ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀರವತಿ, ೭ ರಾಜ್ಯದಲ್ಲಿ ಇರುವ ಅವ್ಯವಸ್ಥೆಯನ್ನೆಲ್ಲ ಕ್ರಮಪಡಿಸಿದನು. ತನ್ನ ಶೌರ್ಯ ಸಾಹಸಗಳಿಂದಲೂ, ಸತ್ಸವರ್ತನೆಯಿಂದಲೂ ಜಗದೇವನು ರಾಜನಿಗೆ ವಿಶೇಷ ಪ್ರೀತಿ ಪಾತ್ರನಾದನು. ಆಮೇಲೆ ಕೆಲವು ದಿವಸಗಳಿಗೆ ವೀರಮತಿಯು ಒಬ್ಬ ಪುತ್ರನನ್ನು ಪಡೆದಳು. ಆಗ ಜಗದೇವನು ದೊಡ್ಡ ಉತ್ಸವವನ್ನು ಮಾಡಿ ಶಿಶು ವಿಗೆ ಜಗದ್ದವಳ ' ಎಂದು ಹೆಸರನ್ನು ಇಟ್ಟನು. ಜಗದೇವನಿಗೆ ಅಧಿಕಾರವು ದೊರೆತ೦ದಿನಿಂದಲೂ ದುಷ್ಟರಿಗೆ ಬಹು ಭಾಧೆ ಯುಂಟಾಗುತಲಿತ್ತು, ಆದಕಾರಣ ಅವರು ಜಗದೇವನನ್ನು ಕೊಲ್ಲುವುದಕ್ಕೆ ಅನೇಕ ಪ್ರಯತ್ನಗಳನ್ನು ವಿಫಲಮನೋರಥರಾದರು. ಕೆಲವು ಕಾಲದವರೆಗೂ ಜಗದೇವನು ಸುಖವಾಗಿದ್ದನು. ಹೀಗಿರಲು ಒಂದು ವರ್ಷ ಆ ಪಟ್ಟಣದಲ್ಲಿ ಮಾರೀಜಾಡ್ಯವು ತಲೆದೋರಿ ಅದರಿಂದ ಅನೇಕ ಪ್ರಜೆಗಳು ಸಾಯುತಲಿದ್ದರು. ಯಾವ ಉಪಾಯದಿಂದಲೂ ವ್ಯಾಧಿಯು ನಿಲ್ಲಲಿಲ್ಲ. ಅರಸನು ಸತ್ವ ಪ್ರಜಾ ಸಂಹಾರವು ಆಗುವುದೋ ಏನೋ ಎಂದು ಭಯಪಟ್ಟು, ಆ ಜಾಡ್ಯವು ಕಡಮೆ ಯಾಗುವುದಕ್ಕಾಗಿ ಊರಿನ ಆಚೆ ಇದ್ದ ಕಾಳಿಕಾಲಯಕ್ಕೆ ಪ್ರತಿದಿನವೂ 'ಹೋಗಿ. ಆಕೆಯನ್ನು ಪೂಜಿಸುತಲಿದನು. ಇಂತಹ ಸಂಕಟ ಸಮಯದಲ್ಲಿ ಯಾರು ಏನು ಹೇಳಿದರೂ, ಎಂತಹ ಅಸಂಭವವಾದ ದೈವಿಕ ಚಮತ್ಕಾರಗಳನ್ನು ಹೇಳಿದರೂ, ರಾಜನು ನಂಬುವನು ಎಂದು ಎಣಿಸಿ ಆ ದುಷ್ಟರು ಒಂದು ಯುಕ್ತಿಯನ್ನು ಕಲ್ಪಿಸಿ ದರು. ರಾಜನು ಆಲಯಕ್ಕೆ ಬರುವುದರೊಳಗೆ, ಒಬ್ಬನು ದೇವಿಯ ಹಿಂದೆ ನಿಂತು ಕೊಂಡು ರಾಜನು ಏಕಾಂತ ಪೂಜೆಯನ್ನು ಮಾಡುವಾಗ, ದೇವಿಯು ಹೇಳಿದಂತೆ, “ ಓ ಮಹಾರಾಜನೇ ! ನಿನ್ನ ನಿಷ್ಕಲ್ಮಷವಾದ ಭಕ್ತಿಗೆ ಮೆಚ್ಚಿದೆನು. ಸಕಲ ಸದ್ಗುಣ ಸಂಪನ್ನನಾದ ಒಬ್ಬ ರಾಜಕುಮಾರನನ್ನು ನನಗೆ ಬಲಿಕೊಟ್ಟರೆ ಈರೋಗವು ಹೋಗಿ ನಿನ್ನ ಪ್ರಜೆಗಳು ಸೌಖ್ಯವನ್ನು ಹೊಂದುತ್ತಾರೆ,” ಎಂದು ಹೇಳಿದನು. ಅದಕ್ಕೆ ರಾಜನು, “ ಓತಾಯಿಯೇ ! ನನ್ನ ರಾಜ್ಯದಲ್ಲಿ ಸಕಲಸದ್ದು ಣಸಂಪನ್ನ ನಾದ ರಾಜಕುಮಾರನು ಯಾವನು ಇರುವನೋ ನೀನೇ ತಿಳಿಸು,” ಎಂದು ಕೇಳಿ ದನು. ಅದಕ್ಕೆ ದೇವಿಯು, “ವತ್ಸಾ ! ನಿನ್ನ ರಾಜ್ಯದಲ್ಲಿ ಗುಣವಂತನಾದ ರಾಜ ಕುಮಾರನು ಇಲ್ಲ ಎಂದು ಚಿಂತಿಸಬೇಡ. ನಿನ್ನ ಕೊತ್ವಾಲನಾದ ಜಗದೇವನು ಸಕಲಗುಣ ಸಂಪನ್ನನು, ಆತನನ್ನು ನನಗೆ ಬಲಿಯಾಗಿ ಸಮರ್ಪಿಸಿದರೆ ನೀನೂ ನಿನ್ನ ಪ್ರಜೆಗಳೂ ಸುಖಿಸುವಿರಿ,” ಎಂದನು. ಈ ಮಾತುಗಳನ್ನು ಕೇಳಿ ದೊರೆಯು ಖಿನ್ನವದನನಾಗಿ ಮನೆಗೆ ಹೋದನು. ಜಗದೇವನು ಅರಸನು ಚಿಂತಾಕ್ರಾಂತ ನಾಗಿರಲು ಕಾರಣವು ಏನು ಎಂದು ವಿಚಾರಿಸಿ, ಆ ವಿಷಯವನ್ನು ತಿಳಿದುಕೊಂಡು, “ ಪ್ರಜೆಗಳಿಗೋಸ್ಕರವೂ ರಾಜನಿಗೋಸ್ಕರವೂ ತಾನು ದೇವಿಗೆ ಬಲಿಯಾಗುವೆನು,” ಎಂದು ರಾಜನಿಗೆ ತಿಳಿಸಿದನು. ರಾಜನು, “ ಹಾಗೆ ಮಾಡಬೇಡ,” ಎಂದು ಬಹು ವಿಧವಾಗಿ ಹೇಳಿದರೂ ಕೇಳದೆ ಜಗದೇವನು ಮನೆಗೆ ಹೋಗಿ ವೀರಮತಿಗೆ ತಿಳಿಸಲು,