ಪುಟ:ಅನುಭವಸಾರವು.djvu/೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೮ ೨ ೦೪ ೧ ತಿ ಪರಿಪೂರ್ಣಬೋಧಂಗೆ ಪರತರಾನಂದಂಗೆ | ಸರವಂಗೆ ಸಾವ ನಾತ್ಮಂಗೆ ಪಾರ್ವತೀ ವರಶಂಭುವಿಂಗೆ ನತನಪ್ಪೆ ಹರಿಪಿತಾಮಹರುದು ವರಸದಾಶಿವಮಹೇ | ಶರಮುಖ್ಯರಾವನೆಡ ಲೋ೪ರುತಿಪ್ಪರಾ ಗುರುವೆ ಬಿನ್ನಪವನವಧರಿಸು | ೩ ತನಗೆ ಮರವೆಯಕಟವಿನಿತಿಲ್ಲ ವೆಂದಿರೀ 1 ಜನನಾದಿಭೀತಿಯಿಂದೆ ಕಂ ಗೆಟ್ಟು ನಿ: 4ನೆ ಸಂರ್ದರಾರು ಕರುಣಿಪುದು | ಅಹಮೀಂಗೆ ತಾನೆ ದುಸ್ಸಹಸಂಸರಣವೆಂದೊ | ಡಹುದಂತದಕ್ಕೆ ಮುಕ್ತಿ ಯದನೊಪ್ಪೆನಿಜ ಮಿಹುದಹಂಕಾರವೆನಬೇಕು | ಮುನ್ನವೀತೋರಿಕೆಗಳ೦ ನಿತ್ಯವಲ್ಲ ವೆಂ ದೆನೊಳುಸುರಿದಿರಿ ಯದರಿಂ ದಹಮುಸತ್ಯ | ವೆನ್ನಲೂ ಬಾರದೆಲೆ ದೇವಾ | & ಅಹಮಿಂಗೆ ಸಂಸಾರವಹುದು ತನಗಾಮುಕಿ ಯಹುದೆಂದೊಡಲ್ಲಿ ಸೂರೆಯೋರ್ವಂಗೆ ದೂರಹುದೇರ್ವಗೆಂಬ ಪರಿಯನ್ನು | ೫೩ --- + Dulu 5"r T T = = = ೧. ಪರಿಪೂರ್ಣವಾದ ಜ್ಞಾನವುಳ್ಳವನಾಗಿಯೂ, ಅತ್ಯಂತ ಶ್ರೇಷ್ಠ ವಾದ ಆನಂದವುಳ್ಳ ನಾಗಿಯೂ ಪರತತ್ರಸ್ತರೂಪನಾಗಿಯ ಪವಿತ್ರಾತ್ಮನಾಗಿಯೂ ಇರುವ ಪಾರ್ವ ತೀಪತಿಯಾದ ಶಿವನಿಗೆ ನಮಸ್ಕಾರವಂ ಮಾಡುತ್ತೇನೆ. ೨ ಯಾವನ ದೇಹದಲ್ಲಿ ವಿಷ್ಣು ಬ್ರಹ್ಮ ರುದ್ರ ಸದಾಶಿವ ಮಹೇಶ್ವರ ಮೊದಲಾದ - ವರು ವಾಸಿಸುತ್ತಿದ್ದಾರೋ ಅಂಥಾ ಗುರುವೇ, ನನ್ನ ವಿಜ್ಞಾಪನೆಯನ್ನು ಲಾಲಿಸು, ೩ ಆತ್ಮನಿಗೆ ಅಜ್ಞಾನದ ಸಂಬಂಧವು ಲೇಶಮಾತ್ರವೂ ಇಲ್ಲವೆಂದು ಹೇಳಿದಿರಿ, ಹಾಗಾ ದರೆ, ಜನನ ಮರಣಾದಿಗಳಿಗೆ ಹೆದರಿ ದಿಕ್ಕು ತೋರದೆ ನಿನ್ನನ್ನು ಸೇರಿದವರು ಯಾರು? ತಿಳಿಸಿರಿ. ಸಹಿಸುವದಕ್ಕಾಗದ ಜನನಮರಣಾತ್ಮಕವಾದ ಸಂಸಾರವು ಅಹಂಕಾರಕ್ಕೆ ಸಂಭವಿ ಸುತ್ತದೆ ಎಂದು ಹೇಳಿದರೆ ಮೋಕ್ಷವೂ ಅಹಂಕಾರಕ್ಕೆ ಆಗುವುದಲ್ಲವೇ? ಅದನ್ನು ಒಪ್ಪಿಕೊಂಡರೆ ಅಹಂಕಾರವು ನಿತ್ಯವಾದ ವಸ್ತುವೆಂದು ಹೇಳ ಬೇಕಾಗುವುದು. ಪೂರ್ವದಲ್ಲಿ ಅಹಂಕಾರ ಮೊದಲಾದ ತೋರಿಕೆಗಳು ನಿತ್ಯವಲ್ಲವೆಂದು ನನ್ನ ಕೂ ಡ ಹೇಳಿದಿರಿ, ಆದುದರಿ:ದ ಅಹಂಕಾರವು ಸತ್ಯವೆಂತಲೂ ಹೇಳಕೂಡದು. ೬ ಅಹಂಕಾರಕ್ಕೆ ಸಂಸಾರವು ಸಂಭವಿಸುವದು, ಆತ್ಮನಿಗೆ ಮೋಕ್ಷ ವಾಗುವದು ಎಂ ದು ಹೇಳಿದರೆ, ಸೂರೆ ಒಬ್ಬನಿಗೆ, ಅಪವಾದವು ಒಬ್ಬನಿಗೆ ಎಂದು ಹೇಳಿದಂತಾಗುತ್ತದೆ.