ಕತ್ತಲಲ್ಲಿ ಕರಡೀಗೆ

ವಿಕಿಸೋರ್ಸ್ದಿಂದ
Jump to navigation Jump to search

ಚಿತ್ರ: ಪರಮಾತ್ಮ
ಸಾಹಿತ್ಯ: ಯೋಗರಾಜ್ ಭಟ್
ಸಂಗೀತ: ಹರಿಕೃಷ್ಣ
ಗಾಯನ: ಹರಿಕೃಷ್ಣ

ಕತ್ತಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಯಾವತ್ತೂ ಹೋಗಬಾರದು ರೀ
ಅತ್ತ್ಲಾಗೆ ಆ ಹುಡುಗಿ ಇತ್ತ್ಲಾಗೆ ಈ ಹುಡುಗಿ ಯಾವತ್ತೂ ಇರಬಾರದೂ ರೀ
ಹೊಸ ಹುಡುಗಿ ಕೈಯಲ್ಲಿ ಕೆಂಪಾದ ಗೋರಂಟಿ
ಹಳೆ ಗೆಳತಿ ಕೆಮ್ಮಿದರೆ ಪ್ರಳಯನೇ ಗ್ಯಾರಂಟಿ
ಒಬ್ಬಳನ್ನೆ ಲವ್ ಮಾಡಿ ಚೆನ್ನಾಗಿರಿ
ಇನ್ನೊಬ್ಬಳ ಫೋನ್ ನಂಬರ್ ಇಟ್ಟ್ಕೊಂಡಿರಿ
ಅತ್ತ್ಲಾಗೆ ಆ ಹುಡುಗಿ ಇತ್ತ್ಲಾಗೆ ಈ ಹುಡುಗಿ ಯಾವತ್ತೂ ಇರಬಾರದೂ ರೀ
ಕತ್ತಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಯಾವತ್ತೂ ಹೋಗಬಾರದು ರೀ

ಹುಡುಗೀರ ಮನಲ್ಲಿ ಏನೇನಿದೆ, ತಿಳ್ಕೊಳ್ಳೊ ತಾಕತ್ತು ನಮಗೆಲ್ಲಿದೆ
ಪ್ರಾಬ್ಲಮ್ಮು ಇರದ ಫೀಮೇಲು ಇಲ್ಲ
ಸಿಕ್ಸರು ಹೊಡೀಬಹುದು ಬ್ಯಾಟ್ ಇಲ್ಲದೆ, ಪ್ರೀತ್ಸೋಕ್ಕೆ ಆಗೊಲ್ಲ ಡೌಟ್ ಇಲ್ಲದೆ
ಅನುಮಾನವಿರದ ಅನುರಾಗವಿಲ್ಲ
ಮಾಡರ್ನ್ನು ಪ್ರೇಮಕ್ಕೆ ಮೈಲೇಜು ಕಮ್ಮಿ
ಸೆಲ್ ಫೋನು ಬಂದಮೇಲೆ ಹಿಂಗಾಯ್ತು ಸ್ವಾಮಿ
ಲವಲ್ಲಿ ಕಣ್ಣೀರು ಕಂಪಲ್ಸರಿ, ಯಾವುದಕ್ಕೂ ಕರ್ಚೀಫು ಇಟ್ಟುಕೊಂಡಿರಿ
ಕತ್ತಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಯಾವತ್ತೂ ಹೋಗಬಾರದು ರೀ
ಅತ್ತ್ಲಾಗೆ ಆ ಹುಡುಗಿ ಇತ್ತ್ಲಾಗೆ ಈ ಹುಡುಗಿ ಯಾವತ್ತೂ ಇರಬಾರದೂ ರೀ

ಯಾರನ ಕೈ ಕೊಟ್ಟ್ರೆ ಪಾರ್ಟಿ ಕೊಡಿ, ನೆನಪೆಲ್ಲ ಸೋಪ್ ಹಾಕಿ ತೊಳ್ಕೊಂಡ್ ಬಿಡಿ
ಕಣ್ಣಲ್ಲಿ ಸೋಪು ಹೋಗಬಾರದು ಕಣ್ರಿ
ಟೈಂ ಇದ್ದ್ರೆ ಒಂದುಚೂರು ದುಃಖ ಪಡಿ, ಮೆಸ್ಸೇಜು ಬರಬಹುದು ಕಾಯ್ತಾ ಇರಿ
ಹೃದಯಕ್ಕೆ ಗ್ಯಾಪು ಕೊಡಬಾರದು ಕಣ್ರಿ
ಬೆನ್ನಲ್ಲಿ ಹುಣ್ಣಂತೆ ಆ ಫಸ್ಟು ಲವ್ವು, ಯಾಮರಿ ಹೆಂಗಾತ ಮಲಕೊಂಡ್ರೆ ನೋವು
ಎಲ್ಲಾನು ಮರೆಯೋಕೆ ಹೋಗಬಾರದು ರೀ, ಕೆರೆಯೋಕ್ಕೆ ಹುಣ್ಣೊಂದು ಇರಬೇಕು ರೀ
ಕತ್ತಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಯಾವತ್ತೂ ಹೋಗಬಾರದು ರೀ
ಬಾಕಿ ಸಮಾಚಾರು ಬ್ರೇಕ್ ಕೆ ಬಾದ್ ಅಂತೀನಿ ನನ್ನನ್ನು ನಂಬ್ಕೊಂಡಿರಿ