ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಹಲ್ಯಾಬಾಯಿ ಹೋಳಕರ್, ೨ ಬಾಯಿಯ ಪತಿಯು, ಈತನೂ ಸಹ ತಂದೆಯಂತೆಯೇ ಶೌರ ಧೈರ್ಯ ಗಳುಳ್ಳವನಾಗಿ ಖ್ಯಾತಿಯನ್ನು ಪಡೆದನು. (೨) ಅಹಲ್ಯಾಬಾಯಿಯ ಸಂಸಾರಸುಖವು,-ದುಃಖ ಪರಂಪರೆ ಗಳಿಂದಕೂಡಿದ ಈ ಚರಿತ್ರಾತ್ಮಕವಾದ ನಾಟಕದಲ್ಲಿ ಸಂಸಾರ ಸುಖವೆಂಬ ಈ ಎರಡನೆಯ ಅಂಕವು ಮರಳುಮಯವಾಗಿಯೂ ಪ್ರಚಂಡ ಪ್ರತಾಪ ಮಾರ್ತಾಂಡ ಕಿರಣಗಳಿಂದ ತಪ್ತವಾಗಿಯೂ ಭಯಂಕರವಾಗಿಯೂ ಇರುವ ನಿರ್ಜನ ಪ್ರದೇಶ ದಲ್ಲಿ, ನೆಲದಮೇಲೆ ಕಾಲಿಟ್ಟರೆ ಅ೦ಗಾಲು ಬೊಬ್ಬೆಯಾಗುವಂತೆ ಸುಡುವ ಮಧ್ಯಾಹ್ನ ಸಮಯದಲ್ಲಿ ಪ್ರವಾಸವನ್ನು ಮಾಡುವ ಪಥಿಕನಿಗೆ ಮಾರ್ಗದಲ್ಲಿ ವಿಸ್ತೀರ್ಣ ಮಾದ ಆವವೃಕ್ಷ ಸಮೂಹದ ದಟ್ಟವಾದ ನೆಳಲೂ, ಶೀತಳವಾದ ಜಲಾಶ ಯವೂ ಕಾಣಿಸಿದರೆ ಎಷ್ಟು ಆನಂದವನ್ನು ಉಂಟುಮಾಡುವುದೊ ಅಷ್ಟು ಆನಂದವ ನ್ನುಂಟು ಮಾಡುತ್ತದೆ. ಅಹಲ್ಯಾಬಾಯಿಯ ಜೀವಿತಕಾಲದಲ್ಲಿ ಆಕೆಯ ವಿವಾಹ ವಾದಂದಿನಿಂದ ಹತ್ತು ವರುಷಗಳವರೆಗೂ ನಡೆದ ಕಾಲವು ಸುಖಕರವಾದ ಕಾಲ ವೆಂದು ಹೇಳಬಹುದು, ಆಕೆಯು ವಿವಾಹವಾದದ್ದು ಮೊದಲ್ಗೊಂಡು ವಿಶೇಷ ವಾಗಿ ಅತ್ತೆ ಯಮನೆಯಲ್ಲಿಯೇ ಇರುತಲಿದ್ದಳು. ಆಕೆಯು ಬಾಲ್ಯದಿಂದಲೂ ಬಡವರಮನೆಯಲ್ಲಿಯೇ ಬೆಳೆದವಳಾದರೂ, ವಿದ್ಯಾವತಿಯೂ ಚತುರಳೂ ಆದುದ ರಿಂದ ಶ್ವಶುರಗೃಹವನ್ನು ಪ್ರವೇಶಿಸಿದೊಡನೆಯೇ ರಾಜಯುವತಿಯರಿಗೆ ಶೋಭಿ ಸುವ ಸದ್ಗುಣಗಳನ್ನೆಲ್ಲ ಕಲಿತುಕೊಂಡಳು. ಮಲ್ಲಾರಿರಾಯನು ಸೊಸೆಯಾದ ಅಹಲ್ಯಾಬಾಯಿಯನ್ನು ಬಹಳ ಪ್ರೀತಿ ಸುತಲಿದ್ದನು. ಈಕೆಯು ಆತನ ಸೇವೆಯನ್ನು ಭಕ್ತಿಯೊಡನೆ ನೆರವೇರಿಸುತ, ಆತನ ಆಜ್ಞೆಯನ್ನು ಮಾರದೆ ನಡೆದುಕೊಳ್ಳುತಲಿದ್ದಳು, ಈಕೆಯು ಗೃಹಪ್ರವೇಶ ವನ್ನು ಮಾಡಿದ್ದು ಮೊದಲ್ಗೊಂಡು ಮಲ್ಲಾರಿರಾಯನಿಗೆ ಅನೇಕ ಯುದ್ಧಗಳಲ್ಲಿ ಜಯವು ಪ್ರಾಪ್ತವಾದುದರಿಂದ ಆತನು ತನ್ನ ಸೊಸೆಯು ಜಯಲಕ್ಷ್ಮಿಯ ಅವತಾರ ವೆಂದೆಣಿಸಿ, ಯುದ್ಧಕ್ಕೆ ಹೊರಡುವುದಕ್ಕೆ ಪೂರ್ವದಲ್ಲಿ ಅಹಲ್ಯಾಬಾಯಿಯ ಸಮ್ಮತಿ ಯನ್ನು ಪಡೆದು ಹೊರಡುತಲಿದ್ದನು. ಈ ಪ್ರಕಾರವಾಗಿ ಅಹಲ್ಯಾಬಾಯಿಯು ಮಾವಂದಿರ ಪೂರ್ಣ ಕೃಪೆಯನ್ನು ಪಡೆದಳು. ಈಕೆಯ ಅತ್ತೆಯಾದ ಗೌತಮಾಬಾಯಿಯು ಗೃಹಕಾರ್ಯದಲ್ಲಿ ಬಹು ದಕ್ಷಳಾದರೂ ಕೋಪಸ್ವಭಾವವುಳ್ಳವಳಾಗಿದ್ದಳು. ವಿವಾಹವಾದ ಒಡನೆಯೇ ಸೂಕ್ಷ್ಮ ಬುದ್ಧಿಯುಳ್ಳ ಅಹಲ್ಯಾಬಾಯಿಯು ಅತ್ತೆಯ ಸ್ವಭಾವವನ್ನು ಅರಿತು ಆಕೆಗೆ ಆಗ್ರಹವುಂಟಾಗದಂತೆ ನಡೆದುಕೊಳ್ಳು ತಲಿದ್ದಳು. ಅತ್ತೆಯ ಸದ್ದು ಣ ಗಳನ್ನು ಗ್ರಹಿಸುತ್ತ ಆಕೆಯ ಅಭೀಷ್ಟದಂತೆ ನಡೆಯುತ್ತ, ಆಕೆಯಿಂದ ಸದಾ ಆಶೀ ರ್ವಚನಗಳನ್ನು ಪಡೆಯುತಲಿದ್ದಳು.