ಪುಟ:ಅದ್ಭುತ ರಾಮಾಯಣ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ಅಮಾಯಣ ೧nnMM MAAAAAA wwww\ NAnySof w •••• •NommM ಸನೂ ಪರಮಾರ್ಥವಾಗಿಯೂ ಭಿನ್ನರಾಗಿರುವರು, ಆತ್ಮನು ಸ್ವಭಾ ನದಿಂದಲೇ ಮಾಲಿನ್ಯವನ್ನೂ ಅಸ್ವಸ್ಥತೆಯನ್ನೂ, ವಿಕಾರವನ್ನೂ ಕೈ ಕೊಂಡುದೇ ಆದರೆ ಜನ್ಮಾಂತರ ಕತಗಳಾದರೂ ಮುಕ್ತಿಯಾಗಲಾರದು. ಮುಕ್ತರಾದ ಮುನಿಗಳು, ಆತ್ಮನನ್ನು ಪರಮಾರ್ಥವಾಗಿ ಕಾಣುವರು. ಅವನು ವಿಕಾರವಿಲ್ಲದವನಾಗಿಯೂ, ದುಃಖರಹಿತನಾಗಿಯೂ, ಆನಂದ ಸ್ವರೂಪನಾಗಿಯೂ, ನಾಕ ರಹಿತನಾಗಿಯೂ ಇರುವನು, ಆದರೆ ಜನ ಗಳು-“ನಾನು ಮಾಡಿದ್ದು, ನಾನು ಸುಖಿ, ನಾನು ದುಃಖಿ, ನಾನು ಕೃ ಶನು, ನಾನು ಸ್ಕೂಲನು” ಎಂದಹಂಕಾರ ಸಂಬಂಧವಾದ ಬುದ್ಧಿಯನ್ನು ಆತ್ಮನಲ್ಕಾರೋಪಿಸುವರು. ವೇದವಿದ್ವಾಂಸರು, ಆತ್ಮನನ್ನ ಸಹಿಯಂ ತಲೂ ಪ್ರಕೃತಿಗಿಂತಲೂ ಪರನೆಂತಲೂ ಜೋಕ್ಸ್ವೆಂತಲೂ, ಅಕ್ಷಯನೆಂತ ಲೂ ಸರೈ ವ್ಯಾಪಿಯೆಂತಲೂ ಹೇಳುವರು. ಆದಕಾರಣ ಸರ ದೇಹಿಗಳ ಸಂ ಸಾರವೂ ಅಜ್ಞಾನ ಮೂಲವಾಗಿರುವುದು, ಆ ಜ್ಞಾನವಿಲ್ಲದೆ ಅನ್ಯಥಾ ಜಾತವಾದುದು ಪ್ರಕೃತಿ ಸಂಗತವಾಗುವುಮ, ಆತ್ಮನು, ನಿತ್ಯೋದಿತನಾ ಗಿಯೂ, ಸ್ವಯಂ ಜ್ಯೋತಿಯಾಗಿಯೂ, ಸತ್ವಗತನಾಗಿಯೂ, ಪುರುಷನಾ ಬಯೂ, ಪರನಾಗಿಯೂ ಇದ್ದು, ಅಹಂಕಾರ ವಿವೇಕದಿಂದ ಕರ್ತನಂ ಬವುದಾಗಿ ತಿಳಿಯುತ್ತಾನೆ, ಮಗಳು ಆತ್ಮನನ್ನು ಸದಸದಾತ್ಮಕವಾ ಗಿಯೂ, ಪ್ರಧಾನವಾಗಿಯೂ, (ಪ್ರಕೃತಿಯಾಗಿಯೂ) ಬುದ್ದಿ ಕಾರಣವಾ ಯೂ ತಿಳಿಯುವರು. ಇದರಿಂದ ಆತ್ಮನು ಕೊಟಸ್ಥನಾಗಿರುವನೆಂದು ತಿಳಿಯಬರುವುದು ಬ್ರಹ್ಮವಾದಿಗಳಾತ್ಮನನ್ನು ಕರನೆಂದು ತಿಳಿಯುವರು. ಅನಾತ್ಮದಲ್ಲಾತ್ಮಜ್ಞಾನವು ದುಗುಡವನ್ನೊದವಿಸುವುದು, ರಾಗದ್ವೇಪಾಪಿ ದೋಸಗಳಲ್ಲವೂ ಭ್ರಾಂತಿ ವಿಲಸಿತಗಳಾಗಿಯೇ ಇವೆ. ಕಾರ್ಯವು ಪುಣ್ಯವೆಂತಲೂ ಪಾಪವೆಂತಲೂ ಎರಡು ವಿಭಾಗವಾಗಿದೆ ಆದಕಾರಣ ಎಲ್ಲರ ದೇಹವೂ ಎರಡು ತರನಾಗಿರುವುದು. ನಿತ್ಯನೂದೋಷವರ್ಜಿತನೂ ಕೂಟಸ್ಥನೂ ಆದ ಪರಮಾತ್ಮನೊಬ್ಬನು ಮಾಯೆಯಿಂದ ಭೇದಿಸಲ್ಪಡುವನು. ಸ್ವಭಾವದಿಂದ ಭೇದಿಸಲ್ಪಡನು. ಆದಕಾರಣ ಮುನಿಗಳು ಅದೈತವನ್ನೇ ಹೇಳುವರು, ಧೂಮಸಂಪರ್ಕ ವಿಂದ ಹೇಗೆ ಆಕಾಶವು ಮಲಿನವಲ್ಲವೋ ಹಾಗೆಯೇ ಅಂತಃಕರಣಗಳಾದ