ಪುಟ:ಅನುಭವಸಾರವು.djvu/೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೦ - ೩ ೨ ತರಣಿತತ್ಸತಿಬಿಂಬವೆರಡರಂತೀಶಾತ್ಮ | ರಿರುತಿಪ್ಪಣರೆಂದು ಮಗು ಆನಿರ್ವಿಕೃತಿಯನು | ಪರಮಂಗೆ ಹೇಳಿರೆಲೆದೇವಾರಿ ೩ ಬಿಂಬವೇಸಡಿಬಿಂಬವೆಂಬಂತೆಶಿವಜೀವ | ರೆಂಬವರ್ಗೈಕವಾಗಿಜೀವ ನವೊಲೀ। ಶಂಬಂಧವಡೆವನೆನಬೇಕು ? ೪ ನೀವಿದಕೇಳಿ ಪರಿಭಾವಿಸುತೆ ಸ್ಪದು ರ್ಭಾವಮಂ ಬಿಡಿಸಬೇಕೆನೆ ಸುತಂಗೆ ಗುರು: ದೇವನೊಲಿದಿಂತುಬೆಸಸಿದನು | ೫ ಸುಡುವಕನ್ನಡಿಯೊಳಿರ್ದೊಡೆನಿಜಾಗ್ಯ ಬೇಗೆ: ನಡೆಯದಂತಹವು ವಿಡಿದಜೀವನವಿಕ ತಿ। ಯಡಸದೀಶಂಗೆ ದಿಟವಿದುವೆ ; ಬಹುಮುಖದಕನ್ನಡಿಯೊಳಿಹಟೆಲುವಮುಖಕೆ ತ| ದ ಹುವಿಧಂತೋ. ರದಂತುಪಾಧಿಕಜೀವನಹಿತವೀಶಂಗೆ ಘಟಸದು | ಆದೊಡಾಜೀವಂಗನಾದಿಯಾದ ಜ್ಞಾನ / ಭೇದದಿಂದಾದ ವಿಕೃತಿಯಂ ನಿಜವೆಂಬೆ | ಯಾದೆಡಂತದನತಿಳಿಸೇಲ್ಸ್ | ಸ್ವಾಮಿ, ಈಶ್ವರನು ಜೀವನು ಇಮಬ್ಬರೂ ಸೂರೆನು ಸೂರಿನ ಪ್ರತಿಬಿಂಬವು ಇವೆರಡರ ಹಾಗೆ ಇರುತ್ತಾರೆಂದು ಮೊದಲು ತಿಳಿಸಿ ಕೂಡಲೆ ಈಶ್ವರನಿಗೆ ನಿರ್ವಿಕಾರ ತ್ವವನ್ನು ಅಪ್ಪಣೆ ಕೊಡಿಸಿದಿರಿ. ಬಿಂಬವೇ ಪ್ರತಿಬಿಂಬವೆಂಬ ಹಾಗೆ, ಈಶ್ವರನಿಗೂ ಜೀವಾತ್ಮನಿಗೂ ಅಭೇದವುಂಟಾ ಗಿರುವದರಿಂದ ಜೀವಾತ್ಮನ ಹಾಗೆ ಈಶ್ವರನು ಸಂಸಾರದ ಕಟ್ಟಿಗೆ ಒಳಗಾಗುವನೆಂ ದು ಹೇಳಬೇಕಲ್ಲವೇ, - ನೀವು ಈ ಮಾತನ್ನು ಕೇಳಿ ಆಲೋಚನೆಗೆ ತಂದು ನನಗುಂಟಾಗಿರುವ ಸಂಶಯವ ನ್ನು ಪರಿಹರಿಸಬೇಕೆಂದು ಹೇಳಿದ ಶಿಷ್ಯನಿಗೆ ಗುರುಸ್ವಾಮಿಯು ಮೆಚ್ಚಿ ಹೀಗೆ ಅಪ್ಪ ಣೆ ಕೊಡಿಸಿದನು. ೫ ನಿಜವಾದ ಮುಖವು ಸುಡುವ ಕನ್ನಡಿಯಲ್ಲಿ ಪ್ರತಿಬಿಂಬಿಸಿರುವಾಗ ತಾಪವನ್ನು ಹೊಂದದಂತೆ ಅಹಂಕಾರವನ್ನು ಹಿಡಿದ ಜೀವನ ವಿಕಾರವು ಈಶ್ವರನಿಗೆ ಸಂಭವಿಸು ವದಿಲ್ಲ. ಇದು ಸತ್ಯ. ಅನೇಕ ಮುಖದ ಕನ್ನಡಿಯಲ್ಲಿ ಪ್ರತಿಬಿಂಬಿಸಿರುವ ಸುಂದರವಾದ ಮುಖಕ್ಕೆ ಆ ಅ ನೇಕತ್ವವು ಕಾಣಿಸದ ಹಾಗೆ, ಅಹಂಕಾರದಿಂದ ತೋರಿದ ಜೀವನಿಗೆ ಪ್ರಾಪ್ತವಾದ ವಿಕಾರವು ಈಶ್ವರನಿಗೆ ತಗಲುವದಿಲ್ಲ. ಆದರೆ ಆ ಜೀವನಿಗೆ ಅನಾದಿಯಾದ ಅಜ್ಞಾನವಿಶೆಷದಿಂದುಂಟಾದ ವಿಕಾರವನ್ನು ನಿಜವಾದದ್ದೆಂದು ಹೇಳುವೆಯಾದರೆ ಅದನ್ನು ತಿಳಿಯುವಂತೆ ಹೇಳುತ್ತೇನೆ.

೭.