ಪುಟ:ಅನ್ನಪೂರ್ಣಾ.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೦

ಅನ್ನಪೂರ್ಣಾ

" ಹೂ೦. "
" ಅಲ್ಲೊ೦ದು ತಮಾಷೆಯಾಯ್ತು ಕಣೇ."
" ಹೇಳಣ್ಣ - ಹೇಳಣ್ಣ "

****

ರಾಧಾಕೃಷ್ಣಯ್ಯ ( ನಾನು ) ಹಳ್ಳಿಗೆ ಹೋದಾಗ, ಶಂಕ್ರಯ್ಯನ ಮನೆಗೆ
ಬೇರೆ ಯಾರೋ ಗೆಳೆಯರೂ ಬಂದಿದ್ದರು. ಏನೋ ಆಟದ ಸಾಮಾನು
ಏಜನ್ಸಿ ಇತ್ತಂತೆ ಅವರಿಗೆ. ಅವರು, ಅವರಾಕೆ, ಮಗಳೊಬ್ಬಳು. ಶಂಕರ
ಯ್ಯನ ಹೊಸ ದೋಸ್ತಿಯಂತೆ ಆತ.
ಕ್ರಿಸ್ಮಸ್ ಹಬ್ಬದ ಕಾಲ ಆಗ. ತುಂಬ ಒಳ್ಳೆಯವಳು ಆ ಮಿತ್ರರ
ಮಗಳು. ಒಳ್ಳೆ ರಸಿಕ ಹುಡುಗಿ, ಹಳ್ಳಿಯವರ ಹಾಗೆಯೇ ಉಡುಪು ಬದ
ಲಾಯಿಸಿಕೊಂಡಳು ತಮಾಷೆಗೇಂತ. ಕಾಲೇಜು ಓದುವ ಹುಡುಗಿ
ಎಂದು ಯಾರೂ ಹೇಳುವ ಹಾಗಿರಲಿಲ್ಲ.
ಶಂಕರಯ್ಯನವರ ಮಗ ಗೋಪಾಲ ಆ ವರ್ಷವೆಲ್ಲಾ ಮನೆಗೆ ಬರದೆ
ಇದ್ದವನೂ ಆಗಲೇ ಬರಬೇಕೆ ? ಬಿ. ಎ. ಮುಗಿಸಿ ಕೆಲಸ ಸಿಗದೇ ಲಾಟರಿ
ಹೊಡೆಯುತ್ತಿದ್ದ ಮಹಾನುಭಾವ ಆತ !
ಬಂದವನು ಸುಮ್ಮನಿರುವುದುಂಟೆ ?
ಮನೆ ತುಂಬ ಸಾವಿರ ಮಾತಾಡುತ್ತಿದ್ದರು ಎಲ್ಲರೂ. ಆ ನಡುವೆ
ಅವರಿಬ್ಬರೂ ಹೇಗೆ ಬಿಡುವು ಮಾಡಿಕೊಂಡರೋ ?
" ಇಂಗ್ಲಿಷ್ ಬರತ್ತನಿಂಗೆ ? " ಎಂದು ಗೋಪಾಲ ಮೊದಲು
ಕೇಳಿದನಂತೆ.
" ಊಹು೦, " ಎಂದಳು ಹುಡುಗಿ.
" ಹೈಸ್ಕೂಲಿಗೂ ಹೋಗಿಲ್ಲಾನ್ನು "
" ಊಹೂ೦? "
" ಯಾಕೆ ? "
" ಬೇಡ ಅನ್ನಿಸಿತ್ತು, ಹಳ್ಳಿಯವರ ಜತೇಲೇ ಇರೋ ಆಸೆ ನಂಗೆ. "
ಎಂಥ ತುಂಟ ಶಿಖಾಮಣಿ ಆಕೆ ! ಗೋಪಾಲ ಹೊಲವೆಲ್ಲಾ ಸುತ್ತಾಡಿ