ಪುಟ:ಅನ್ನಪೂರ್ಣಾ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೨

ಅನ್ನಪೊರ್ಣಾ

ವಪ್ಪ್, ದುಡ್ಡಿಲ್ಲ ಎಷ್ಟೋ ರೈತರು ಆರುಕಾಸು ಮೂರುಕಾಸಿಗೆ ಹೊಲ
ಮರಿ ಊರು ಬಿಡ್ತಿದ್ದಾರೆ. ಅದನ್ನು ಕೊಂಡುಕೊಂಡು ಅವರಿಗೆ ಸ್ವಲ್ಪಾ
ದರೊ ಸಹಾಯವಾಗ್ಬೇಕು. ಅದು ನನ್ನು ಧರ್ಮ...ಅದರೆ ಸಾಕಷ್ಟು ದುಡ್ಡೇ
ಇಲ್ಲ...ನೀನು ಎಲ್ಲಿಯಾದರೊ ಕೆಲಸ ಹುಡುಕಿಕೊಂಡು ಹೋಗಸ್ರ...
ನಿನ್ನ ಹೆಂಡತಿಯೊಬ್ಬಳು ಇಲ್ಲೇ ಇರಲಿ. ಮುಸುರೆತಿಕ್ಕೋಕೆ ಯಾರಾದ
ರೊಬ್ಬಳು ಬೇಕಲ್ಲ್--"
ನಾವು ಗೋಳೋ ಎಂದು ಆತ್ತೆವು. ಕಣ್ಣಲ್ಲಿ ನೀರು ಇಂಗಿದ ಮೇಲೆ
ಆಳು ನಿಲ್ಲಿಸಿದೆವು.
++++
ಬಹಳ ದಿನ ನಾನು ಮನೆ ಬಿಡಲಿಲ್ಲ್-ಆದರೆ, ಬದುಕು ಹ್ಯಾಗೆ ಸಾಗ
ಬೇಕು? ಮಗ ಯಾಕೋ ನಗುವದನ್ನು ನಿಲ್ಲಿಸಿತು. ಕೊರಗುವ ತಾಯಿ,
ಸೊರಗುವ ಮಗು! ಮೊದಮೊದಲು ಹಗಲು ರಾತ್ರೆಯೂ ಮಗು
ಆಳುತ್ತಿತ್ತು. ಆ ಮೇಲೆ ಆಳುವುದನ್ನೂ ನಿಲ್ಲಿಸಿತು...ಆಳದೇ ಇರುವ ಎಳೆಯ
ಮಕ್ಕಳನ್ನು ಕಂಡರೆ ನಿಮಗೆ ಇಷ್ಟ್ ಅಲ್ಲವೆ? ಆದರೆ ನನ್ನ ಮಗ-ಅದು
ಆಳದೇ ಇದ್ದುದು ಶಕ್ತಿಯಿಲ್ಲ್...ಆಳುವುದಕ್ಕೂ ಶಕ್ತಿ ಬೇಕು ಸ್ವಾವಿ...
ನೀವು ನೋಡಲು ನೀಟ್ಟಾಗಿದ್ದೀರಿ. ಶುಭ್ರವಾದ ಬಟ್ಟೆಬರೆ ಹಾಕಿ
ಕೊಂಡಿದ್ದೀರಿ. ನಿಮ್ಮ ಜೇಬು ಖಾಲಿಯಾಗಿದೆಯೋ ಏನೋ. ಅದು ನನಗೆ
ತಿಳಿಯದು.ನೀವೆಂಥ ತಿಂಡಿ ತಿನಿಸಿನವರೋ ಯಾರಿಗೆ ಗೊತ್ತು?
ರಾಗಿಮುದ್ದೆ-ಅನ್ನ್ ನನಗೆ ಬಲುಮೆಚ್ಚುಗೆಯಾಗಿದ್ದುವು.ಒಂದು
ಕಾಲದಲ್ಲಿ...ಕ್ರಮೇಣ ಅ ಮೆಚ್ಚುಗೆ ಕಡಿಮೆಯುಂಟಾಯಿತು. ರಾಗಿಯೂ
ಅಕ್ಕಿಯೂ ಮಾಯವಾದಾಗ...ಮನೆಗೆ ಕತಾಳೆಗಡ್ಡೆ ಬಂತು...ಅದನ್ನು
ಬೇಯಿಸಿ ತಿಂದೆವು...ಧನಿಗಳ ಮನೆಯಿಂದ ಬಂದುದನ್ನು ಹಂಚಿಕೊಂಡೆವು.
ಒಂದು ಚೊರನ್ನು ಮಗುವಿಗೆ ಕೊಟ್ಟೆವು.
ನಾನು ಮನೆ ಬಿಟ್ಟೆ, ಕೆಲಸ ಹುಡುಕಿಕೊಂಡು ಹೆಂಡತಿ ಮಗುವನ್ನೆತ್ತಿ
ಕೊಂಡು ಹಳ್ಳಿಯ ಹೊರಗೆ ಅರ್ಧಹಾದಿಯವರೆಗೊ ಬಂದಳು.ಬಂದವಳು
ವಾಪಸು ಹೋದಳು.