ಪುಟ:ಅನ್ನಪೂರ್ಣಾ.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಓದುವದಕ್ಕೆ ಮು೦ಚೆ

'ಅನ್ನಪೂರ್ಣಾ' ಕಥಾಸಂಕಲನದಲ್ಲಿ ಹತ್ತು ಸಣ್ಣಕತೆಗಳಿವೆ. ಕೊನೆಯದಾದ ' ಅನ್ನಪೂರ್ಣಾ ' ಕತೆಯನ್ನು ನಾನು ೧೯೪೧ರಲ್ಲಿ ಬರೆದೆ. ವೆಾದಲಿನದಾದಾ 'ಬದುಕುವ ಬಯಕೆ' ೧೯೫೧ರದು. ಕಳೆದ ವರ್ಷ ಬರೆದ ಎರಡು ಕತೆಗಳೂ ಈ ಸಂಗ್ರಹದಲ್ಲಿವೆ.

ಬರೆದವನು ತನ್ನ ಕೃತಿಗಳ ಬಗೆಗೆ ಏನಾದರೂ ಹೇಳಿಕೊಂಡಾಗ, ವಿಮರ್ಶಕರು ಆ ಹೇಳಿಕೆಯ ಒರೆಗಲ್ಲಿಗೆ ಅವನ ಕೃತಿಗಳನ್ನು ತೀಡಿನೋಡುತ್ತಾರೆ.ಬರೆದವನ ಮಾನದ೦ಡದಿ೦ದಲೂ ಅಳೆದು ನೋಡುತ್ತಾರೆ. ಇದರಿಂದ ಲಾಭವೂ ಇದೆ. ಪ್ರಾಮಾಣಿಕನಾದ ವಿನಯಶೀಲನಾದ ಬರಹಗಾರನಿಗೆ ಲಾಭ: ಅಪ್ರಾಮಾಣಿಕನಾದ ಅಹಂಕಾರಿಯಾದ ಬರೆಹಗಾರನಿಗೆ ನಷ್ಟ.

ಕೃತಿರಚಿಸಿದವನ ಹೇಳಿಕೆಯಿ೦ದ ಇನ್ನೊ೦ದು ಪ್ರಯೋಜನವಿದೆ. ಅದು ಓದುಗನಿಗೆ ಆಗುವ ಪ್ರಯೋಜನ. ಕೃತಿಗಳನ್ನು ಸರಿಯಾಗಿ ತಿಳಿದುಕೊಳ್ಳಲು ಅಂಥ ಹೇಳಿಕೆ ಸಹಾಯಕವಾಗುತ್ತದೆ.

ಇಲ್ಲಿರುವ ಕತೆಗಳಲ್ಲಿ 'ಬದುಕುವ ಬಯಕೆ' ವೀರಸಂತಾನಕ್ಕಾಗಿ ಹಾತೊರೆಯುವ ವೇಶ್ಯೆಯೊಬ್ಬಳ ಕತ ಕಾಮದ ದೃಷ್ಟಿಯಿಂದಲ್ಲ, ಮಾನವತೆಯ ದೃಷ್ಟಿಯಿಂದ ಅದು ಬರೆಯಲ್ಪಟ್ಟಿದೆ.

'ಸುಮಂಗಲೆ ಶಿರಿನ್ ' ಮತ್ತು 'ಕೇರಾಫ್ ಕಾಗದ', ನಮ್ಮ ಈಗಿನ ಮಧ್ಯಮವರ್ಗದ ಎಳೆಯರ ಪ್ರೇಮ ವ್ಯವಹಾರಗಳಿಗೆ ಸಂಬಂಧಿಸಿವೆ. ಒಂದರಲ್ಲಿ, ದುರಂತದಲ್ಲಿ ಮುಕ್ತಾಯವಾಗುವ ತಪ್ಪು ಹಾದಿಯಿದೆ. ಇನ್ನೊ೦ದರಲ್ಲಿರುವುದು ಸರಿಯಾದ ಹಾದಿ. ಕುರುಡು ಸಂಪ್ರದಾಯಗಳ ದಾಸರು ಚಿಗುರುವ ಬಳ್ಳಿಗಳನ್ನು ಚಿವುಟಿ ಕೊಲ್ಲುತ್ತಾರೆ. ತಿಳಿವಳಿಕೆಯುಳ್ಳ ಮಾನವರು ವಾತ್ಸಲ್ಯದ ನೀರೆರೆದು, ಸರಿಯಾದ ಹಾದಿಯಲ್ಲಿ ಆ ಬಳ್ಳಿ ಬೆಳೆಯಲು ಅನುವು ಮಾಡಿಕೊಡುತ್ತಾರೆ.

ನೀವು ರೈಲುಗಾಡಿಯಲ್ಲಿ ಪ್ರಯಾಣ ಮಾಡಿರಬಹುದ. ಟಿಕೆಟ್ ಕಲೆಕ್ಟರುಗಳನ್ನು ಚೆಕ್ಕರುಗಳನ್ನು ಕ೦ಡಿರಬಹುದು. ಅಂಥವನೊಬ್ಬ "ಟಿ.ಸಿ.ಕೊ೦ಡಯ್ಯ." ಈ ಸಮಾಜ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿರುವ ಆತ ನಿಮ್ಮ ಸಹಾನುಭೂತಿಯನ್ನು ಅಪೇಕ್ಷಿಸುತ್ತಾನೆ.

"ರೋಟರಿಯ ಕೆಳಗೆ” ಕತೆ ಪ್ರಾಯಶಃ ಎಲ್ಲ ಓದುಗರಿಗೂ ಪರಿ ಚಯವಿಲ್ಲದ ವಸ್ತುವನ್ನು ಒಳಗೊ೦ಡಿದೆ. ನಮ್ಮ ದಿನ ನಿತ್ಯದ ಜೀವನದಲ್ಲಿ