ಪುಟ:ಅನ್ನಪೂರ್ಣಾ.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ನಪೂರ್ಣಾ ೭೭

ಭವ ಕೆಲಸವಾಗಿತ್ತು ಆಗ. ವ್ರತ ಉಪವಾಸಗಳಿದ್ದರೂ ಸರಿಯೇ,ಯಾರಿಗೂ ಹಸಿವಾಗುತ್ತಿರಲಿಲ್ಲ. ಅನ್ನಪೂರ್ಣೆಗೆ ತೃಪ್ತಿಯಾಗಬೇಕು,-ಅದಕ್ಕಾಗಿ ಬರಿ ಹೊಟೆಯವರಾರೂ ಇರಲಿಲ್ಲ.

ಕರೆ ಕೊಟ್ಟ ಸ್ವಲ್ಪ ಹೊತ್ತಿನ ತನಕ ಅರ್ಚಕರು ನಿಯಮದಂತೆ ಕಾದು

ಕುಳಿತುಕೊಳ್ಳುವರು. ಯಾರೂ ಬರುತ್ತಿರಲಿಲ್ಲ. ದೇವಿಗೆ ಸಮರ್ಪಿಸಿದ ನೈವೆದ್ಯವನ್ನೆತ್ತಿಕೊಂಡು ಆ ಮೇಲೆ ಅವರು ಗೃಹಾಭಿಮುಖವಾಗಿ ತೆರಳುವರು.

ಊರು ಮುಖಂಡರಿಗೆ ಸಂತೋಷವಾಯಿತು.ಅನ್ನದಾನಕ್ಕಾಗಿ

ದೇವಿಯ ಭಂಡಾರದಿಂದ ಏನೇನೂ ವೆಚ್ಚವಾಗುವುದಿಲ್ಲವಲ್ಲಾ ಎಂದು.

* * * * * *

ಮೊದಲು ಬಂದುದು ಪರದೇಶಿಯರ ಆಕ್ರಮಣ-ಕೊಳ್ಳೆ. ಅದರ

ಹಿಂದಿನಿಂದ ಬಂದುದು ಕ್ಷಾಮ,-ಬರಗಾಲ. ದಾರಿದ್ರ್ಯ ದೇವಿ ಅಲ್ಲಿ ತೋರಿ ಕೊಂಡು ಕೆಲಕಾಲ ನರ್ತಿಸಿ ಹೊರಟು ಹೋಗಿದ್ದಳು.

ಆಗ ಹಸಿದವರಿಗಾಗಿ ಅನ್ನಪೂರ್ಣೆಯ ಕರೆ ಬಂದಾಗ ಜನರು ತಂಡ

ತಂಡವಾಗಿ , ಇಳಿಮೊಗದವರಾಗಿ, ಅವನತಶಿರರಾಗಿ ದೇಗುಲದ ಮುಂದೆ ಬಂದು ನಿಂತರು. ಅನ್ನದಾನದ ಕಾರ್ಯ ಉತ್ಸಾಹದಿಂದ ನಡೆಯತೊಡಗಿತು.

ಅಂದಿನಿಂದ ಹಸಿದವರ ಹೊಟ್ಟೆ ತಣಿಯಲಿಲ್ಲ.ನಿರುದ್ಯೋಗಿಗಳು,

ದಿನಗೂಲಿ ದೊರಕದವರು, ಅರೆಹೊಟ್ಟೆಯವರು, ಭಿಕ್ಷುಕರು, ಬಡವರು- ಇವರ ಸ್ತೋಮಗಳಿಗೆ ಕಡಿಮೆ ಇರಲಿಲ್ಲ.

ಈ ವ್ಯವಹಾರ ಹೀಗೆಯೆ ಮುಂದೆ ಸಾಗಿತು. ಊರ ಮುಖಂಡರು

ಮಿಕಿ ಮಿಕಿ ಪರಸ್ಪರ ನೋಡಿಕೊಂಡರು.ಅರ್ಚಕರು ಬೇಸತ್ತು ಗೊಣಗುಟ್ಟತೊಡಗಿದರು.ಹಸಿದು ಬಂದವರು ಅರೆ ಹೊಟ್ಟೆಯಲ್ಲೇ ಹಲವೊಮ್ಮೆ ಹಿಂದಿ ರುಗಿದರು. ಮನೆಗೆ ನೈವೇದ್ಯಕ್ಕೆ ಕೊಂಡೊಯ್ಯುವುದಕ್ಕೆ ತಡವಾಗುತ್ತದೆಂದು ಅರ್ಚಕರು ಚಡಪಡಿಸಿದರು.

  • * * * * *

ಆಗಲೇ ಒಮ್ಮಿಂದೊಮ್ಮೆಲೆ ಜನರು ಮಾತನಾಡಿಕೊಳ್ಳತೊಡಗಿದ್ದು.

"ಹೀಗೆ ಅನುದಿನವೂ ಉಪದ್ರನವಿತ್ತರೆ ಹೇಗೆ?"

"ಅನ್ನಪೂರ್ಣಾ ದೇವಿಗೆ ಅತೃಪ್ತಿಯಾಗಿದೆ!"