ಪುಟ:ಅದ್ಭುತ ರಾಮಾಯಣ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ , 1 1 1 1 1 1 1/vV ಯಶಸ್ಸು ಬಂದೊದಗಿತಲ್ಲ! ಇಂದ್ರಾದಿ ದಿಕ್ಷಾಲಕರನ್ನೆಲ್ಲಾ ಒಂದೇಸಲ ಸದೆದುಬಿಡುವನು, ಲೋಕವನ್ನೂ ನಿರೂತಿ ಮಾಡುವನು, ಬೆಟ್ಟಗ ಳನ್ನು ಹಿಟ್ಟು ಮಾಡಿ ದೇವಲೋಕದಲ್ಲಿ ಮನುಷ್ಯರು ವಾಸಮಾಡುವಂತೆಯೂ ಮನುಷ್ಯಲೋಕದಲ್ಲಿ ದೇವತೆಗಳು ಇರುವಹಾಗೂ ಮಾಡದೆ ಬಿಡುವುದಿಲ್ಲ; ಭೂಮಿಯನ್ನೆತ್ತಿ ಅದನ್ನು ಉಗುರಿನಿಂದಲೇ ಪುಡಿಮಾಡಿಹಾಕುವನು.ನಾನು ರಾಕ್ಷಸರನ್ನು ಹೊರತು ಭೂಮಿಯಮೇಲೆ ಇನ್ನಾರೂ ನಿಲ್ಲದಂತೆ ಮಾಡು ವೆನು ; ” ಎಂದು ಕೂಗುತ್ತ ಮುಂದುಮುಂದಕ್ಕೆ ಬರುತ್ತಿದ್ದನು. ರಾವ ಇನ ಆಜ್ಞಾನುಸಾರ ಕೋಟಿ ಸಂಖ್ಯೆಗಿಂತಲೂ ಹೆಚ್ಚಾಗಿ ಸೇನಾಧ್ಯಕ್ಷರೂ, ರಾಕ್ಷಸೇಂದ್ರರೂ, ರಾವಣ ಪುತ್ರರೇ ಮೊದಲಾದ ರಾಕ್ಷಸ ಭಟರೆಲ್ಲರೂ ಬಂದು ಯುದ್ದೋದ್ಯತರಾಗಿದ್ದರು. - ರಾವಣನ ಔರಸ ಪುತ್ರರನೇಕರು ಯುದ್ದದಲ್ಲಿ ಶ್ರೀರಾಮನನ್ನು ಮುತ್ತಬೇಕೆಂದು ಧನುರ್ಧಾರಿಗಳಾಗಿ ಮುಂದುಮುಂದಕ್ಕೆ ಬರುತ್ತ ಇಲ್ಲಿಗೆ ಬಂದಿರುವನಾರು ? ಏಕೆ ? ಬಂದಿರುವನು ? ಈ ದ್ವೀಪದ ಸಂಪತ್ತನ್ನು ನೋಡಿಕೊಂಡು ಹಿಂದಿರುಗುವನೋ ? ಈ ಕಪಿಸೈನ್ಯಗಳೇಕೆ? ಬಂದಿವೆ? ಎಂದು ಚಿಂತಿಸುತ್ತಿರಲಾಗಿ ಆಗ ಆಕಾಶದಲ್ಲಿ “ಎಲೈ ರಾವಣನೆ ! ಶ್ರೀ ರಾಮನು ಇಲ್ಲಿಗೆ ಬಂದಿರುವನು. ಅವನು ಅಯೋಧ್ಯೆಯ ರಾಜನಾದ ದಕ ರಥನ ವನು, ಧರ್ಮ ಸ್ವರೂಪವಾಗಿ ಜನಿಸಿರುವನ', ಇವನೇ ಲಂಕ ಯಲ್ಲಿದ್ದ ನಿನ್ನ ತಮ್ಮನನ್ನು ಸಮೂಲವಾಗಿ ಹಾಳುಮಾಡಿರುವನು. ಈಗ ನಿನ್ನಸಂಹಾರಾರ್ಥವಾಗಿ ಇಲ್ಲಿಗೆ ಬಂದಿದ್ದಾನೆ. ಶ್ರೀರಾಮನ ತಮ್ಮಂದಿ ರಿಂದಲೂ ವಾನರ ಋಕ್ಷ ಮೊದಲಾದ ಸೈನ್ಯಗಳಿಂದಲೂ ಕೂಡಿಬಂದಿರು ವನು. ಎಂದು ಅಶರೀರವಾಣಿಯು ನುಡಿದು ಮರೆಯಾಯಿತು ರಾವ ಇನು ಅಮಾನುಷವಾದ ವಾಕ್ಯವನ್ನು ಕೇಳಿ ಮತ್ತಷ್ಟು ನಿಟ್ಟಾಗಿ ಕಣ್ಣು ಗಳಲ್ಲಿ ಕಿಡಿಗಳನ್ನು ಗುಳುತ್ರ ಪ್ರಪಂಚವನ್ನೆಲ್ಲ ಗೆದ್ದಿರುವ ನನ್ನನ್ನು ಗೆಲ್ಲಲು ಈಮನುಷ್ಯ ಮಾತ್ರದವನು ಬಂದಿರುವನಂತೆ! ಅವನನ್ನು ಗೆಲ್ಲಿರಿ?ಗಲ್ಲಿರಿ!! ಎಂದು ಅಂದು ಬೆಟ್ಟಕ್ಕೆ ಸಮನಾದ ಬಾಣ ಜಾಲಗಳನ್ನು ಶತ್ರುಗಳಮೇಲೆ ಸುರಿಸಿದನು. ರಾಕ್ಷಸನ ಸೇನೆಯು ಕಪಿಗಳನ್ನು ಬಹಳವಾಗಿ ಪೀಡಿಸಿತು. ಅಲ್ಲದೆ ಸೈನಿಕರೆಲ್ಲರೂ ಬಹಳ ಸಾಹಸದಿಂದ ಶತ್ರುಗಳಮೇಲೆ ನುಗ್ಗಿ