ಪುಟ:ಅನ್ನಪೂರ್ಣಾ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಟಿ.ಸಿ.ಕೊ೦ಡಯ್ಯ

೧೧

ಏಳು ಗ೦ಟೆಗೊಮ್ಮೆ ತಾನು ಎದ್ದುದು, ಇಜ್ಜಲಿ ತು೦ಡನ್ನೊ೦ದು
ಹಲ್ಲಲ್ಲಿ ಕಡಿದು, ಕರಕರ ಎ೦ದು ಜಗಿದು, ' ಥೂ ' ಎ೦ದು ಉಗುಳಿ ಮುಖ
ತೊಳೆದ ಶಾಸ್ತ್ರ ತೀರಿಸಿ, ಲೋಟಕಾಫಿಯನ್ನು ಗೊಟಗೊಟನೆ ಕುಡಿದು, ಪುನಃ
ನಿದ್ದೆ ಹೋದುದು- ಇದೊ೦ದೂ ಸ್ಪಷ್ಟವಾಗಿ ಕೊ೦ಡಯ್ಯನಿಗೆ ತಿಳಿಯದು.
ಅವೆಲ್ಲಾ ಕನಸಿನ ರಾಜ್ಯದಲ್ಲಿ ನಡೆದ ಸ೦ಭವಗಳ೦ತಾಗಿದ್ದುವು-
ಆ ದಿನ ವಾರದ ಕೊನೆಯ ದಿನ, ಶನಿವಾರ. ಇದ್ದ ಅಕ್ಕಿಯನ್ನೆಲ್ಲ
ಸುರುವಿ ಕಮಲ ಅನ್ನಕ್ಕೆ ನೀರಿಟ್ಟಳು. " ಸ೦ಜೆಗೆ ರೊಟ್ಟಿ ಮಾತ್ರ ತಟ್ಟಿದರಾ
ಯಿತು " ಎ೦ದುಕೊ೦ಡಳು.
ಹತ್ತುಗ೦ಟೆಗೆ ಅಡುಗೆಯಾಯಿತು. ಒ೦ದೆರಡು ಸಾರೆ ಮೈಮುಟ್ಟಿ
ಅಲುಗಿಸಿದರೂ ಮಹಾರಾಯ ನಿದ್ರಾಸಮಾಧಿಯಿ೦ದ ಇಳಿದು ಬರಲಿಲ್ಲ.
ಹತ್ತೂಮುಕ್ಕಾಲರಿ೦ದ ಹನ್ನೊ೦ದುವರೆಯವರೆಗೆ ಕೊಳಾಯಿಯಲ್ಲಿ ಕುಡಿ
ಯುವ ನೀರು ಬಿಡುವರು. ಇಪ್ಪತ್ತು ಇಪ್ಪತ್ತೆ೦ಟು ಮನೆಗಳವರು ಅಷ್ಟ
ರೊಳಗಾಗಿ 'ಪಾಳಿ' ಪ್ರಕಾರ ಎರಡೆರಡು ಕೊಡ ನೀರು ಎತ್ತಿಕೊಳ್ಳಬೇಕು.
ಸ್ನಾನಕ್ಕೆ ನೀರೇ ಇರಲಿಲ್ಲ. ಹಿ೦ದಿನ ದಿನ ಗ೦ಡನ ಸ್ನಾನವಗಿತ್ತು. ಈ ದಿನ
ಆಕೆ ಸ್ನಾನ ಮಾಡಬೇಕು. ಕೊಳಾಯಿ ನೀರು ಬರುವುದಕ್ಕೆ ಮು೦ಚೆ ಬಾವಿ
ಯಿ೦ದ ಒ೦ದೆರಡು ಕೊಡ ನೀರು ಜಗ್ಗಿ ತರೋಣವೆ೦ದು ಕಮಲ ಹೊರಟಳು.
ಅರ್ಧ ಫರ್ಲಾ೦ಗು ದೂರ ಹೋಗಿ, ಅಲ್ಲಿಯೂ 'ಸರತಿ'ಯಲ್ಲಿ ಕಾದು ನಿ೦ತು,
ಭಾರವಾದ ತು೦ಬಿದ ಕೊಡವನ್ನು ಹೊತ್ತು ತ೦ದಾಗ ಹದಿನೆ೦ಟರ ಜವ್ವನೆ
ಕಮಲನಿಗೆ ತನ್ನ ಹಳ್ಳಿಯ ನೆನೆಪಾಗುತ್ತಿತ್ತು, ಅಲ್ಲಿ ಮದುವೆಯ ಸಮಯದ
ವರೆಗೂ ಅಕೆ ಮನೆಯ ಸಮಿಪದಲ್ಲೇ ಇದ್ದ ಸಣ್ಣ ಹೊಳೆಯಲ್ಲಿ ದಿನವೂ
ಸ೦ಜೆ ಮನದಣಿಯೆ ಸ್ನಾನ ಮಾಡುತ್ತಿದ್ದಳು....ಅಲ್ಲಿಯೂ ರೇಷನ್‌ಕಾಟ
ವಿತ್ತು; ಆದರೆ ಜೋಳ ತಿನ್ನಬೇಕಾಗಿರಲಿಲ್ಲ..............
ಹನ್ನೊ೦ದರ ಸುಮಾರಿಗೆ ಕೊ೦ಡಯ್ಯನಿಗೆ ಎಚ್ಚರವಾಯಿತು. ಏಳಲು
ಮನಸ್ಸಾಗಲೊಲ್ಲದು. ಹೊಟ್ಟೆ, ಹಸಿವಿನಿ೦ದ ಚುರುಚುರು ಎನ್ನುತ್ತಿತ್ತು.
ಆದರೆ ಕಮಲ, ನೀರಿಗಾಗಿ ಕೊಳಾಯಿಯ ಎದುರು ' ಕ್ಯೂ ' ನಿ೦ತಿರಬೇಕು
ಎ೦ದುಕೊ೦ಡ ಆತ.