ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣೀ ರುವಾಶೀ ಲಕ್ಷ್ಮಿಬಾಯಿ. ೨೩೧ ಗುಣಸಹಿತರಾದ ಶೂರರ ಸಹವಾಸವೇ ಕಾರಣವು ಎಂದು ಹೇಳಬಹುದು. ಇದರಿಂದ ಸ್ತ್ರೀಯರು ಸ್ವಭಾವದಲ್ಲಿ ಅತ್ಯಂತ ಭೀರುಗಳೆಂತಲೂ ಅವರಿಗೆ ಶೌರ್ಯ ಧೈರ್ಯಾದಿ ಗುಣಗಳುಂಟಾಗಲಾರವು ಎಂತಲೂ ಹೇಳುವವರ ಸಂಶಯವು ನಿವಾ ರಣೆಯಾಗುವುದು. ಒಂದುದಿವಸ ಝಶೀಸಂಸ್ಥಾನದ ಜ್ಯೋತಿಷ್ಯನಾದ ತಾತ್ಯಾ ದೀಕ್ಷಿತನು ಬಾಜೀರಾಯನನ್ನು ನೋಡುವುದಕ್ಕಾಗಿ ಬ್ರಹ್ಮಾನರ್ತಕ್ಕೆ ಬಂದನು. ಸಂದರ್ಭಾ ನುಸಾರವಾಗಿ ಮೋರೋಪಂತನು ಆತನೊಡನೆ “ ನಮ್ಮ ಹುಡುಗಿಗೆ ತಕ್ಕವರನು ನಿಮ್ಮ ಸಂಸ್ಥಾನದಲ್ಲಿ ಯಾರಾದರು ಇರುವರೇ ? ” ಎಂದು ಕೇಳಿದನು. ಅದಕ್ಕೆ ಆತನು " ಝಶೀಸಂಸ್ಥಾನಾಧೀಶ್ವರನಾದ ಗಂಗಾಧರರಾವ್ ಬಾಬಾಸಾಹೇಬರ ಪ್ರಥಮಪತ್ನಿಯು ಗತಿಸಿದಳು. ಆದುದರಿಂದ ನಿನ್ನ ಪುತ್ರಿಗೆ ಆ ಸಂಬಂಧವನ್ನು ವಿಚಾರಿಸು ' ಎಂದನು. ಅನಂತರ ಈ ವಿಷಯವನ್ನು ಕುರಿತು ಬಾಜೀರಾಯನು ಗಂಗಾಧರರಾವಿಗೆ ತಿಳಿಸಲು, ಆತನು ಸಮ್ಮತಿಸಿದನು. ಲಗ್ನವು ನಿಶ್ಚಯವಾದ ಮೇಲೆ ಆಪ್ತರಾದ ಕೆಲವರನ್ನು ಕರೆದುಕೊಂಡು ಮೊರೋಪಂತು ಝಶೀಗೆ ಹೋದನು. ೧೮೪೨ ನೆಯ ವರ್ಷದಲ್ಲಿ ಮನೂಬಾಯಿಯ ವಿವಾಹವು ಅತಿ ವೈಭವದೊಡನೆ ನಡೆಯಿತು. ಅನಂತರ ಮನೂಬಾಯಿಗೆ ಅತ್ತೆ ಯಮನೆಯಲ್ಲಿ * ಲಕ್ಷ್ಮಿಬಾಯಿ ' ಎಂದು ಹೆಸರಿಟ್ಟರು. ಗಂಗಾಧರರಾಯನು ಮೋರೋ ಸಂತಿಗೆ ಮುನ್ನೂರು ರೂಪಾಯಿಗಳ ಮಾಸಾಶನವನ್ನು ಏರ್ಪಡಿಸಿ ತನ್ನ ಬಳಿ ಯಲ್ಲಿಯೇ ಇರಿಸಿಕೊಂಡನು. ಅದರಿಂದ ಲಕ್ಷ್ಮೀಬಾಯಿಯು ಪುನಃ ಬ್ರಹ್ಮಾ ನರ್ತಕ್ಕೆ ಹೋಗಲಿಲ್ಲ. ಗಂಗಾಧರರಾಯನ ಅಣ್ಣನಾದ ರಘುನಾಥರಾಯನಕಾಲದಲ್ಲಿ ರಾಜ್ಯವು ವಿಶೇಷ ದುಃಸ್ಥಿತಿಗೆ ಬಂದುದರಿಂದ ಆ ರಾಜ್ಯಾಧಿಕಾರವನ್ನು ಆಂಗ್ಲಯರು ಪೂರ್ಣ ವಾಗಿ ವಹಿಸಿ, ರಾಜ್ಯದ ಋಣವನ್ನು ತೀರಿಸುತಲಿದ್ದರು. ಲಕ್ಷ್ಮೀಬಾಯಿಯ ವಿವಾಹಾನಂತರ, ಗಂಗಾಧರರಾಯನ ಯೋಗ್ಯತೆಯನ್ನು ನೋಡಿ ಬುಂದೇಲ್ ಖಂಡ್ ಪೊಲಿಟಿಕಲ್‌ ಏಜಂಟನಾದ ಕರ್ನಲ್ ಭೀರ್ಮ ದೊರೆಯು ರಾಜ್ಯ ಪಾಲನಾಧಿಕಾರವನ್ನು ಈತನಿಗೇ ವಹಿಸಿಕೊಟ್ಟನು. ಈತನು ತನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತ, ಅವರು ಸುಖ ವಾಗಿರಲು ಸರ್ವಪ್ರಯತ್ನಗಳನ್ನೂ ಮಾಡುತಲಿದ್ದನು. ಈತನ ಕಾಲದಲ್ಲಿ ಸಾಲ ವೆಲ್ಲವುತೀರಿ ಧನಾಗಾರದಲ್ಲಿ ಧನವು ದಿನದಿನಕ್ಕೂ ಅಭಿವೃದ್ದಿಯನ್ನು ಹೊಂದುತ ಲಿತ್ತು. ಪ್ರಜೆಗಳು ರಾಜದಂಪತಿಗಳನ್ನು ಹರಸುತ್ತ ಸುಖವಾಗಿ ಬಾಳುತಲಿದ್ದರು. ಲಕ್ಷ್ಮಿಬಾಯಿಯು ಪತಿಯೊಡನೆ ಕೆಲವುಕಾಲ ಸುಖವಾಗಿ ಇದ್ದಳು. ಅನಂತರ ಆಕೆಗೆ ಒಬ್ಬ ಪುತ್ರನು ಹುಟ್ಟಿ ಮೂರುತಿಂಗಳುಮಾತ್ರ ಜೀವಿಸಿ