್ತು 'ಕೇರಾಫ್ ಕಾಗದ', ನಮ್ಮ ಈಗಿನ ಮಧ್ಯಮವರ್ಗದ ಎಳೆಯರ ಪ್ರೇಮ ವ್ಯವಹಾರಗಳಿಗೆ ಸಂಬಂಧಿಸಿವೆ. ಒಂದರಲ್ಲಿ, ದುರಂತದಲ್ಲಿ ಮುಕ್ತಾಯವಾಗುವ ತಪ್ಪು ಹಾದಿಯಿದೆ. ಇನ್ನೊ೦ದರಲ್ಲಿರುವುದು ಸರಿಯಾದ ಹಾದಿ. ಕುರುಡು ಸಂಪ್ರದಾಯಗಳ ದಾಸರು ಚಿಗುರುವ ಬಳ್ಳಿಗಳನ್ನು ಚಿವುಟಿ ಕೊಲ್ಲುತ್ತಾರೆ. ತಿಳಿವಳಿಕೆಯುಳ್ಳ ಮಾನವರು ವಾತ್ಸಲ್ಯದ ನೀರೆರೆದು, ಸರಿಯಾದ ಹಾದಿಯಲ್ಲಿ ಆ ಬಳ್ಳಿ ಬೆಳೆಯಲು ಅನುವು ಮಾಡಿಕೊಡುತ್ತಾರೆ.

ನೀವು ರೈಲುಗಾಡಿಯಲ್ಲಿ ಪ್ರಯಾಣ ಮಾಡಿರಬಹುದ. ಟಿಕೆಟ್ ಕಲೆಕ್ಟರುಗಳನ್ನು ಚೆಕ್ಕರುಗಳನ್ನು ಕ೦ಡಿರಬಹುದು. ಅಂಥವನೊಬ್ಬ "ಟಿ.ಸಿ.ಕೊ೦ಡಯ್ಯ." ಈ ಸಮಾಜ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿರುವ ಆತ ನಿಮ್ಮ ಸಹಾನುಭೂತಿಯನ್ನು ಅಪೇಕ್ಷಿಸುತ್ತಾನೆ.

"ರೋಟರಿಯ ಕೆಳಗೆ” ಕತೆ ಪ್ರಾಯಶಃ ಎಲ್ಲ ಓದುಗರಿಗೂ ಪರಿ ಚಯವಿಲ್ಲದ ವಸ್ತುವನ್ನು ಒಳಗೊ೦ಡಿದೆ. ನಮ್ಮ ದಿನ ನಿತ್ಯದ ಜೀವನದಲ್ಲಿ ವೃತ್ತಪತ್ರಿಕೆಗಳಿಗೆ ಮಹತ್ವದ ಸ್ಥಾನವಿದೆಯಲ್ಲವೆ ? ಆದರೆ ಆ ವೃತ್ತ ಪತ್ರಿಕೆ ಗಳಲ್ಲಿ ದುಡಿಯುವ ಬುದ್ಧಿಜೀವಿಗಳ ಕರುಣಕಥೆಯನ್ನು ಬಲ್ಲಿರಾ? ಅದು ಇಲ್ಲಿದೆ.ಗ್ಯಾಲಿ ಗುಲಾಮರಾದ ಆನಂದ್, ಮಹದೇವ, ಕೃಷ್ಣಯ್ಯರೇ ಜನಾಭಿಪ್ರಾಯವನ್ನು ರೂಪುಗೊಳಿಸುವ ಪ್ರಮುಖರು!

"ತಿರುಕನೋರ್ವನೂರಮ೦ದೆ.... ...."ಯೊ೦ದು ಅಣಕಕಥೆ. ನಮ್ಮ ಸಾಹಿತ್ಯದಲ್ಲಿ ಅರ್ಥಹೀನ ಆದರ್ಶವಾದ ಸೃಷ್ಟಿಸುತ್ತಿರುವ ವ್ಯಕ್ತಿಗಳ ನೆನಪೇ ಈ ತಿರುಕನ ಜನನಕ್ಕೆ ಕಾರಣವಾಯಿತು. ಕನಸಿನ ರಾಜ್ಯದಿಂದ ಇಳಿದು ಬ೦ದು ಕ್ರೂರವಾಸ್ತವತೆಯನ್ನು ಇದಿರಿಸಿರೆ೦ದು ತಿರುಕ ಮರುಕದಿ೦ದ ಕೇಳುತ್ತಿದ್ದಾನೆ.

