ಎಡಿ ಒಯ್ಯನು ಬಾರೆ ದೇವರಿಗೆ
ಗೋಚರ
(ಏಡಿ ಒಯ್ಯನು ಬಾರೆ ದೇವರಿಗೆ ಇಂದ ಪುನರ್ನಿರ್ದೇಶಿತ)
ಎಡಿ ಒಯ್ಯನು ಬಾರೆ ದೇವರಿಗೆ
[ಸಂಪಾದಿಸಿ]- ಶಿಶುನಾಳ ಶರೀಫರು ಹಿಂದು ಹಾಗು ಮುಸ್ಲಿಮ ಧರ್ಮಗಳಲ್ಲಿ ಸಾಧಿಸಿದ ಸಾಮರಸ್ಯಕ್ಕೆ ಉದಾಹರಣೆ. ಇದು ಅಲ್ಲಾನನ್ನೂ ಕುರಿತು ಕಟ್ಟದ ಪದ್ಯ.
(ಎಡಿ: ಎಡೆ= ದೇವರ ನೈವೇದ್ಯಕ್ಕೆ ಇಡುವ ಆಹಾರ ಪದಾರ್ಥ)
- ಎಡಿ ಒಯ್ಯನು ಬಾರೆ ದೇವರಿಗೆ
ಎಡಿ ಒಯ್ಯನು ಬಾರೆ ದೇವರಿಗೆ
ಎಡಿ ಒಯ್ಯನು ಬಾರೆ ||ಪಲ್ಲ||
ಎಡಿ ಒಯ್ಯನು ಬಾ
ಮಡಿಹುಡಿಯಿಂದಲಿ
ಪೊಡವಿಗಧಿಕ ಎನ್ನ
ಒಡಿಯ ಅಲ್ಲಮನಿಗೆ ||ಅನುಪಲ್ಲ||
ಕರ್ಮದ ಕುರಿ ಕೊಯ್ಸಿ ಅದಕೆ
ಗುರುಮಂತ್ರವ ಜಪಿಸಿ
ಅರುವಿನ ಎಡಿಯನು
ಕರದೊಳು ಪಿಡಿಕೊಂಡು
ಸ್ಥಿರವಾದ ದೇವರು
ಇರುವ ಮಸೀದಿಗೆ ||೧||
ಆದಿ ಅಲ್ಲಮ ಗುರುವು ದೊಡ್ಡ
ಪಾದಗಟ್ಟಿ ಏರು
ದಿಮಿ ದಿಮಿ ಸದ್ಗುರು
ಆದಿ ಶಿಶುನಾಳ
ಸಾಧು ಇರುವ ಬ್ರಹ್ಮ-
ನಾದ ಮಸೀದಿಗೆ ||೨||
ನೋಡಿ
[ಸಂಪಾದಿಸಿ]ಉಲ್ಲೇಖ
[ಸಂಪಾದಿಸಿ]- ಶಿಶುನಾಳ ಶರೀಫರ ಪದಗಳು -ಅನಾಮಿಕ
- https://sites.google.com/site/kavanasangraha/Home/sharipha/shriph