ಪುಟ:ಅದ್ಭುತ ರಾಮಾಯಣ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿತ್ಯಾನಂದ . • • • ವಂತ ಮೇರು ವಿಂಧ್ಯ ಮುಂತಾದ ಗಿರಿಯ ಸಾನುಗಳಲ್ಲಿಯೂ ಆ ಸ್ತ್ರೀಯ ಕೊಡನೆ :ಕ್ರೀಡಿಸುತ್ರ ಸ್ಟೇಚ್ಛೆಯಾಗಿ ವಿಹರಿಸುತ್ತಿದ್ದನು, ಮಂಡೋದರಿ ಯು ಗಂಡನೀರೀತಿ ಇದ್ದುದನ್ನು ನೋಡಿ ಮನದೊಳಗೆ ಮರುಗಿ ಚಿಂತಿ ಸುತ್ತ ನನ್ನ ಗಂಡನು ನನ್ನನ್ನು ಕಣ್ಣೆತ್ತಿಯೂ ನೋಡುವುದಿಲ್ಲ ನಾನಿರು ವುದುವ್ಯರ್ಥ, ನನ್ನ ಯೌವನವನ್ನೂ ಕುಲವನ್ನೂ ಸುಡಬೇಕು ಅಕಟಕಟ! ಗಂಡನು ನನ್ನನ್ನು ವಂಚಿಸುತ್ತಿರುವನು ನಾನು ಪ್ರಾಣವನ್ನಿಟ್ಟುಕೊಂಡಿರು ವುದಕ್ಕಿಂತಲೂ ' ಸಾಯುವುದೇ ಮೇಲೆಂದು ತೋರುತ್ತದೆ. ಮೊದಲೇ ಆ ವನು ವಿಪಕ್ಕಿಂತ ಕ್ರೂರವಾದ ತೋಂತವನ್ನು ತಂದು ಕೆಲಕದಲ್ಲಿಟ್ಟು ನನ್ನ ವಶಕ್ಕೆ ಕೊಟ್ಟಿರುವನ ? ಅದನ್ನಾದರೂ ಕುಡಿದು ಸಾಯುವೆನು” ಎಂದು ಅಂದುಕೊಂಡು, ಅದನ್ನು ಕುಡಿಯಲು ಶಿಕ್ಷೆಗೆ ಆಧಾರವಾದ ಹೀ ರನೊಡನೆ ಆರಕ್ತವು ಮಿಶ್ರವಾಗಿದ್ದ ಕಾರಣ ತತ್ ಕ್ಷಣದಲ್ಲಿಯೇ ಮಂಡೋ ದರಿಯ ಉದರದಲ್ಲಿ ಸೂರಕೋಟ ಪ್ರಕಾಶಮಾನವಾದ ಗರ್ಭವಾವಿರ್ಭ ವಿಸಿತು, ಆಗ ಮಂಡೋದರಿಗೆ ಬಹಳ ಚೋದ್ಯವುಂಟಾಗಿ “ವಿಸಕ್ಕಿಂತಲೂ ಕಠಿಣವಾದ ರಕ್ತವನ್ನು ಕುಡಿಯಲು ನನಗೆ ಗರ್ಭವಂಟಾಯಿತು. ನ « ವತಿಯು ಪಕ್ಕದಲ್ಲಿಲ್ಲ: ಅವನು ಕಾಮಿನಿಯರಿಂದ ಕೂಡಿ ಕ್ರೀಡಿಸು ಈ ಕಾಮಿಯಾಗಿ ಎಲ್ಲಿಯೋ ಅಲೆಯುತ್ತಿರುವನು, ನಾನು ಒಂದುವ ರ್ಪಕಾಲ ಗಂಡನ ಜೊತೆಯಲ್ಲಿ ವಾಸಮಾಡಕೂಡದು, ಗಂಡನ ಸಭೆ ಯಲ್ಲಿ ಪತಿವ್ರತೆಯಾದ ನಾನು ಗರ್ಭಿಣಿಯಾಗಿ ಏನುಹೇಳಲಿ, ಯಾರಾ ಧರೂ ನೋಡಿದರೆ ಏನಂದುಕೊಳ್ಳುವರು” ಎಂದು ಯೋಚಿಸುತ್ತ ತೀ ರ್ಥ ಯಾತ್ರೆಯನೆಪದಿಂದ ವಿಮಾನವನ್ನೇರಿ ಕುರುಕ್ಷೇತ್ರಕ್ಕೆ ಹೋಗಿ, ಅಲ್ಲಿ ಗರ್ಭವನ್ನು ಕಳೆದುಕೊಂಡು, ಭೂಮಿಯಲ್ಲಿ ಬಚ್ಚಿಟ್ಟು ಸರಸ್ವತೀ ನದಿಯಲ್ಲಿ ಮಿಂದು, ಅಲ್ಲಿಂದ ತನ್ನ ಮನೆಗೆ ಬಂದು ತಾನುಮಾಡಿದ ಕಾ ಲ್ಯವನ್ನು ಯಾರಿಗೂ ತಿಳಿಸದೆ ಗುಟ್ಟಾಗಿಟ್ಟು ಕೊಂಡಿದ್ದಳು. ಕೆಲವು ಕಾಲದಮೇಲೆ ಜನಕನೆಂಬ ರಾಜರ್ಷಿಯು ಯಜ್ಞಮಾಡು ವುದಕ್ಕೋಸ್ಕರ ಕುರುಕ್ಷೇತ್ರಕ್ಕೆ ಹೋಗಿ ಚಿನ್ನದ ನೇಗಿಲಿನಿಂದ ನೆಲವನ್ನು ಳ್ಳುತ್ತಿದ್ದನು .ಆ ನೇಗಲಿನ ಗೆರೆಯ ಸಾಲಿನಲ್ಲಿಯೇ ಕನ್ನಿಕೆಯೊಬ್ಬಳು ನೆಲದಿಂದ ಮೇಲಕ್ಕೆದ್ದಳು, ಅವಳಮೇಲೆ ಪುಪ್ಪ ವರ್ಷವುಂಟಾಯಿತು.