ಪುಟ:ಅನ್ನಪೂರ್ಣಾ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಜಯಿ ಆದರೆ

ಯಾರೋ ಬಾಗಿಲು ತಟ್ಟಿದರು!
ಪ್ರಾತ:ಕಾಲ ಐದೂವರೆ ಗಂಟೆಯ ಹೊತ್ತು ;ದೀಪದ ಎದುರಿನಲ್ಲಿ
ಅವಸರವಸರವಾಗಿ ಏನನ್ನೋ ಬರೆಯುತಿದ್ದ ನಾನು, ಬಾಗಿಲು ತೆರೆದು
ಹೊರಗಿಣಿಕಿದೆ.
ವೆಂಕಟಪ್ಪ ಜೋಡಿಸಿ ನಿಂತಿದ್ದ ;ನಾನು ಪ್ರತಿವಂದನೆ ಮಾಡಿದೆ.
ಮುದುಕ ಊದ್ವಗ್ನನಾಗಿದ್ದ . ಬಡಕಲ್ಲಾಗಿದ ಆ ಕೈ ಬೆರಳುಗಳು
ನಡುಗುತಲ್ಲಿತಾವು."ಲಿಂಗಣ್ಣ ಹೋದ ರಾಯರೇ " ಎಂದ.
ನನಗೆ ಅರ್ಥವಾಗದೆ , "ಏನು ?" ಎಂದು ಪ್ರಶ್ನೆಸಿದೆ .
"ಲಿಂಗ ಹೊರಟು ಹೋಗಿಬಿಟ್ಟ; ಪುಣೆಗೆ! ನಿನ್ನೆ 'ಆಡ್ದ್ರ್ರು' ಬಂತು.
ನಸುಕಿನಲ್ಲಿ, ನಿಮ್ಮನ್ನು ಕಂಡು ಮಾತಡಕಾಗಲ್ಲಿಲ . ಐದು ಗಂಟೆ ಟ್ರೈನಿಗೆ
ಹೋದ .ನಿಮಗೆ ನಮಸ್ಕಾರ ಹೇಳಿದ್ದಾನೆ ...ದೇವರು ....ಒಳ್ಳೇದು
ಮಾಡಬೇಕು ..."
ಈಗ ನನಗೆಲ್ಲಾ ಹೊಳೆಯಿತು. ಲಿಂಗಣ್ಣ ಸೈನ್ಯಕ್ಕೆ ಸೇರಬೇಕೆಂದು
ಇಷ್ಟಿಸಿದುದು;ವೆಂಕಟಪ್ಪ ಆ ವೆಚಾರ ಆಗಾಗ್ಗೆ ಹೆಳ್ಳುತಿದುದು ...
ನನಗೆ ಸಂತೃಷಿಯಾಯಿತೆಂದು ತಿಳಿಯಲು ಮುದುಕನಿಗೆ ಆತುರ.
"ಸಂತೋಷ್! ಸಂತೋಷ್! "ಎಂದೇ .
"ಭಾವಾ! ಮಾವಾ! "ಎಂದು ಹೆಂಗುಸರು ಅಂಗಳದಿಂದ ವೆಂಕಟಪ್ಪ
ನನ್ನ ಕರೆಯುತಿದರು. ಲಿಂಗಣ್ಣನನ್ನು ಬೀಳ್ಕೊಟ್ಟು ಹಿಂದಿರುಗುತ್ತಿದವರು
ಅವರು. ಮುದುಕ " ಬರಿತೀನಿ, ಸ್ವಾಮಿ!"ಎಂತು ಹೊರಟು ಹೋದ.