"ಕೆಸರುಕೊಚ್ಚೆಯ ಕಮಲ", ಹುಚ್ಚುಮನಸ್ಸಿನ ಗುರಿಯಿಲ್ಲದ ಅಲೆ ದಾಟವನ್ನು ಚಿತ್ರಿಸುತ್ತದೆ.

ಕಳೆದ ಮಹಾಯುದ್ಧದ ಕಾಲದಲ್ಲಿ, ಆಗ ಆಳುತ್ತಿದ್ದವರು ಒಲ್ಲದ ಭಾರತ ವನ್ನು ಯುದ್ಧ ಭೂಮಿಗೆ ಎಳೆದರು. ನಿವೃತ್ತ ದಫೆದಾರ ವೆ೦ಕಟಪ್ಪನ ಮಗ ಲಿ೦ಗನೂ ಯೋಧನಾದ. ಸರಕಾರದ ದೃಷ್ಟಿಯಲ್ಲಿ ವಿಜಯಿಯೂ ಆದ. ಆದರೆ ?

"ಕ್ಷಾಮಶಿಶು ” ಕಳೆದ ವರ್ಷ ಕನ್ನಡನಾಡಿನ ಹಲವು ಭಾಗಗಳನ್ನು ಆವರಿಸಿದ ಬರಗಾಲದ ಕಥೆ. ಅಲ್ಲಿ ವ್ಯಂಗ್ಯಕಥನದ ಪ್ರಯೋಗವಿದೆ.

ಕೊನೆಯದಾದ "ಅನ್ನಪೂರ್ಣಾ" ಇ೦ಥದೊ೦ದು ದೇಗುಲದ ಕುರಿತು ಒoದು ದ೦ತಕಥೆಯನ್ನು ಕೇಳಿದ್ದೆ. ಅದರ ಹಿನ್ನೆಲೆ ಯಲ್ಲಿ, ಯುದ್ಧದ ಆರಂಭದ ಅವಧಿಯಲ್ಲಿ ಜನರು ಪಡುತ್ತಿದ್ದ ಸ೦ಕಷ್ಟಗಳು, ಆ ಕಥಾವಸ್ತುವಿಗೆ ಮಾತುಕೆಯಾದವು. ಹೌದು, ಹಿ೦ದಿನ ಅನ್ನಪೂರ್ಣಾ ಬೇರೆ ಈಗಿನ ಅನ್ನಪೂರ್ಣಾ ಬೇರೆ.

——ಇಷ್ಟು ಕತೆಗಳ ಪರಿಚಯ.

ಇವು ಪ್ರಗತಿಯ ಹಾದಿ ಹಿಡಿದಿರುವ ಕನ್ನಡದ ಸಣ್ಣಕತೆಗಳೆ೦ದು ಓದು ಗರು ಸ್ವಾಗತಿಸುವರೆ೦ಬುದು ನನ್ನ ನ೦ಬಿಕೆಯಾಗಿದೆ.

ಈ ಸ೦ಕಲನವನ್ನು ಪ್ರಕತಟಿಸುವ ಹೊಣೆಯನ್ನು ಹೊತ್ತ ಸಮಾಜ ಪುಸ್ತ ಕಾಲಯದ ಒಡೆಯರಾದ ಶ್ರೀ.ಬಾಲಚ೦ದ್ರ ಘಾಣೇಕರರಿಗೂ ಹೊದಿಕೆಯ ಚಿತ್ರವನ್ನು ಬರೆದುಕೊಟ್ಟ ಪ್ರಖ್ಯಾತ ಕಲಾವಿದ ಆರ್.ಎಸ್.ಎನ್.ರವ ರಿಗೂ ನನ್ನ ನೆನಕೆಗಳು

ಅಗಷ್ಟ ೧೯೫೩
ಬೆ೦ಗಳೂರು
ನಿರ೦ಜನ