ಪುಟ:ಅನ್ನಪೂರ್ಣಾ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬದುಕುವ ಬಯಕೆ

ಬರೆಯುವ ಸಾಮರ್ಥ್ಯವಿದ್ದಿದ್ದರೆ ಆಕೆ ಅದೆಂಥ ಕೃತಿ ರಚಿಸುತ್ತಿದ್ದಳೋ! ಕಲಾವಿದೆಯಾಗಿದ್ದಿದ್ದರೆ ಅದೆಂಥ ಬಣ್ಣಗಳಲ್ಲಿ ಯಾವ ಭಾವನೆಗಳನ್ನು ಕುಂಚ ಹೊರಗೆಡವುತ್ತಿತೋ ! ತನ್ನಂಥ ಸಹಸ್ರ ಸೋದರಿಯರ ಜೀವನಸ್ಥಿತಿಯ ಮೂಲಕಾರಣ ಬಗೆ ಹರಿದಾಗ ಬಿಡುಗಡೆ ಸಾಧ್ಯವೆಂಬುದಾದರೂ ಆಕೆಗೆ ಗೊತ್ತಿದೆಯೋ ಇಲ್ಲವೋ !

ಆ ಹೃದಯ ? ಎಂಥ ನೋವು ಅಡಗಿರಬೇಡ ಅಲ್ಲಿ ? ದಹಿಸುವ ಎಂಥ ಉರಿ ಬೆಂಕಿ ಜ್ವಲಿಸುತ್ತಿರಬೇಡ !

ಆಕೆ ಯಾರಿಗಾಗಿ ಕಾದಿದ್ದಳೋ !

ಹೃದಯವನ್ನು ಕಸಿದುಕೊಂಡ ಯಾವ ಇನಿಯನ ಕನಸಿನ ಯಾವ ಮೂರ್ತಿಯ, ಬರವನ್ನು ಇದಿರು ನೋಡುತ್ತಿದ್ದಳೋ ! - ಹೃದಯ ಅನುಭವಗಳಿಲ್ಲದ ಯ೦ತ್ರವಾಗಿ ಮಾರ್ಪಟ್ಟಿದ್ದ ಆ ಮುದುಕಿ ಹೇಳುತ್ತಿತ್ತಂತೆ:

"ಒಳ್ಳೇದಿಯೆ ಅಲ್ಲ ಇದು, ಯಾರೇನು ಮಾಟ ಮಾಡಿದರೋ.... ಈ ಊರನ್ನೇ ಬಿಟ್ಟು ಹೊರಟೋಗ್ರೇವಿ.... "

ಆಗೋ ಯಾವುದೋ ಕಾರು. ನಾಳೆ ದೀಪಾವಳಿಯಾದರೇನಂತೆ ನಮ್ಮ ಶ್ರೀಮಂತ ಪುತ್ರರಿಗೆ ?

ಹೆಡ್ ಲೈಟಿನ ತೀಕ್ಷ ಪ್ರಕಾಶ ಆಕೆಯ ಮೇಲೆ ಬಿದ್ದಿದೆ. ಆದರೆ ಕಮಲೆ ಆ ಮಹಾ ಪ್ರಕಾಶದೆದುರಲ್ಲಿ ಎಣ್ಣೆ ತೀರಿದ ಸೊಡರಿನ ಹಾಗಿದ್ದಾಳೆ. ಚಲಿಸದೆ ಅಲ್ಲೆ ನಿಂತಿದ್ದಾಳೆ. ಹಣೆ, 'ಏನಿದು ?' ಎಂಬ ಪ್ರಶ್ನೆ ಕೇಳುತ್ತ ನೆರಿಗೆ ಕಟ್ಟಿದೆ. ಅಮೃತಶಿಲೆಯಲ್ಲಿ ಕಡೆದು ಮಾಡಿದಂತೆ ಕಾಣುವ ಆ ಕಪೋಲಗಳ ಮೇಲಿಂದ ಕಣ್ಣೀರಿನ ಧಾರೆ ಇಳಿದು ಬರುತ್ತಿದೆ-ಹರನ ಮುಡಿಯಿಂದ ಗಂಗೆ ಇಳಿದು ಬಂದ ಹಾಗೆ..... * ಆಕೆಯ ತಾಯಿ ರಟ್ಟಿ ಹಿಡಿದು ಕುಲುಕುತ್ತಿದ್ದಾಳೆ:

ಏಯ್ ನಡಿಯ ಒಳಗೆ, ಕಾರು ಬಂತು.... ರಾಯರು ಬಂದರು. ಒಳಗೆ ನಡಿಯೇ !

....ನೋಡುತ್ತ ನೋಡುತ್ತ ನಾನು ನನ್ನಾಕೆಯೂ ಪರಸ್ಪರರ ಕೈ ಬಿಗಿಯಾಗಿ ಹಿಡಿದುಕೊಂಡೆವು. ನಿಶ್ಯಬ್ದ ವಾಗಿ ಮುಖ ತಿರುಗಿಸಿ ಮನೆ