ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಅಬಲಾ ಸಚ್ಚರಿತ್ರ ರತ್ನ ಮಾಲೆ. ನಡೆದು ಯವನರು ಸಂಪೂರ್ಣವಾಗಿ ಸೋತು ಓಡಿಹೋದರು. ಈ ವಿಷಯವು ಇತರ ರಾಜರಿಗೆ ತಿಳಿದೊಡನೆಯೇ ಅವರು ನವಾಬನ ಸೈನ್ಯಗಳನ್ನು ವಿಶೇಷವಾಗಿ ಬಾಧಿಸಲಾರಂಭಿಸಿದರು. ಹೀಗೆ ಮಂಡಲಾಧಿಪತಿಗಳಿಗೆ ನವಾಬನು ದುಷ್ಟನೆಂದು ತೋರಿದುದರಿಂದ ಆತನನ್ನು ರಾಜ್ಯ ಚ್ಯುತನನ್ನಾಗಿ ಮಾಡಬೇಕೆಂದು ನಿಶ್ಚಯಿಸುವದಕ್ಕಾಗಿ, ಎಲ್ಲರೂ ಜಗತ್ತೇಟಿನ ಮನೆಯಲ್ಲಿ ಸಭೆಯನ್ನು ಮಾಡಿದರು, ಕೃಷ್ಣಾ ಸಘರ್‌ ಸಂಸ್ಥಾನಾದಿ ಪತಿಗಳಾದ ರಾಜಕೃಷ್ಣ ಚಂದ್ರರಾಯರೂ, ಢಕ್ಕಾಸಂಸ್ಥಾನಾಧಿಪತಿಗಳಾದ ರಾಜರಾಜ ಬಲ್ಲವರೂ, ಪಾಟ್ನಾ ಸಂಸ್ಥಾನಾಧಿಪತಿಗಳಾದ ರಾಜಾರಾಯ ದುರ್ಲ ವರೂ, ನಾಟೂರು ರಾಜ್ಯಾಧಿಕಾರಿಣಿಯಾದ ರಾಣೀಭವಾನಿಯವರೂ ಸಭೆಯಲ್ಲಿ ಪ್ರಮುಖರಾಗಿದ್ದರು. ಅಲ್ಲಿ ಈ ಕೆಳಗೆ ಬರೆದಿರುವಂತೆ ಸಂಭಾಷಣೆ ನಡೆಯಿತೆಂದು ಒಬ್ಬ ಚರಿತ್ರಕಾರನು ಬರೆದಿರುತ್ತಾನೆ:- ಜಗತ್ತೇಟು:- ಸುರಾಜದೌಲನನ್ನು ಪದಚ್ಯುತನನ್ನಾಗಿಯೂ ಮಾರ್ಜಾ ಫರನನ್ನು ನವಾಬನನ್ನಾಗಿಯೂ ಮಾಡುವುದು ಅತ್ಯುತ್ತಮವಾದುದು. ಹೀಗೆ ಮಾಡಿದರೆ ಹಿಂದೂ ರಾಜರ ಅಭಿಮತದಂತೆ ನಡೆದುಕೊಳ್ಳುವೆನೆಂತಲೂ, ಪ್ರಜೆ ಗಳಿಗೆ ಹಿತವಾಗುವಂತೆ ರಾಜ್ಯವನ್ನು ಪರಿಪಾಲಿಸುವೆನೆಂತಲೂ ಮಿಾರ್ಜಾಫರನು ಪ್ರತಿಜ್ಞೆಯನ್ನು ಮಾಡಿರುತ್ತಾನೆ, ಮತ್ತು ಆತನು ಸುರಾಜದೌಲನ ಸೈನ್ಯಾಧಿಪತಿ ಯಾದುದರಿಂದ ಸೈನ್ಯವು ಆತನು ಹೇಳಿದಂತೆ ಕೇಳುವುದು. ಆದಕಾರಣ ಮಾರ್ಜಾಫರನನ್ನು ರಕ್ತಪಾತವಿಲ್ಲದೆ ನವಾಬನನ್ನಾಗಿ ಮಾಡಬಹುದು. ರಾಣೀಭನಾನಿ:- ತುರುಷ್ಯನನ್ನು ವಂಗ ದೇಶಾಧಿಪನನ್ನಾಗಿ ಮಾಡುವುದ ಕ್ಕಿಂತ ಹೈಂದವನನ್ನು ಏಕೆ ಮಾಡಬಾರದು, ನಷ್ಟವಾದ ಸ್ವಾತಂತ್ರವನ್ನು ಪುನಃ ಸಂಪಾದಿಸಿಕೊಳ್ಳುವುದಕ್ಕೆ ಇದೇ ಸಮಯವೆಂದು ನನ್ನ ತಾತ್ಪರ್ಯವು. ರಾಜಾ ಕೃಷ್ಣಚಂದ್ರನು:- ರಾಣಿಯವರೆ !! ತಾವು ಹೇಳಿದ ಸಲಹೆಯು ಬಹು ಯೋಗ್ಯವಾದುದು. ಸ್ವಾತಂತ್ರವು ಎಲ್ಲರಿಗೂ ಪ್ರಿಯವಾದುದೇ ಹೌದು. ಆದರೆ ನಾವು ಅನೇಕ ವರ್ಷಗಳಿಂದ ಪರತಂತ್ರರಾಗಿದ್ದೇವೆ. ನಮ್ಮ ಕೀರ್ತಿಯು ನಷ್ಟವಾಗಿದೆ. ಪರರಾಷ್ಟ್ರಗಳನ್ನು ಧಿಕ್ಕರಿಸಿ, ಸ್ವಸಂರಕ್ಷಣೆಯನ್ನು ಮಾಡಿಕೊಳ್ಳಲು ನಾವು ಅಸಮರ್ಥರು, ನಮ್ಮಲ್ಲಿ ಐಕಮತ್ಯವಿಲ್ಲ. ಪರಸ್ಪರ ದ್ವೇಷಗಳು ಹೆಚ್ಚಾ ಗಿವೆ. ಆದುದರಿಂದ ಹಿಂದುವು ಬಂಗಾಳೆಗೆ ರಾಜನಾದರೆ ನಮ್ಮಲ್ಲಿ ನಾವು ಕಲ ಹಿಸಿ, ಒಬ್ಬರನ್ನೊಬ್ಬರು ಸಂಹರಿಸಿಕೊಳ್ಳುವಂತಾಗುವುದು, ಇದನ್ನು ನೋಡಿ ಮರಾಟೆಯವರು ನಮ್ಮ ಮೇಲೆ ದಂಡೆತ್ತಿ ಬಂದು ಮರಳಿ ನಮ್ಮನ್ನು ಪರತಂತ್ರರ