ಪುಟ:ಅನ್ನಪೂರ್ಣಾ.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೨

ಅನ್ನಪೂರ್ಣಾ

ಕಮಲ ಬ೦ದಾಗ ಸಿದುಕಿನಿ೦ದ ಮಾತಾಡಬೇಕೆ ನಗುತ್ತ ಮಾತಾಡ
ಬೇಕೇ-ಎ೦ದು ತೋಚಲಿಲ್ಲ ಕೊ೦ಡಯ್ಯನಿಗೆ ಮಲಗಿದ್ದಲ್ಲಿ೦ದಲೆ ದೃಷ್ಟಿ
ಗೋಡೆಯ ಮೇಲಿದ್ದ , ತನ ತಾಯ್ತ೦ದೆಯರ, ಅಣ್ಣ-ಅತ್ತಿಗೆ ಮತ್ತು ಅವರ
ಮಗುವಿನ ಗ್ರೂಪ್ ಫೋಟೋದ ಕಡೆಗೆ ಸರಿಯಿತು.
ಅಣ್ಣ ಒಳ್ಳೆಯವನು. ತಮ್ಮ ಊರಾದ ಕರ್ನೂಲಿನಲ್ಲೇ ಸ್ವರಾಜ್ಯ
ಬ್ಯಾ೦ಕಿನಲ್ಲಿ ಆತ ಗುಮಾಸ್ತೆ. ಆತನೇನೋ ಆಗಾಗ ಕಾಗದ ಬರಯುತ್ತಿದ್ದ.
" ಕೊ೦ಡ, ನೀನು ತು೦ಬ ಓದಬೇಕು. ಜನರೆಲ್ ನಾಲೆಡ್ಜ ಬೆಳೆಸಿಕೊಳ್ಳ
ಬೇಕು. ಮನಸ್ಸನ್ನು ಕಟ್ಟಿಹಾಕು; ಅತ್ತಿತ್ತ ಓಡಾಡಲು ಬಿಡಬೇಡ. ಯೂನಿ
ಯನ್‌ನಲ್ಲಿ ಕೆಲಸ ಮಾಡು."
ಮನಸ್ಸನ್ನು ಕಟ್ಟಿಹಾಕುವದು ! ಪ್ರೀತಿಯ ಅಣ್ಣನ ಮಾತನ್ನು ನಡೆಸಿ
ಕೊಡಬೇಕೆ೦ದು ಮನಃಪೂರ್ವಕವಾಗಿ ಕೊ೦ಡಯ್ಯ ಯತ್ನಿಸಿದ್ದು೦ಟು.ಆದ
ರೇನು ? ಅದಕ್ಕೆ ಬ೦ದ ಎಡರುತೊಡರುಗಳೊ ! ಯೂನಿಯನ್ನಲ್ಲ; ಬದಲು
ರೈಲ್ವೆ ಇನ್‌ಸ್ಟಿಟೂಟು ಆತನನ್ನು ಆಕರ್ಷಿಸಿತು ಅಲ್ಲಿದ್ದ ಇತರ ಸಹೋ
ದ್ಯೋಗಿಗಳೋ ! ಆ ಆ೦ಗ್ಲೋ-ಇ೦ಡಿಯನ್ ನೌಕರರೋ ! ಅವರು
ತನಗೆ ಕಲಿಸಿದ ಚಾಳಿಗಳೆಷ್ಟು?.....ಮದುವೆಗೆ ಮೊದಲಿನ ಆ ಕೆಲವು ನರಕ
ಪ್ರಾಯವಾದ ರಾತ್ರೆಗಳು...........
ಕೊ೦ಡಯ್ಯನೊಬ್ಬ ಟಿ. ಸಿ; ಟಿಕೆಟ್ ಕಲೆಕ್ಟರ್. ಆ ಕತ್ತೆ ದುಡಿತಕ್ಕೆ
ಎಲ್ಲ ಸೇರಿ ಕಾನೂನುಬದ್ಧವಾಗಿ ಬರುವುದು ೪೮ ರೂಪಾಯಿ ಮಾತ್ರ. ಅದ
ರಲ್ಲಿ ೧೫ ರೂಪಾಯಿ ಊರಿಗೆ ಕಳಿಸಬೇಕು. ' ಗಿ೦ಬಳ ' ಇಲ್ಲದ ಹೊರತು
' ನ್ಯಾಯಸ೦ಧ'ರಾಗಿ-ಬದುಕುವವರೇ ರೇಲ್ವೆ ಡಿಪಾರ್ಟಮೆ೦ಟಿನಲ್ಲಿ ಇಲ್ಲ.
ಎಕ್ಸೆಸ್ ಚಾರ್ಜು ಮಾಡುವಾಗ ರಸೀತಿ ಕೊಡದೆ ಹೊಡೆದುಹಾಕುವುದು;
ಗೂಡ್ಸ್ ಆಫೀಸಿಗೆ ಹೋಗಿ ಯಾವನೋ ಮಾರ್ವಾಡಿಯ ಇಲ್ಲವೆ ಕನ್ನಡ
ವ್ಯಾಪಾರಿಯ ಸಾಮಾನು ಬುಕ್‌ಮಾಡಿಕೊಟ್ಟುದಕ್ಕೆ ಕೈಬಿಸಿ; ಯಾವನೋ
ಸಹೋದ್ಯೋಗಿಯ ಗಿ೦ಬಳದಲ್ಲಿ ಒ೦ದು ಪಾಲು;-ಹೀಗೆ ಸ೦ಪಾದನೆ
ಯಾದರೆ ಮಾತ್ರ ಕೊ೦ಡಯ್ಯನ ರಥ ಸಾಗುವುದು.
ಮೊದಮೊದಲು ಕೊ೦ಡಯ್ಯನಿಗೆ ಅದೆಲ್ಲ ಹೇಸಿಕೆ ಹುಟ್ಟಿಸುತ್ತಿತ್ತು.
ನ್ಯಾಯನಿಷ್ಠುರರಾದ ತಾಯ್ತ೦ದೆಯರ, ಅನ್ಯಾಯಕ್ಕಿದಿರು ಹೋರಾಟದ