ಪುಟ:ಅದ್ಭುತ ರಾಮಾಯಣ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ಅದ್ಭುತ ರಾಮಾಯಣ ಕಥಾಸರವು. .. ..... . ಹೋಗು ? ನನಗೆ ನಾರಾಯಣನೇ ನಾಥನು, ಹೊರಡು ! ಹೊರಡು !! ನೀವಿಲ್ಲಿದ್ದು ಇನ್ನು ನನಗೆ ತಿವಿಪ್ಪವನ್ನು ಮಾಡಬೇಡ, ಎಂದು ಹೇ ಆದನು, “ತರುವಾಯ ಹರಿಯು ನಿಜರೂಪವನ್ನು ತೋರಿಸಿ ಶಂಖಚಕ್ರ ಗದಾಧಾರಿಯಾಗಿ ಗರುಡನನ್ನೇರಿ ಎರಡನೆಯ ಅಂಜನಾದ್ರಿಯಂತೆ ಕಂಗೊ ೪ಸುತ್ತ ದೇವ ಗಂಧರರಿಂದ ಹೊಗಳಿಸಿಕೊಳ್ಳುತ್ತ ಪ್ರತ್ಯಕ್ಷನಾದನು ಅದನ್ನು ನೋಡಿ ರಾಜನು ದೇವರನ್ನು ನಮಿಸಿ, ಹರ್ಷವನ್ನು ಹೊಂದಿ “ಎಲೈ ಲೋಕನಾಥನೆ ! ಪ್ರಸನ್ನನಾಗು, ನಾನು ನಿನ್ನ ಮರೆಯನ್ನೆ ದಿ ರುವೆನು, ನೀನುದ್ಧರಿಸು ? ಅನ್ಯಥಾ ನನಗೆ ರಕ್ಷಕರಿಲ್ಲ,, ಎಂದು ಬಹಳ ವಾಗಿ ಸ್ತುತಿಸಿ 'ಬೇಡಿಕೊಂಡನು, ಬಳಿಕ ವಿಷ್ಣುವು ಪ್ರಸನ್ನನಾಗಿ “ಎಲೈ ರಾಜನೆ ! ನಿನಗೆ ಬೇಕಾದುದೇನು ? ನೀನು ನನಗೆ ಪರಮಭಕ್ತ ನಾಗಿರುವೆ, ಬೇಕಾದುದನ್ನೆಲ್ಲಾ ನಿನಗೆ ಕೊಡುವೆನು” ಎಂದು ಹೇಳಿದನು, ಅಂಬರೀಪನದನ್ನು ಕೇಳಿ ಮುದವನ್ನು ಹೊಂದಿ, “ಎಲೈ ನಾರಾಯಣನೆ! ನೀನು ಪ್ರಸನ್ನನಾಗಿರುವಾಗ ನನಗೆ ಏನುತಾನೇ ಕಡಮೆಯಾಗಿರುವುದು, ನನ್ನ ಬುದ್ದಿ ಯು ಯಾವಾಗಲೂ ನಿನ್ನ ಚಿಂತನೆಯಲ್ಲಿಯೇ ವರ್ತಿಸು ವಂತ ಅನುಗ್ರಹಿಸು ? ನಾನು ಜನರನ್ನು ವಿಷ್ಣು ಭಕ್ತಿಯುಕ್ತರನ್ನು ಮಾಡಿ ರಹಿಸುತ್ತ ಬರುವಂತೆಯೂ, ಯಜ್ಞ ಹೋವಾದಿಗಳಿಂದ ದೇವ ತೆಗಳನ್ನು ತೃಪ್ತಿಗೊಳಿಸುವಂತೆಯೂ, ವೈವರನ್ನು ಕಾಪಾಡುತ್ತ ವೈರಿಗಳನ್ನಿರಿಯುವಂತೆಯೂ, ನನಗೆ ಅನುಗ್ರಹಿಸಬೇಕು ಎಂದು ಕೇಳಿಕೊಂಡನು. ಅದನ್ನು ಕೇಳಿ ವಿದ್ಯುವು ಹಾಗೆಯೇ ಆಗ ಲೆಂದು ಹೇಳ-ಎಲೈ ರಾಜನೆ ! ಈ ಸುದರ್ಶನ ಚಕುವು, ಭೂರದಲ್ಲಿ ರುದ್ರನ ಪ್ರಭಾವದಿಂದ ನನಗೆ ಲಭ್ಯವಾಯಿತು. ಇದರಿಂದ ಋಷಿಕಾ ಪಾದಿದುಃಖವೂ, ಶತ್ತು ರೋಗಾದಿ ಭಯಗಳೂ, ನಾಶವಾಗುವುವು, ಎಂದು ಹೇಳಿ ಚಕ್ರವನ್ನು ರಾಜನಿಗೆ ಕೊಟ್ಟು ಅಲ್ಲಿಯೇ ಅದೃಶ್ಯನಾ ದನು, ಆಮೇಲೆ ಅರಸನು ಸಂತುಷ್ಟನಾಗಿ ನಾರಾಯಣನನ್ನು ನಮಿನಿ ತನ್ನ ರಾಜಧಾನಿಯಾದ ಅಯೋಧ್ಯೆಗೆ ಬಂದು ರಾಜ ವನ್ನು ಸುಖವಾಗಿ ಕಾಪಾಡಿಕೊಂಡಿದ್ದನು. ಬ್ರಾಹ್ಮಣಾದಿ ವರ್ಣಚತು ಯಗಳೂ, ತಮ್ಮ ತಮ್ಮ ವೃತ್ತಿಗಳನ್ನು ಮೀರುತ್ತಿರಲಿಲ್ಲ. ರಾಜನು