ಪುಟ:ಅನ್ನಪೂರ್ಣಾ.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಜಯಿ ಆದರೆ

೬೭

ಅಥವಾ ಇನ್ನು ಯಾವುದಾದರೂ ದೊಡ್ಡ ಹುದ್ದೆಗೋ ಏರಿ ಕೈತುಂಬಾ ಸಂಬಳ ಪಡೆಯಬೇಕು, ಎಂದೆಲ್ಲ ಅವನ ಹಂಬಲ.

****

ಕೆಲವು ಭಾರತೀಯ ಸೈನ್ಯಗಳು ಲಿಬಿಯಾದ ಯುದ್ಧರಂಗಕ್ಕೆ ಹೋದುವು. ಲಿಂಗಣ್ಣನೂ ಆ ಸೈನ್ಯದಲ್ಲೇ ಇದ್ದ. ತನ್ನ ಜನ್ಮಭೂಮಿಯಲ್ಲಿ ಇದ್ದಾಗ ಬರೆದ ಕೊನೆಯ ಪತ್ರ ವೆಂಕಟಪ್ಪನಿಗೆ ತಲುಪಿತು. ಅವನಿಗೆ ತುಂಬಾ ಕಳವಳ. ಆದರೂ, ಯುದ್ಧಕ್ಕೆ ಸೇರಿದ ಮೇಲೆ ವೀರನಂತೆ ರಣರಂಗಕ್ಕೆ ಹೋಗಬೇಕೆಂಬುದನ್ನು ಅವನು ಒಪ್ಪದಿರಲಿಲ್ಲ.
ಲಿಬಿಯಾದ ವಿಜಯದ ಕುರಿತು, ಬಾರ್ಡಿಯಾದ ಮುತ್ತಿಗೆಯಲ್ಲಿ ಭಾರತೀಯರು ತೋರಿಸಿದ ಪರಾಕ್ರಮದ ಕುರಿತು, ನಾನು ಅವನಿಗೆ ವಿವರಿಸಿ ಹೇಳುತ್ತಿದ್ದೆ. ವೆಂಕಟಪ್ಪ ಸಂತುಷ್ಟನಾಗದೆ ಇರುತ್ತಿರಲಿಲ್ಲ.
ಆದರೆ ಅವನಿಗೊಂದು ಸಂಶಯ. ಯುದ್ಧದ ವಿಜಯೀ ವೀರರ ಹೆಸರುಗಳನ್ನು ಯಾಕೆ ಹೊರಗೆ ತಿಳಿಸುವುದಿಲ್ಲ? ಎಂದು. ಲಿಂಗಣ್ಣನೂ ಅವರಲ್ಲೊಬ್ಬನೇಕೆ ಆಗಿರಬಾರದು? ಎಂದು.
ಮುಂದುವರಿದ ವಿಜ್ಞಾನ ಯುಗದ ಈ ಯುದ್ದದಲ್ಲಿ, ಮಾನವ ಜೀವಿಗೆ ಬೆಲೆಯಿಲ್ಲವೆಂಬುದ್ದನ್ನು ಮನದಟ್ಟಾಗುವಂತೆ ತಿಳಿಸಲು ನಾನು ಬೇರೆ ಸಂದರ್ಭವನ್ನೇ ಹುಡುಕಬೇಕಯಿತು.

++++

ಬಳಿಕ ಬಂದುದು ಗ್ರೀಸಿನ ಮಹಾಯುದ್ಧ! ವೈರಿ ರಾಷ್ಟ್ರ, ತನ್ನ ಭೀಕರತೆಯ ನಗ್ನತೆಯನ್ನು ಪ್ರದರ್ಶಿಸಿ ಚಿಕ್ಕದೊಂದು ಸ್ವತಂತ್ರ ರಾಷ್ಟ್ರವನ್ನು ಪುಡಿ ಗೂಡಿಸಿದ ಯುದ್ಧ.
ವೆಂಕಟಪ್ಪ, ಈ ದಿನಗಳಲ್ಲಿ, ಉತ್ಕಂಠಿತನಾಗಿಯೇ ಇರುತ್ತಿದ್ದ. ಲಿಂಗಣ್ಣನ ಕಾಗದ ಈಜಿಪ್ತಿನಿಂದ ಒಂದೇ ಬಾರಿ ಬಂದಿತ್ತು. ಶುಭ ದಿನಗಳನ್ನು-ಬಂಧುಬಳಗವನ್ನು ಸಂದರ್ಶಿಸುವ ಸುದಿನಗಳನ್ನು-ತಾನು ನಿರೀಕ್ಷಿಸುವುದಾಗಿ ಅವರಲ್ಲಿ ಬರೆದಿದ್ದ.
ತನ್ನ ಮಗನು ವೀರನೆಂದೂ, ಹೇಡಿಯಂತೆ ವರ್ತಿಸಿ ತನ್ನ ಹೆಸರಿಗೆ ಕಳಂಕ ತಾರನೆಂದೂ ವೆಂಕಟಪ್ಪನಿಗೆ ಖಂಡಿತ ಗೊತ್ತಿತ್ತು.